ಸಂಕ್ರಾಂತಿ ಹಬ್ಬದ ಹಿನ್ನೆಲೆ ಎಲ್ಲೆಡೆ ಕಬ್ಬಿನ ಮಾರಾಟ ಹೆಚ್ಚಿದ್ದು, ಕಬ್ಬು ಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಹಾಗೆಯೇ ಕಬ್ಬಿನ ಬೆಲೆಯೂ ಹೆಚ್ಚಾಗಿದ್ದು, ರೈತರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಉಚಿತವಾಗಿ ಕಬ್ಬು ಹಂಚಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು(ಜ.14): ಸಂಕ್ರಾಂತಿ ಹಬ್ಬದ ಹಿನ್ನೆಲೆ ಎಲ್ಲೆಡೆ ಕಬ್ಬಿನ ಮಾರಾಟ ಹೆಚ್ಚಿದ್ದು, ಕಬ್ಬು ಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಹಾಗೆಯೇ ಕಬ್ಬಿನ ಬೆಲೆಯೂ ಹೆಚ್ಚಾಗಿದ್ದು, ರೈತರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನರಿಗೆ ಉಚಿತವಾಗಿ ಕಬ್ಬನ್ನು ಹಂಚಲಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಕಬ್ಬಿನ ಬೆಲೆ ಹೆಚ್ಚಿರುವಾಗ ಉಚಿತವಾಗಿ ಕಬ್ಬುಕೊಟ್ರೆ ಜನ ಏನ್ ಮಾಡ್ತಾರೆ..? ಕಬ್ಬು ಹಂಚುತ್ತಿದ್ದಾಗ ಜನರು ಕಿತ್ತಾಡಿಕೊಂಡ ಘಟನೆ ತಾಲೂಕಿನ ಮಲ್ಲಸಂದ್ರದ ಎಸ್.ಕೆ. ಕಲ್ಯಾಣ ಮಂಟಪದಲ್ಲಿ ನಡೆದಿದೆ.
ತುಮಕೂರು: ಗ್ರಾಮಗಳಲ್ಲೇ ಅಡಗಿವೆಯಂತೆ 20ಕ್ಕೂ ಹೆಚ್ಚು ಚಿರತೆ..!
ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ತಮ್ಮ ಆಪ್ತ ಹಾಲನೂರು ಅನಂತ ಎಂಬುವರ ಹುಟ್ಟುಹಬ್ಬ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಬ್ಬು ವಿತರಿಸಲು ಸೂಚಿಸಿದ್ದರು. ಅದರಂತೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಕಬ್ಬನ್ನು ಲಾರಿಯಲ್ಲಿ ತಂದು ವಿತರಣೆ ಮಾಡುತ್ತಿದ್ದರು.
ಕಬ್ಬಿನ ಜೊತೆಗೆ ಸೀರೆ ಬಾಗಿನವೂ ನೀಡಲಾಗುತಿತ್ತು. ಉಚಿತ ವಿತರಣೆಯ ಸುದ್ದಿ ತಿಳಿದ ಸಾವಿರಾರು ಮಹಿಳೆಯರು ಹಾಗೂ ಪುರುಷರು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಕಬ್ಬು ತೆಗೆದುಕೊಳ್ಳಲು ಮುಗಿ ಬಿದ್ದಾಗ ಪರಸ್ಪರ ಕಿತ್ತಾಟ ಕೂಡ ಮಾಡಿಕೊಂಡಿದ್ದಾರೆ. ಜನಸಂದಣಿಯಲ್ಲಿ ಪುಟ್ಟಮಕ್ಕಳು, ವೃದ್ಧೆಯರು ಸಿಲುಕಿ ಪ್ರಯಾಸಪಟ್ಟಿದ್ದಾರೆ.
5 ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ಎಚ್ಚರಿಕೆ ಸಂದೇಶ ರವಾನೆ