ಯುವಕರಿಗೆ ಉದ್ಯೋಗ ನೀಡಲು ಪಿಎಂಕೆವಿ ಯೋಜನೆ: ಸಂಸದ ಜಿ.ಎಸ್‌.ಬಸವರಾಜು

By Govindaraj S  |  First Published Sep 4, 2022, 9:32 PM IST

ಯುವ ಜನರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಪಡೆಯಲು ನೆರವಾಗಲೆಂದು ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೌಶಲ್‌ ವಿಕಾಸ್‌ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಂಸದ ಜಿ.ಎಸ್‌ ಬಸವರಾಜು ತಿಳಿಸಿದರು.


ತುಮಕೂರು (ಸೆ.04): ಯುವ ಜನರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಪಡೆಯಲು ನೆರವಾಗಲೆಂದು ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೌಶಲ್‌ ವಿಕಾಸ್‌ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಂಸದ ಜಿ.ಎಸ್‌ ಬಸವರಾಜು ತಿಳಿಸಿದರು. ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನಡೆದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪಿಎಂಕೆವಿವೈ 3.0 ಅಡಿ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಮತ್ತು ನೇರ ನೇಮಕಾತಿ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋವಿಡ್‌ ಸೋಂಕು ಜಗತ್ತನ್ನೇ ಅಲುಗಾಡಿಸಿದ ಹಾಗೇ ಭಾರತವನ್ನೂ ಸಹ ತಲ್ಲಣಗೊಳಿಸಿತ್ತು. ಭಾರತವು ಲಸಿಕೆಯನ್ನು ಕಂಡುಹಿಡಿದು ಮುಂಜಾಗ್ರತಾ ಡೋಸ್‌ ಸೇರಿ 3 ಲಸಿಕೆಗಳನ್ನು ಭಾರತದ ನಾಗರಿಕರಿಗೆ ನೀಡಲಾಗಿದೆ. ಕೋವಿಡ್‌ ಮಹಾಮಾರಿಯನ್ನು ತಡೆಗಟ್ಟಲು ತರಬೇತಿಯನ್ನು ಪಡೆದ ಆರೋಗ್ಯ ರಕ್ಷಕರನ್ನು ಭಾರತ ಬಯಸುತ್ತಿದೆ. ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಕೋವಿಡ್‌ ಕ್ರ್ಯಾಶ್‌ ಕೋರ್ಸ್‌ಗೆ ಸಂಬಂಧಿಸಿದ ಕೌಶಲ್ಯವನ್ನು ಪಡೆದಿರುವ ಅಭ್ಯರ್ಥಿಗಳು ಗ್ರಾಮಾಂತರ ಪ್ರದೇಶದ ಜನರನ್ನು ತಲುಪಬೇಕು. ಅವರ ಆರೋಗ್ಯ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರಲ್ಲದೇ ಈ ದಿಸೆಯಲ್ಲಿ ಸರ್ಕಾರದ ಸಹಕಾರ ಸದಾ ಇರುತ್ತದೆ ಎಂದರು.

Tap to resize

Latest Videos

ನಾನು ಮುಂದೆಯೂ ಮುರುಘಾ ಮಠಕ್ಕೆ ಹೋಗಿ, ದರ್ಶನ ಮಾಡುವೆ: ಎಂ.ಬಿ.ಪಾಟೀಲ್‌

ಇದಕ್ಕೂ ಮುನ್ನ ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿಶ್ವೇಶ್ವರ, ಜಿಲ್ಲಾ ಉದ್ಯೋಗಾಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲೆ ಡಾ. ರಜಿನಿ, ಅಪೋಲೋ ಕಂಪನಿಯ ಅಧಿಕಾರಿಗಳು ಮಾತನಾಡಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ನೈಪುಣ್ಯತೆ ಗಳಿಸಿರುವ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕಿ ಡಾ. ಪರಿಮಳ ಎಸ್‌. ಮರೂರ್‌, ಉಪನಿರ್ದೇಶಕಿ ಡಾ.ಎಂ.ಇ. ಗೀತಾಬಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎನ್‌. ಮಂಜುನಾಥ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಟಿ.ಎ. ವೀರಭದ್ರಯ್ಯ, ಡಿಎನ್‌ಬಿ ಕಾರ್ಯಕ್ರಮ ಸಂಯೋಜಕಿ ಡಾ. ಲೌರ್ಡು ಶೃತಿ ಎಫ್‌., ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಶ್ರೀನಿವಾಸ್‌ ಸೇರಿದಂತೆ ತರಬೇತುದಾರರು, ತರಬೇತಿ ಪೂರೈಸಿದ ವಿದ್ಯಾರ್ಥಿಗಳು ಹಾಜರಿದ್ದರು.

ಕೊರಟಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವೆ: ಶಾಸಕ ಪರಮೇಶ್ವರ್‌

ಕೌಶಲ್ಯಾಭಿವೃದ್ಧಿಯಲ್ಲಿ ಆರೋಗ್ಯ ತರಬೇತಿ ಪಡೆದು ಉದ್ಯೋಗ ಗಿಟ್ಟಿಸಿಕೊಂಡರೆ ನಿರುದ್ಯೋಗ ಪ್ರಮಾಣ ಕಡಿಮೆಯಾಗುತ್ತದೆ. ದೇಶಕ್ಕೆ ತಮ್ಮ ಸೇವೆಯೂ ಲಭ್ಯವಾಗುತ್ತದೆ. ಕೌಶಲ್ಯಾಭಿವೃದ್ಧಿಯಿಂದ ಬದುಕು ಕಟ್ಟಿಕೊಂಡು ಗ್ರಾಮೀಣ ಜನರ ಆರೋಗ್ಯದತ್ತ ಗಮನಹರಿಸಬೇಕು.
-ಜಿ.ಎಸ್‌. ಬಸವರಾಜು ಸಂಸದ

click me!