ಕೊರೋನಾ ವೈರಸ್ ವಿರುದ್ಧ ಜನಪ್ರತಿನಿಧಿಗಳು, ವೈದ್ಯರೂ, ಪೊಲೀಸರು ಸೇರಿ ಎಲ್ಲರೂ ಹೋರಾಡುತ್ತಿರುವಾಗ ಚಿಕ್ಕಮಗಳೂರಿನ ಉಪನ್ಯಾಸಕರೊಬ್ಬರು ಬೇಕಾಬಿಟ್ಟಿ ಪೋಸ್ಟ್ ಹಾಕಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏನು ಪೋಸ್ಟ್ ಇಲ್ಲಿ ಓದಿ.
ಚಿಕ್ಕಮಗಳೂರು(ಏ.30): ಕೊರೋನಾ ವೈರಸ್ ವಿರುದ್ಧ ಜನಪ್ರತಿನಿಧಿಗಳು, ವೈದ್ಯರೂ, ಪೊಲೀಸರು ಸೇರಿ ಎಲ್ಲರೂ ಹೋರಾಡುತ್ತಿರುವಾಗ ಚಿಕ್ಕಮಗಳೂರಿನ ಉಪನ್ಯಾಸಕರೊಬ್ಬರು ಬೇಕಾಬಿಟ್ಟಿ ಪೋಸ್ಟ್ ಹಾಕಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೊರೊನಾ ವಾರಿಯರ್ ಹಾಗೂ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ. ಸಿಎಂ ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಪದವಿ ಪೂರ್ವ ಉಪನ್ಯಾಸಕ ಮಂಜುನಾಥ ಅವರನ್ನು ಅಮಾನತು ಮಾಡಲಾಗಿದೆ.
ಸಿಎಂ, ಕೊರೋನಾ ವಾಯರಿಯರ್ಸ್‌ಗೆ ಉಪನ್ಯಾಸಕನಿಂದ ಅವಮಾನ
ಬಿ.ಎಸ್ ಮಂಜುನಾಥ್ ಸಿಎಂ ವಿರುದ್ಧ ಪೋಸ್ಟ್ ಮಾಡಿದ ಉಪನ್ಯಾಸಕ. ಜೀವಶಾಸ್ತ್ರ ಉಪನ್ಯಾಸಕ ಬಿಎಸ್ ಮಂಜುನಾಥ್ ಚಿಕ್ಕಮಗಳೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಪದವಿಪೂರ್ವ ಶಿಸ್ತು ಪ್ರಾಧಿಕಾರ ಅಮಾನತು ಆದೇಶ ಹೊರಡಿಸಿದ್ದು, ಮಂಜುನಾಥ ಅವರನ್ನು ಅಮಾನತು ಮಾಡಿದೆ. 'ಹಲೋ ಸಿ ಎಂ ಸಾಹೇಬ್ರೆ ಫ್ರೀ ಇದ್ದೀರಾ..! ಕೊರೊನಾ ಪರಿಹಾರಕ್ಕೆ ಜನರ ಹತ್ತಿರ ದುಡ್ಡು ಕೇಳ್ತಿದ್ದೀರಿ. ದುಡ್ಡು ಎಲ್ಲಿದೆ ಅಂತ ಲಿಸ್ಟ್ ಇಲ್ಲಿದೆ ನೋಡಿ..!' ಎಂದು ಸಿಎಂ ವಿರುದ್ಧ ಪೋಸ್ಟ್ ಮಾಡಿದ ಆಡಿಯೋ ಕ್ಲಿಪ್ ಎಲ್ಲೆಡೆ ವೈರಲ್ ಆಗಿತ್ತು.