ಇನ್ಮುಂದೆ ಹೊಡೆಯಲ್ಲ, ಬಡಿಯಲ್ಲ ವೀಡಿಯೋ ಮಾಡ್ತೀವಿ, ಕೇಸ್ ಹಾಕೀವಿ, ಅಂಗಡಿ ಲೈಸೆನ್ಸ್ ರದ್ದು ಮಾಡಲು ಬರ್ತೀವಿ ಎಂದು ಪಿಎಸ್‌ಐ ಸುನೀಲ್‌ಕುಮಾರ್ ವರ್ತಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಚಿತ್ರದುರ್ಗ(ಏ.30): ಇನ್ಮುಂದೆ ಹೊಡೆಯಲ್ಲ, ಬಡಿಯಲ್ಲ ವೀಡಿಯೋ ಮಾಡ್ತೀವಿ, ಕೇಸ್ ಹಾಕೀವಿ, ಅಂಗಡಿ ಲೈಸೆನ್ಸ್ ರದ್ದು ಮಾಡಲು ಬರ್ತೀವಿ ಎಂದು ಪಿಎಸ್‌ಐ ಸುನೀಲ್‌ಕುಮಾರ್ ವರ್ತಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಹೊಸದುರ್ಗ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಲಾಕ್‌ಡೌನ್‌ಗೆ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ವರ್ತಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
undefined
ಸಿಎಂ, ಕೊರೋನಾ ವಾಯರಿಯರ್ಸ್‌ಗೆ ಉಪನ್ಯಾಸಕನಿಂದ ಅವಮಾನ
ವರ್ತಕರು ಇನ್ನು ಮುಂದೆ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಜರ್ ಬಳಸಬೇಕು. ಅಲ್ಲದೆ, ತಮ್ಮ ಅಂಗಡಿಗಳ ಮುಂದೆ ಗ್ರಾಹಕರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲವಾದರೆ ನಮ್ಮ ಸಿಬ್ಬಂದಿ ಅಂತಹ ಅಂಗಡಿಯ ಮುಂದೆ ವೀಡಿಯೋ ಮಾಡಿ ಅವರ ವಿರುದ್ಧ ಕೇಸ್ ದಾಖಲು ಮಾಡುತ್ತೇವೆ. ಅಲ್ಲದೆ, ಆ ಅಂಗಡಿಯ ಲೈಸೆನ್ಸ್ ರದ್ದು ಮಾಡಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದರು.
ಕಳೆದ ಒಂದು ತಿಂಗಳಿಂದ ಮಾಡಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಜನಸಾಮಾನ್ಯರಿಗೂ ತುಂಬಾ ತೊಂದರೆಯಾಗಿದೆ. ಆದರೂ, ಅನಿವಾರ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ ತಾವುಗಳು ಇಲ್ಲಿಯವರೆಗೆ ಸಹಕರಿಸಿದ್ದೀರಿ. ಅದೇ ರೀತಿ ಮುಂದೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ನಮ್ಮೊಂದಿಗೆ ಕೈ ಜೋಡಿಸಿ. ಇಲಾಖೆಯ ನಿರ್ದೇಶನಗಳನ್ನು ತಪ್ಪದೆ ಪಾಲಿಸಿ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯನ್ನು ಕೊರೋನಾ ವರಿಯರ್ಸ್ ಎನ್ನುತ್ತಾರೆ. ಆದರೆ, ಹಸಿರು ವಲಯದಲ್ಲಿ ಜನಸಾಮಾನ್ಯರು ಹಾಗೂ ವರ್ತಕರು ನಿಜವಾದ ಕೊರೋನಾ ವಾರಿಯರ್ಸ್ ಆಗಿದ್ದಾರೆ ಎಂದರು.
ಅತಿಕ್ರಮ ಪ್ರವೇಶ, ಶಾಸಕಿಯನ್ನು ಜೈಲಿಗಟ್ಟುವಂತೆ ರೈತರ ಒತ್ತಾಯ
ಪಿಡಿಓ ನಾಗರಾಜಪ್ಪ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಗಮನ ನೀಡಲಾಗಿದೆ. ಒಂದು ವೇಳೆ ಎಲ್ಲಿಯಾದರೂ ತೊಂದರೆಯಾಗಿದ್ದರೆ, ಅದನ್ನು ಸರಿಪಡಿಸುತ್ತೇವೆ. ಸೋಂಕು ತಡೆಯಲು ಸಾಮಾಜಿಕ ಅಂತರ, ಸ್ವಚ್ಛತೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಿ ಎಂದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮತಿನಿರಂಜನಮೂರ್ತಿ, ವರ್ತಕರು ಭಾಗವಹಿಸಿದ್ದರು.