ರೇಸ್‌ ಕೋರ್ಸ್‌ನಲ್ಲಿ ರೌಡಿಗಳಿಂದ ಬೆಟ್ಟಿಂಗ್‌ ದಂಧೆ, ಸಿಸಿಬಿ ದಾಳಿಗೆ ಪೊಲೀಸ್‌ ಆಯುಕ್ತರ ಪ್ರತಿಕ್ರಿಯೆ

By Gowthami K  |  First Published Jan 13, 2024, 5:14 PM IST

ಟರ್ಫ್ ಕ್ಲಬ್ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿಕೆ ನೀಡಿದ್ದು, ರೌಡಿಗಳು ಹಾಗೂ ಅನಧಿಕೃತ ವ್ಯಕ್ತಿಗಳ ಮೂಲಕವೂ ಬೆಟ್ಟಿಂಗ್ ನಡೆಯುತ್ತಿತ್ತು ಎಂದಿದ್ದಾರೆ.


ಬೆಂಗಳೂರು (ಜ.13): ಟರ್ಫ್ ಕ್ಲಬ್ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿಕೆ ನೀಡಿದ್ದು, ಯಾವುದೇ ರಸೀದಿ ಇಲ್ಲದೇ ಬೆಟ್ಟಿಂಗ್ ನೀಡದೇ ನಡೆಸಲಾಗುತ್ತಿತ್ತು. ರೌಡಿಗಳು ಹಾಗೂ ಅನಧಿಕೃತ ವ್ಯಕ್ತಿಗಳ ಮೂಲಕವೂ ಬೆಟ್ಟಿಂಗ್ ನಡೆಯುತ್ತಿತ್ತು. ಸಿಸಿಬಿ ತಂಡದ ವಿಶೇಷ ವಿಚಾರಣೆ ದಳ ದಾಳಿ ಮಾಡಿತ್ತು. ಬಿಟಿಸಿಯಲ್ಲಿ ಅನಧಿಕೃತವಾಗಿ ಬೆಟ್ಟಿಂಗ್ ನಡೆಸಲಾಗ್ತಿತ್ತು. ಯಾವುದೇ ಡಾಕ್ಯುಮೆಂಟ್, ರಷೀದಿ ಇಟ್ಟುಕೊಳ್ಳದೇ ಹಣದ ವ್ಯವಹಾರ ನಡೆಸಲಾಗಿತ್ತು. ಈ ಹಿನ್ನಲೆ ದಾಳಿ‌ ಮಾಡಿ  3ಕೋಟಿ 45ನಗದು ಹಣ ವಶಪಡೆಸಿಕೊಳ್ಳಲಾಗಿದೆ ಎಂದಿದ್ದಾರೆ.

ಶೀಲ‌ ಶಂಕಿಸಿ ಪತ್ನಿ ಕೊಲೆ ಮಾಡಿದ ಗಂಡ, ಇಬ್ಬರು ಹೆಣ್ಣು ಮಕ್ಕಳು ಅನಾಥ

Latest Videos

undefined

ಪ್ರಕರಣ ಸಂಬಂಧ  66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ನೊಟೀಸ್ ನೀಡಲಾಗಿದೆ. ಸೆಕ್ಷನ್ 41ಅಡಿ ನೊಟೀಸ್ ನೀಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ. ಅಕ್ರಮ ವ್ಯವಹಾರದ ಲಾಭ ಯಾರು ಪಡೆದುಕೊಳ್ತಿದ್ದಾರೆ..? ಇದರ ಹಿಂದೆ ಯಾರಿದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಈ ರೀತಿ ಅಕ್ರಮ‌ ಬೆಟ್ಟಿಂಗ್ ನಿಂದ ಜಿಎಸ್ ಟಿ ವಂಚನೆ ಆಗಿದೆ. 28% ಜಿಎಸ್ ಟಿ ಸರ್ಕಾರಕ್ಕೆ ಕಟ್ಟಬೇಕು. ಆದ್ರೆ ಜಿಎಸ್ ಟಿ ತೆರಿಗೆ ವಂಚನೆ ಮಾಡಲಾಗಿದೆ. ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸ್ತಿದ್ದ ಮಾಹಿತಿ ಸಿಕ್ಕಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತೆ ಎಂದಿದ್ದಾರೆ.

ರೇಸ್ ಕೋರ್ಸ್ ಬುಕ್ಕಿಂಗ್‌ ಕೌಂಟರ್‌ಗೆ ಸಿಸಿಬಿ ರೇಡ್, 3 ಕೋಟಿ 47 ಲಕ್ಷ ಹಣ ವಶಕ್ಕೆ!

ಶುಕ್ರವಾರ ಸಂಜೆ ಬೆಂಗಳೂರಿನ ರೇಸ್ ಕೊರ್ಸ್ ಮೇಲೆ‌ ಸಿಸಿಬಿ ದಾಳಿ ನಡೆಸಿತ್ತು. ಮಧ್ಯ ರಾತ್ರಿ 1 ಗಂಟೆ ವೇಳೆಗೆ ದಾಳಿಯನ್ನು ಅಂತ್ಯಗೊಳಿಸಲಾಗಿತ್ತು. ದಾಳಿ ವೇಳೆ ಸುಮಾರು 3 ಕೋಟಿ 47 ಲಕ್ಷ ಹಣ ಪತ್ತೆಯಾಗಿತ್ತು. ಲೆಕ್ಕವಿಲ್ಲದ ಹಣ ಹಾಗೂ ಜಿಎಸ್‌ಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದ್ದು ಕೆಲವರನ್ನ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ದಾಳಿಯಲ್ಲಿ ಸಿಕ್ಕವರ ಮೇಲೆ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
 

click me!