ರಾತ್ರಿ ಹೊತ್ತಲ್ಲಿ ಮನೆಗೆ ಕಲ್ಲು ಬೀಳುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿತ್ತು. ರಾತ್ರಿ ವೇಳೆ ಮನೆ ಮೇಲೆ ಕಲ್ಲು ತೂರಾಟ ನಡೆಯುವುದರಿಂದ ಜನ ಭಯ ಬಿದ್ದಿದ್ದರು. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಶಾಕ್ ಆಗಿದ್ದಾರೆ.
ಚಿಕ್ಕಮಗಳೂರು(ಜ.26): ರಾತ್ರಿ ಹೊತ್ತಲ್ಲಿ ಮನೆಗೆ ಕಲ್ಲು ಬೀಳುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿತ್ತು. ರಾತ್ರಿ ವೇಳೆ ಮನೆ ಮೇಲೆ ಕಲ್ಲು ತೂರಾಟ ನಡೆಯುವುದರಿಂದ ಜನ ಭಯ ಬಿದ್ದಿದ್ದರು. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಶಾಕ್ ಆಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹೊನ್ನವಳ್ಳಿ ರಾತ್ರಿ ವೇಳೆ ಮನೆ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ಶೃಂಗೇರಿ ಪೊಲೀಸರು ಪತ್ತೆ ಮಾಡಿದ್ದಾರೆ. ಕಳೆದ ಎರಡು ದಿನದಿಂದ ರಾತ್ರಿ ವೇಳೆಯಲ್ಲಿ ಮನೆಮೇಲೆ ಕಲ್ಲು ತೂರಾಟ ಮಾಡಿ ಪೊಲೀಸರು ಹಾಗೂ ಮನೆ ಮಾಲೀಕರ ನಿದ್ದೆಗೆಡಿಸಿದ್ದ ಪ್ರಕರಣ ಕೊನೆಗೂ ಅಂತ್ಯ ಕಂಡಿದೆ.
ಗಣರಾಜ್ಯೋತ್ಸವ ದಿನದಂದೇ ಅಂಬೇಡ್ಕರ್‌ಗೆ ಕಿಡಿಗೇಡಿಗಳಿಂದ ಅವಮಾನ
ತನಿಖೆ ನಡೆಸಿದ ಪೊಲೀಸರಿಗೆ ಅಪ್ರಾಪ್ತ ಬಾಲಕನೊಬ್ಬ ಕೃತ್ಯ ನಡೆಸಿರುವುದು ತಿಳಿದುಬಂದಿದೆ. ಅಪ್ರಾಪ್ತ ಬಾಲಕನ ಕಿಟಲೆಗೆ ಪೊಲೀಸರು, ಗ್ರಾಮಸ್ಥರು ಹೈರಾಣಾಗಿ ಹೋಗಿದ್ದಾರೆ.
ಶೃಂಗೇರಿ ತಾಲೂಕಿನ ಹೊನ್ನವಳ್ಳಿಯಲ್ಲಿ ಪ್ರಕರಣ ನಡೆದಿದ್ದು, ರಾಘವೇಂದ್ರ ಶೆಟ್ಟಿ ಎಂಬುವರ ಮನೆ ಮೇಲೆ ರಾತ್ರಿ ವೇಳೆ ಏಕಾಏಕಿ ಕಲ್ಲು ಬೀಳುತ್ತಿತ್ತು. ಕಲ್ಲು ತೂರಾಟ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕೋಪಿಷ್ಠ ಕೊಳಕು ಮಂಡಲ ಹಾವು ಕಡಿದು ತುಂಬು ಗರ್ಭಿಣಿ ಸಾವು