ಅಭಿಷೇಕ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್

Published : Oct 03, 2019, 10:32 AM IST
ಅಭಿಷೇಕ್‌ ಹುಟ್ಟುಹಬ್ಬಕ್ಕೆ  ಅಭಿಮಾನಿಗಳಿಗೆ ವಿಶೇಷ ಗಿಫ್ಟ್

ಸಾರಾಂಶ

ಅಂಬರೀಷ್ ಪುತ್ರ ಅಭಿಷೇಕ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ವಿಶೇಷ ಗಿಫ್ಟ್ ನೀಡಲಾಗುತ್ತಿದೆ. ಏನದು ಉಡುಗೊರೆ?

ಮಂಡ್ಯ[ ಅ.03]:  ಚಿತ್ರನಟ ಅಭಿಷೇಕ್‌ ಅಂಬರೀಷ್‌ ಹುಟ್ಟುಹಬ್ಬ ಪ್ರಯುಕ್ತ  ಇಂದು 15,000 ಸಸಿಗಳ ವಿತರಿಸಲಾಗುವುದು ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಟ್ಟುಹಬ್ಬಕ್ಕೆ ಕೇಕ್‌ ತರುವುದು ಹಾಗೂ ಬೆಂಗಳೂರಿಗೆ ಬಂದು ಶುಭಾಶಯ ಕೋರುವುದು ಬೇಡ. ಅದರ ಬದಲಿಗೆ ನಿಮ್ಮೂರಲ್ಲೇ ಒಂದೊಂದು ಗಿಡ ನೆಟ್ಟು ಅದರ ಫೋಟೋವನ್ನು ನನಗೆ ಕಳುಹಿಸಿಕೊಡಿ. ಆ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿ ಎಂದು ಸ್ವತಃ ಅಭಿಷೇಕ್‌ ಮನವಿ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೀಗಾಗಿ  ಹುಟ್ಟುಹಬ್ಬ ದಿನದಂದು ಸಸಿಗಳನ್ನು ನೆಡಲು ಮತ್ತು ವಿತರಿಸಲು ನಿರ್ಧರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ನಯೀಂ, ಟಿ.ಕೆ.ರಾಮಲಿಂಗಯ್ಯ, ಶಶಿಕುಮಾರ್‌, ಮಲ್ಲನಾಯಕನಕಟ್ಟೆಶಂಕರ್‌, ಹೊಂಬೇಗೌಡ, ಕಾರ್ತಿಕ್‌ ಇದ್ದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!