ಗೃಹಿಣಿ ಜೊತೆ ಪೊಲೀಸ್ ಅಫೇರ್ : ವಿಡಿಯೋ ಇಟ್ಕೊಂಡು ಬೆದರಿಸಿ ಇಬ್ರೂ ಪರಾರಿ?

Kannadaprabha News   | Asianet News
Published : Aug 27, 2020, 04:12 PM ISTUpdated : Aug 27, 2020, 05:02 PM IST
ಗೃಹಿಣಿ ಜೊತೆ ಪೊಲೀಸ್ ಅಫೇರ್ : ವಿಡಿಯೋ ಇಟ್ಕೊಂಡು ಬೆದರಿಸಿ ಇಬ್ರೂ ಪರಾರಿ?

ಸಾರಾಂಶ

ನನ್ನ ಬಳಿ ನಿನ್ನ ಹೆಂಡ್ತಿ ಜೊತೆ ಇರುವ ವಿಡಿಯೋ ಫೊಟೊಗಳಿವೆ ಎಂದು ಬೆದರಿಸಿ ಎರಡು ಮಕ್ಕಳ ತಾಯಿ ಜೊತೆ ಪೊಲೀಸಪ್ಪನೋರ್ವ ಪರಾರಿಯಾಗಿದ್ದಾನೆ. ತನ್ನ ಹೆಂಡ್ತಿ ಹುಡುಕಿಕೊಡಿ ಎಂದು ಪತಿ ಪೊಲೀಸರ ಮೊರೆ ಹೋಗಿದ್ದಾನೆ.

ಮಂಡ್ಯ(ಆ.27): ಪೊಲೀಸ್ ಪೇದೆಯೊಬ್ಬನ ಜೊತೆ ಗೃಹಿಣಿಯೋರ್ವಳು ಪರಾರಿಯಾಗಿದ್ದು, ಆಕೆಯನ್ನು ಪತ್ತೆ ಮಾಡಿಕೊಡುವಂತೆ ಪತಿರಾಯನೊಬ್ಬ ಪೊಲೀಸರಿಗೆ ದೂರು ನೀಡಿರುವ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮುಳ್ಳೂರು ಗ್ರಾಮದ ನಿವಾಸಿ ದೂರು ನೀಡಿದ್ದಾರೆ.

ಏನಾಯ್ತು..? ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯನಿರ್ವಹಿಸುತ್ತಿರುವ ಕೊಳ್ಳೆಗಾಲ ಮೂಲದವ ಇಲ್ಲಿನ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ. ಆಕೆಯೊಂದಿಗೆ ಸಲುಗೆ ಬೆಳೆದು ಇಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು ಎಂದು ಹೇಳಲಾಗಿದೆ.

ಆತನೊಬ್ಬ ಹುಡುಗಿಯರ ಹುಚ್ಚ, ಐದು ವರ್ಷದ ಪ್ರೀತಿ, ಫೇಸ್ ಬುಕ್ ಪೋಸ್ಟ್!...

ಇಬ್ಬರೂ ಈ ಹಿಂದೆ ಎರಡು ಬಾರಿ ಪರಾರಿಯಾಗಿದ್ದರು. ನಂತರದ ದಿನಗಳಲ್ಲಿ ಅವರನ್ನು ಕರೆಸಿ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ ಗಂಡನೊಂದಿಗೆ ಕಳಿಸಲಾಗಿತ್ತು. ಆದರೂ ಪೇದೆ ಮತ್ತು ಮಹಿಳೆ ತಮ್ಮ ಚಾಳಿ ಬಿಟ್ಟಿರಲಿಲ್ಲ. ಮತ್ತೆ ಮೂರನೇ ಬಾರಿ ಮನೆಯಿಂದ ಪರಾರಿಯಾಗಿದ್ದಾರೆ. 

ಜೇವರ್ಗಿ: ಕುಡಿದ ನಶೆಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ.

ನಿಮ್ಮದೇ ಇಲಾಖೆಯಲ್ಲಿ ಕೆಲಸ ಮಾಡುವ ಪೇದೆಯ ವಿರುದ್ಧ ಕ್ರಮ ಕೈಗೊಂಡು ನನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಪತಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಪತ್ನಿಯೊಂದಿಗೆ ಇದ್ದ ಫೋಟೊ ಹಾಗೂ ವಿಡಿಯೋಗಳು ತನ್ನ ಬಳಿ ಇದೆ ಎಂದು ಬೆದರಿಸಿ ತನ್ನೊಂದಿಗೆ ಕರೆದೊಯ್ದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

"

PREV
click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?