ತುಮಕೂರು ಮಠಕ್ಕೆ ಮೋದಿ ಖಾಸಗಿ ಭೇಟಿ: ಸಿದ್ಧಗಂಗಾ ಶ್ರೀ

Suvarna News   | Asianet News
Published : Dec 31, 2019, 01:01 PM ISTUpdated : Dec 31, 2019, 01:40 PM IST
ತುಮಕೂರು ಮಠಕ್ಕೆ ಮೋದಿ ಖಾಸಗಿ ಭೇಟಿ: ಸಿದ್ಧಗಂಗಾ ಶ್ರೀ

ಸಾರಾಂಶ

ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಇದು ಖಾಸಗಿ ಭೇಟಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ.

ತುಮಕೂರು(ಡಿ.31): ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಇದು ಖಾಸಗಿ ಭೇಟಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ.

"

ಸಿದ್ದಗಂಗಾ ಮಠಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗಸ್ವಾಮೀಜಿ ಹೇಳಿಕೆ ನೀಡಿದ್ದು, ಜನವರಿ 2 ರಂದು ಪ್ರಧಾನಿ ಮಠಕ್ಕೆ ಭೇಟಿ ನೀಡಲಿದ್ದಾರೆ. ತುಮಕೂರಿನಲ್ಲಿ ಅಧಿಕೃತ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಗದ್ದುಗೆ ದರ್ಶನ

ಪ್ರಧಾನಿ ಮೋದಿ ಪೂಜ್ಯರ ಗದ್ದುಗೆ ದರ್ಶನ ಮಾಡಲಿದ್ದಾರೆ. ಕೆಲವು ನಿಮಿಷಗಳ ಕಾಲ ವಿದ್ಯಾರ್ಥಿಗಳನ್ನ ಕುರಿತು ಮಾತನಾಡಲಿದ್ದಾರೆ. ಆದರೆ ಎಷ್ಟು ಹೊತ್ತಿಗೆ ಬರಲಿದ್ದಾರೆ ಎನ್ನುವುದು ನಿಗದಿಯಾಗಿಲ್ಲ. ದೆಹಲಿಯಲ್ಲಿ ಮಂಜು ಹೆಚ್ಚಾಗಿರುವುದರಿಂದ ವಿಮಾನ ಸಂಚಾರ ವ್ಯತ್ಯಾಸವಾಗ್ತಿದೆ. ದೆಹಲಿಯಿಂದ ಹೊರಟ ಮೇಲಷ್ಟೇ ಇಲ್ಲಿಗೆ ತಲುಪುವ ಸಮಯ ತಿಳಿಯಲು ಸಾಧ್ಯಾಗಲಿದೆ ಎಂದಿದ್ದಾರೆ.

ಮೋದಿ ಖಾಸಗಿ ಭೇಟಿ:

ಪ್ರಧಾನಿ ಮೋದಿ ಶ್ರೀಮಠಕ್ಕೆ ಖಾಸಗಿಯಾಗಿ ಭೇಟಿ ನೀಡಲಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಕಳೆದಬಾರಿ ಬಂದಾಗಲೂ ಮೋದಿ ಮಕ್ಕಳ ಜೊತೆ ಮಾತನಾಡಿದ್ದರು. ಈ ಬಾರಿಯೂ ಪ್ರಧಾನಿ ಮಕ್ಕಳ ಜೊತೆ 15 ರಿಂದ 20 ನಿಮಿಷ ಮಾತನಾಡಲಿದ್ದಾರೆ.

ಕರ್ನಾಟಕಕ್ಕೆ ರವಾನೆಯಾಗ್ತಿದೆ ಕೇರಳದ ತ್ಯಾಜ್ಯ

PREV
click me!

Recommended Stories

ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!
ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?