ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ವೈಟ್ ಪಿಲ್ಡ್ - ಕೆ ಆರ್ ಪುರ ಮೆಟ್ರೋ ಉದ್ಘಾಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರೀ ಸಿದ್ಧತೆಗಳು ನಡೆಯುತ್ತಿದೆ. ಸುತ್ತಮುತ್ತ 5 ರಸ್ತೆಗಳಲ್ಲಿ ಸಂಚಾರ ನಿರ್ಬಂಧಗೊಳಿಸಲಾಗಿದೆ. ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ವಿವರ ಇಲ್ಲಿದೆ.
ಬೆಂಗಳೂರು (ಮಾ.24): ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ವೈಟ್ ಪಿಲ್ಡ್ - ಕೆ ಆರ್ ಪುರ ಮೆಟ್ರೋ ಉದ್ಘಾಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರೀ ಸಿದ್ಧತೆಗಳು ನಡೆಯುತ್ತಿದೆ. ಸುತ್ತಮುತ್ತ 5 ರಸ್ತೆಗಳಲ್ಲಿ ಸಂಚಾರ ನಿರ್ಬಂಧಗೊಳಿಸಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಇನ್ನು ಮೆಟ್ರೋ ಲೋಕಾರ್ಪಣೆ ಹಿನ್ನೆಲೆಯಲ್ಲಿ ನವ ವಧುವಿನಂತೆ ವೈಟ್ ಫಿಲ್ಡ್ ಮೆಟ್ರೋ ನಿಲ್ದಾಣವನ್ನು ಸಿಂಗಾರ ಮಾಡಲಾಗಿದೆ. ಬಿಎಂಆರ್ಸಿಎಲ್ ಸಿಬ್ಬಂದಿಗಳೂ ಕೊನೆಯ ಹಂತದ ತಯಾರಿಯಲ್ಲಿ ನಿರತರಾಗಿದ್ದಾರೆ. ಪೊಲೀಸ್ ಸಿಬ್ಬಂದಿಯಿಂದ ಪ್ರತಿ ಹಂತದಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಗಳಿಂದ ತಪಾಸಣೆ ಮಾಡಲಾಗುತ್ತಿದೆ. ಪ್ರಧಾನಿಗಳಿಂದ ರೋಡ್ ಶೋ ಸಾಧ್ಯತೆ ಹಿನ್ನೆಲೆ ರಸ್ತೆಯುದ್ಧಕ್ಕೂ ಬ್ಯಾರಿಕೇಡ್ ಹಾಕಿ ತಯಾರಿ ನಡೆದಿದೆ. ದಿಣ್ಣೂರ್ ಕ್ರಾಸ್ ನಿಂದ ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದವರೆಗೂ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರಿಗೆ ಮೋದಿ ಸ್ವಾಗತಕ್ಕೆ ಅವಕಾಶ ನೀಡಲಾಗಿದೆ. ರಸ್ತೆಯುದ್ದಕ್ಕೂ ಬಿಜೆಪಿ ಬಾವುಟ ಬ್ಯಾನರ್ ಗಳು ರಾರಾಜಿಸುತ್ತಿದೆ.
ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತಡೆ, ಪರ್ಯಾಯ ಮಾರ್ಗ ವಿವರ ಇಲ್ಲಿದೆ:
ನಾಳೆ ಪ್ರಧಾನಮಂತ್ರಿ ಮೋದಿ ಬೆಂಗಳೂರು ಪ್ರವಾಸ ಜೊತೆಗೆ ವೈಟ್ ಫೀಲ್ಡ್ - ಕೆ ಆರ್ ಪುರ ನಡುವಿನ ಮೆಟ್ರೋ ರೈಲಿಗೆ ಚಾಲನೆ ನೀಡಲಿರುವ ಹಿನ್ನಲೆಯಲ್ಲಿ ವೈಟ್ ಫೀಲ್ಡ್ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತಡೆಹಿಡಿಯಲಾಗಿದೆ. ಹಾಗೂ ಕೆಲವು ಮಾರ್ಗಗಳ ಸಂಚಾರವನ್ನು ಪೊಲೀಸರು ಬದಲಾವಣೆ ಮಾಡಿದ್ದಾರೆ.
undefined
ವಾಹನ ಸಂಚಾರ ನಿರ್ಬಂಧ ಮಾಡಿದ ರಸ್ತೆಗಳು ಯಾವ್ಯಾವು?
ಸಂಚಾರ ಮಾರ್ಪಾಡು ಮಾಡಿದ ರಸ್ತೆಗಳು:
ಚಿತ್ರಗಳಲ್ಲಿ: ಮೋದಿಯಿಂದ ಉದ್ಘಾಟನೆಗೊಳ್ಳಲಿರುವ Whitefield Metro ನಿಲ್ದಾಣ ಮದುವಣಗಿತ್ತಿಯಂತೆ ಸಿಂಗಾರ!
ಈ ನಡುವೆ ವೈಟ್ ಫೀಲ್ಡ್ ಸುತ್ತಮುತ್ತ ಐದು ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಕೂಡ ನಿರ್ಬಂಧ ಮಾಡಲಾಗಿದೆ.
ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ‘ಕೆ.ಆರ್.ಪುರಂ’ ಹೆಸರು ‘ಕೆ.ಆರ್.ಪುರ’ ಎಂದು ಬದಲು
ಐದು ರಸ್ತೆಗಳಲ್ಲಿ ಗಳಲ್ಲಿ ಸಂಚಾರ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಭಾರಿ ವಾಹನಗಳಿಗೆ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ಅದರ ಪಟ್ಟಿ ಇಲ್ಲಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಭಾರಿ ವಾಹನಗಳ ಸಂಚಾರ ಮಾರ್ಪಾಡು ಮಾಡಲಾಗುತ್ತಿದೆ.