'ಜನ ಸಂಕಷ್ಟದಲ್ಲಿದ್ದಾರೆ, ಆಸ್ತಿ ತೆರಿಗೆ ಪಾವತಿ ದಿನಾಂಕ ಮುಂದಕ್ಕೆ ಹಾಕಿ'

By Suvarna NewsFirst Published Apr 23, 2021, 5:09 PM IST
Highlights

ರಾಜ್ಯ ಮುಖ್ಯಕಾರ್ಯದರ್ಶಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿ‌ನೇಶ್ ಗುಂಡೂರಾವ್ ಪತ್ರ/  ಬೆಂಗಳೂರಲ್ಲಿ ಏಪ್ರಿಲ್ 30  ಆಸ್ತಿ ತೆರಿಗೆ ಪಾವತಿಗೆ ಕೊನೆ  ದಿನಾಂಕ ಹಿನ್ನೆಲೆ/ ಕೋವಿಡ್ ಸೋಂಕಿನ ಕಾರಣ ಮಹಾನಗರದ ಎಲ್ಲ ವರ್ಗದ ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಿದೆ/ ಕೋವಿಡ್ ಎರಡನೇ ಅಲೆಯ ಕಾರಣ ಕಳೆದ ಎರಡು ತಿಂಗಳಿಂದಲೂ ಸಹ ವ್ಯಾಪಾರ ನಡೆದಿಲ್ಲ/ ಆಸ್ತಿತೆರಿಗೆಯನ್ನು ಪಾವತಿ ದಿನಾಂಕ ವಿಸ್ತರಿಸಲು ಮನವಿ 

ಬೆಂಗಳೂರು(ಏ. 23) ಕೊರೋನಾ ನಡುವೆ ಕಾಂಗ್ರೆಸ್ ನಾಯಕ ದಿನೇಶ್  ಗುಂಡೂರಾವ್ ಪತ್ರದ ಮುಖೇನ ಮಹತ್ವದ ವಿಚಾರವೊಂದನ್ನು ಮುಂದಿಟ್ಟಿದ್ದಾರೆ ರಾಜ್ಯದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿ‌ನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

ಬೆಂಗಳೂರಲ್ಲಿ ಏಪ್ರಿಲ್ 30  ಆಸ್ತಿ ತೆರಿಗೆ ಪಾವತಿಗೆ ಕೊನೆ  ದಿನಾಂಕವಿದೆ ಕೋವಿಡ್ ಸೋಂಕು ಮಹಾನಗರದ ಎಲ್ಲ ವರ್ಗದ ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಿದೆ. ಕೋವಿಡ್ ಎರಡನೇ ಅಲೆಯ ಕಾರಣ ಕಳೆದ ಎರಡು ತಿಂಗಳಿಂದಲೂ ಸಹ ವ್ಯಾಪಾರ ನಡೆದಿಲ್ಲ. ಆಸ್ತಿತೆರಿಗೆಯನ್ನು ಪಾವತಿಸಲು ನಿಗದಿಪಡಿಸಲಾಗಿರುವ ದಿನಾಂಕವನ್ನು ಮೂರು ತಿಂಗಳವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಬಡವರಿಗೆ ಉಚಿತ ಆಹಾರ ಧಾನ್ಯ; ಕೇಂದ್ರದ ಕೊಡುಗೆ

ಎರಡನೇ ಅಲೆ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.  ಅಗತ್ಯ ಸೇವೆ ಹೊರತುಪಡಿಸಿ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ದಿನವೊಂದಕ್ಕೆ ಕರ್ನಾಟಕದಲ್ಲಿ  25  ಸಾವಿರ ಪ್ರಕರಣ ದಾಖಲಾಗುತ್ತಿದ್ದು ಆತಂಕ  ಹೆಚ್ಚಿಸಿದೆ.

ಭಾರತದಲ್ಲಿ ಒಂದೇ ದಿನ 3,32,730 ಹೊಸ ಕೊರೋನಾ ಸೋಂಕಿನ ಪ್ರಕರಣ ದಾಖಲಾಗಿದೆ. ಪ್ರಪಂಚದ ಲೆಕ್ಕದಲ್ಲಿ ಕೊರೋನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ. 

 

 

click me!