Bengaluru: ಮೆಜೆಸ್ಟಿಕ್‌ನಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ: ಸಚಿವ ರಾಮಲಿಂಗಾ ರೆಡ್ಡಿ

Published : May 23, 2026, 10:07 AM IST
Ramalinga Reddy Majestic

ಸಾರಾಂಶ

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ವಾಣಿಜ್ಯ ಸಂಕೀರ್ಣದೊಂದಿಗೆ 3 ಅಂತಸ್ತಿನ ನೂತನ ಬಸ್ ನಿಲ್ದಾಣ ನಿರ್ಮಿಸುವ ಚಿಂತನೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇದರೊಂದಿಗೆ, ಹೊಸಕೋಟೆ ತಾಲೂಕಿನಲ್ಲಿ ಎರಡು ಎಲೆಕ್ಟ್ರಿಕ್ ಬಸ್ ಚಾರ್ಜಿಂಗ್ ಡಿಪೋಗಳನ್ನು ಸ್ಥಾಪಿಸಲು ಸ್ಥಳ ನಿಗದಿಪಡಿಸಲಾಗಿದೆ.

ಹೊಸಕೋಟೆ: ಬೆಂಗಳೂರು ಹೃದಯಭಾಗವಾದ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಬಸ್‌ಗಳ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಸಂಕೀರ್ಣ ಒಳಗೊಂಡ 3 ಅಂತಸ್ತಿನ ನೂತನ ಬಸ್ ನಿಲ್ದಾಣ ನಿರ್ಮಿಸುವ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ತರಬಹಳ್ಳಿ-ಲಕ್ಷ್ಮೀಪುರ ಗೇಟ್ ಬಳಿ 10 ಬಿಎಂಟಿಸಿ ವೇಗದೂತ ಬಸ್‌ಗಳ ಸಂಚಾರಕ್ಕೆ ನಿಶಾನೆ ತೋರಿ ಮಾತನಾಡಿ, ನಮ್ಮ ಬಳಿ ಇರುವ 7 ಸಾವಿರ ಬಸ್‌ಗಳು ಪ್ರತಿದಿನ 66 ಸಾವಿರ ಟ್ರಿಪ್ ಸಂಚರಿಸುತ್ತವೆ. ಆದರೆ, ಪ್ರತಿದಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ ಬಿಎಂಟಿಸಿ ಬಸ್ 10 ಸಾವಿರ ಟ್ರಿಪ್, ಕೆಎಸ್‌ಆರ್‌ಟಿಸಿ ಬಸ್ 3 ಸಾವಿರ ಟ್ರಿಪ್, ಪ್ರತಿ ಸೆಕೆಂಡ್ ಲೆಕ್ಕದಲ್ಲಿ ಸಂಚರಿಸುತ್ತವೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಇಲಾಖೆಗೆ ಸೇರಿದ 40 ಎಕರೆ ಜಾಗ ಇದ್ದು ಸುಸಜ್ಜಿತ ಅತ್ಯಾಧುನಿಕ 3 ಅಂತಸ್ತಿನ ವಾಣಿಕ್ಯ ಸಂಕೀರ್ಣದೊಂದಿಗೆ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಹೇಳಿದರು.

4 ಮಾರ್ಗಗಳಲ್ಲಿ 32 ‘ವಜ್ರ ವಿಸ್ತಾರ’ ಎಸಿ ಬಸ್‌ಗಳ ಸಂಚಾರ

ಸರ್ಕಾರ ಜಿಬಿಎ ವ್ಯಾಪ್ತಿಯಿಂದ 25 ಕಿಮೀವರೆಗೆ ಇದ್ದ ಬಿಎಂಟಿಸಿ ಸೇವೆಯನ್ನು 40 ಕಿಲೋ ಮೀಟರ್‌ವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಕನಕಪುರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ತುಮಕೂರಿಗೆ ಒಟ್ಟು 4 ಮಾರ್ಗಗಳಲ್ಲಿ 32 ‘ವಜ್ರ ವಿಸ್ತಾರ’ ಎಸಿ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಎಲೆಕ್ಟ್ರಿಕ್‌ ಬಸ್ ಚಾರ್ಚಿಂಗ್ ಡಿಪೋಗೆ ಸ್ಥಳ ನಿಗದಿ

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರದಲ್ಲಿ 5 ಎಕರೆ ಪ್ರದೇಶದಲ್ಲಿ ಮತ್ತು ಅನುಗೊಂಡನಹಳ್ಳಿ ಬಳಿ 2 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ಬಸ್ ಚಾರ್ಚಿಂಗ್ ಡಿಪೋ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಈಗಾಗಲೆ ಸ್ಥಳವನ್ನು ಸಹ ಗುರುತಿಸಲಾಗಿದೆ. ತ್ವರಿತವಾಗಿ ತಾಲೂಕಿನಲ್ಲಿ 2 ಎಲೆಕ್ಟ್ರಿಕ್‌ ಬಸ್ ಚಾರ್ಚಿಂಗ್ ಡಿಪೋ ಕಾರ್ಯಾರಂಭ ಮಾಡಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವತಿಯಿಂದ ಹೆಚ್.ಕ್ರಾಸ್ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಸಾರ್ವಜನಿಕರ ಸುಲಭ ಮತ್ತು ವೇಗದ ಪ್ರಯಾಣಕ್ಕಾಗಿ ನೂತನ ವೇಗದೂತ ಸೀಮಿತ ನಿಲುಗಡೆ (Limited Stop Express) ಬಸ್ ಸೇವೆಗಳಿಗೆ ಚಾಲನೆ ನೀಡಲಾಯಿತು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವತಿಯಿಂದ ಹೆಚ್.ಕ್ರಾಸ್ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಸಾರ್ವಜನಿಕರ ಸುಲಭ ಮತ್ತು ವೇಗದ ಪ್ರಯಾಣಕ್ಕಾಗಿ ನೂತನ ವೇಗದೂತ ಸೀಮಿತ ನಿಲುಗಡೆ (Limited Stop Express) ಬಸ್ ಸೇವೆಗಳಿಗೆ ಚಾಲನೆ ನೀಡಲಾಯಿತು.

ನೂತನ ಮಾರ್ಗಗಳು:

ಸಾರ್ವಜನಿಕರ ಸುಲಭ ಮತ್ತು ವೇಗದ ಪ್ರಯಾಣಕ್ಕಾಗಿ ನೂತನ ವೇಗದೂತ ಸೀಮಿತ ನಿಲುಗಡೆ (Limited Stop Express) ಬಸ್ ಸೇವೆಗಳಿಗೆ ಚಾಲನೆ ಸಚಿವರು ಚಾಲನೆ ನೀಡಿದರು.

1 ಟಿನ್ ಫ್ಯಾಕ್ಟರಿಯಿಂದ ಹೆಚ್.ಕ್ರಾಸ್

2 ಹೊಸಕೋಟೆಯಿಂದ ನೆಲಮಂಗಲ

PREV
Read more Articles on
click me!

Recommended Stories

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು; ಕ್ರೂಸರ್-ಲಾರಿ ನಡುವೆ ಡಿಕ್ಕಿ
Haveri: ಬಿತ್ತನೆ ಬೀಜಕ್ಕೆ ಕೃಷಿ ಕೇಂದ್ರ ಮುಂದೆ ಮಲಗಿದ ರೈತರು; ವಿಳಂಬ ಧೋರಣೆಗೆ ಆಕ್ರೋಶ