ಮಂಡ್ಯ ಗಣೇಶೋತ್ಸವದಲ್ಲಿ ಭಕ್ತರಿಗೆ ಸಿಕ್ತು ವಿಶೇಷ ಪ್ರಸಾದ

By Kannadaprabha NewsFirst Published Sep 5, 2019, 7:40 AM IST
Highlights

ಗಣೇಶೋತ್ಸವಕ್ಕೆ ಎಂತಹ ಮೂರ್ತಿ ಬೇಕು ಎಂದು ಎಲ್ಲರೂ ಯೋಚಿಸುತ್ತಾರೆ. ಮಂಡ್ಯದಲ್ಲಿ ಭಕ್ತರಿಗೆ ಪ್ರಸಾದ ನೀಡುವಾಗಲೂ ವಿನೂತನವಾಗಿ ಚಿಂತಿಸಿದ್ದಾರೆ. ಗಣೇಶೋತ್ಸವಕ್ಕೆ ಬಂದ ಭಕ್ತರೆಲ್ಲರಿಗೂ ವಿಶೇಷ ಪ್ರಸಾದವನ್ನು ಹಂಚಲಾಗಿದೆ. ವಿಶೇಷ ಪ್ರಸಾದವೇನು, ಅದನ್ನು ಹಂಚಿದ್ದೇಕೆ ಎಂದು ತಿಳಿಯಲು ಈ ಸುದ್ದಿ ಓದಿ.

ಮಂಡ್ಯ(ಸೆ.05): ಗೌರಿ-ಗಣೇಶನ ಹಬ್ಬದಲ್ಲಿ ಪ್ರತಿಷ್ಟಾಪಿಸಿದ ಗಣೇಶನಿಗೆ ಪೂಜೆ ಮಾಡಿದ ವೇಳೆ ಭಕ್ತರಿಗೆ ಪ್ರಸಾದ ನೀಡದೇ ಗಿಡಗಳನ್ನು ವಿತರಿಸಿ ಯುವಕರು ಮಾದರಿಯಾದ ಘಟನೆ ಮಳವಳ್ಳಿಯಲ್ಲಿ ನಡೆದಿದೆ.

ಪಟ್ಟಣದ ಎನ್‌ಇಎಸ್‌ ಬಡಾವಣೆಯಲ್ಲಿ ಪರಿಸರ ಪ್ರೇಮಿಗಳು ಪ್ರಸಾದ ನೀಡುವ ಬದಲು ಸುಮಾರು 400ಕ್ಕೂ ಹೆಚ್ಚು ಗಿಡಗಳನ್ನು ರಸ್ತೆಗಳಲ್ಲಿ ನಡೆವುದರ ಮೂಲಕ ಪರಿಸರ ಕಾÜಳಜಿಯೊಂದಿಗೆ ಗೌರಿ- ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಗಿಡನೆಡುವ ಹೊಸ ಚಾಲೆಂಜ್:

ಮಳವಳ್ಳಿ ತಾಲೂಕಿನಲ್ಲಿ ಸದ್ದು ಮಾಡುತ್ತಿರುವ ‘ಗಿಡನೆಡು.. ಮರಮಾಡು’ ಚಾಲೆಂಜ್‌ ಸ್ವೀಕರಿಸಿರುವ ಯುವಕರು ಗಿಡಗಳನ್ನು ನೆಡಲು ಮುಂದಾಗಿದ್ದಾರೆ. ತಹಸೀಲ್ದಾರ್‌ ಚಂದ್ರಮೌಳಿ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ್‌ ಮಾತನಾಡಿದರು. ಈ ವೇಳೆ ಸಬ್‌ ಇನ್ಸ್‌ ಪೆಕ್ಟರ್‌ ಮಂಜುನಾಥ್‌, ನಿವೃತ್ತ ಯೋಧ ಸಂತೋಷ್‌ ಸೇರಿದಂತೆ ನೂರಾರು ಯುವಕರು ‘ಗಿಡನೆಡು ಮರಮಾಡು’ ಚಾಲೆಂಜ್‌ ಸ್ವೀಕರಿಸಿದರು.

ಮಂಡ್ಯ : ಮುಂದೂಡಿಕೆಯಾಯ್ತು ಚುನಾವಣೆ

ಈ ವೇಳೆ ಪುರಸಭೆ ಸದಸ್ಯ ಪುಟ್ಟಸ್ವಾಮಿ, ಎ ಎಸ್‌ಐ ಲೋಕೇಶ್‌, ಪ್ರಾಂತರೈತ ಸಂಘದ ತಾಲೂಕು ಅಧ್ಯಕ್ಷ ಭರತ್‌ರಾಜ್, ಪೊಲೀಸ್‌ ಪ್ರಭು, ಪರಿಸರ ಪ್ರೇಮಿಗಳಾದ ಅವಿನಾಶ್‌ ಪ್ರಸನ್ನ, ಅಪ್ಪು, ಅಜಯ್‌ ಶೈಲೇಂದ್ರ, ಪತ್ರಕರ್ತರಾದ ಪುಟ್ಟಸ್ವಾಮಿ ಆರಾಧ್ಯ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

'ಯಾವ ಸಮಸ್ಯೆಯಾದ್ರೂ ಡಿಕೆಶಿ ಎದುರಿಸ್ತಾರೆ, BJP ಪಶ್ಚಾತಾಪ ಪಡುವ ದಿನ ಮುಂದಿವೆ'

click me!