ಸಿನಿಮಾ ನಟರಂತೆ ಲಕ್ಷಾಂತರ ಅಭಿಮಾನಿಗಳ ಸಂಪಾದಿಸಿದ್ದ ರಾಕ್‌ ಸ್ಟಾರ್ ಹೋರಿ ಇನ್ನಿಲ್ಲ!

Published : Apr 06, 2024, 11:48 PM IST
ಸಿನಿಮಾ ನಟರಂತೆ ಲಕ್ಷಾಂತರ ಅಭಿಮಾನಿಗಳ ಸಂಪಾದಿಸಿದ್ದ ರಾಕ್‌ ಸ್ಟಾರ್ ಹೋರಿ ಇನ್ನಿಲ್ಲ!

ಸಾರಾಂಶ

ಸಿನಿಮಾ ನಟರಂತೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ 'ರಾಕ್ ಸ್ಟಾರ್' ಹೆಸರಿನ ಹೋರಿ ಸಾವು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರಿಗೆ ಸೇರಿದ  ರಾಕ್ ಸ್ಟಾರ್ (25) ಹೋರಿ

ಹಾವೇರಿ (ಏ.6): ಸಿನಿಮಾ ನಟರಂತೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ 'ರಾಕ್ ಸ್ಟಾರ್' ಹೆಸರಿನ ಹೋರಿ ಸಾವು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ.

ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರಿಗೆ ಸೇರಿದ  ರಾಕ್ ಸ್ಟಾರ್ (25) ಹೋರಿ. ಹಲವು ವರ್ಷಗಳಿಂದ ಯಾವುದೇ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ರೆ ರಾಕ್ ಸ್ಟಾರ್‌ ಹೋರಿಗೆ ಬಹುಮಾನ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು. ಸ್ಪರ್ಧೆ ಹೋದರೆ ಬಹುಮಾನ ಪಡೆಯದೇ ವಾಪಸ್ ಬಂದದ್ದೇ ಇಲ್ಲ. ಹೋದಕಡೆಯೆಲ್ಲ ಬಹುಮಾನ ತರುತ್ತದೆಂಬ ನಂಬಿಕೆ ಅಭಿಮಾನಿಗಳಲ್ಲಿತ್ತು. ಎಲ್ಲ ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಲಕ್ಷಾಂತರ ಅಭಿಮಾನಿಗಳು ಸಂಪಾದಿಸಿದ್ದ ರಾಕ್ ಸ್ಟಾರ್.

ಶಿಕಾರಿಪುರ: ಸ್ಪರ್ಧೆ ವೇಳೆ ಹೋರಿ ತಿವಿತದಿಂದ ವಿದ್ಯಾರ್ಥಿ ಸಾವು

ಹೋರಿ ಬೆದರಿಸುವ ಹಬ್ಬ ಎಲ್ಲೇ ನಡೆಯಲಿ ಆ ಸ್ಪರ್ಧೆಯಲ್ಲಿ ರಾಕ್ ಸ್ಟಾರ್‌ ಭಾಗವಹಿಸುತ್ತದೆ ಎಂದರೆ ಸಾಕು ಮಿಂಚಿನ ಓಟ ನೋಡಲೆಂದೇ ಅದರ ಅಭಿಮಾನಿಗಳು ದೂರದೂರಿನಿಂದ ಬಂದು ಕಾತರದಿಂದ ಕಾಯುತ್ತಿದ್ದರು. ಇತ್ತೀಚೆಗಷ್ಟೇ ಹಾವೇರಿ ನಗರದ ನಾಗಿನಮಟ್ಟಿಯಲ್ಲಿ ರಾಕಸ್ಟಾರ್ ಹೋರಿಯ 25 ನೇ  ಹುಟ್ಟು ಹಬ್ಬ ಆಚರಿಸಿಕೊಂಡಿತ್ತು. ಯೌವನದಲ್ಲಿದ್ದಾಗ ಗಟ್ಟಿಮುಟ್ಟಾಗಿದ್ದ ರಾಕ್ ಸ್ಟಾರ್ ಕಳೆದ ವರ್ಷದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು. ಬಳಿಕ ಹಬ್ಬಗಳಲ್ಲಿ ಭಾಗವಹಿಸುವುದು ನಿಲ್ಲಿಸಿದ್ದ ರಾಕ್ ಸ್ಟಾರ್. ಆದರೆ ಇಂದು ಇಹಲೋಕ ತ್ಯಜಿಸಿರುವುದು ಅಭಿಮಾನಿಗಳು ನೋವುಂಟು ಮಾಡಿದೆ. 

ನಾಳೆ  ಹಾವೇರಿಯಲ್ಲಿ ರಾಕಸ್ಟಾರ್ ಹೋರಿಯ ಅಂತ್ಯಕ್ರಿಯೆ ನಡೆಯಲಿದೆ.

PREV
Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು