* ಬಂಗಾರದ ಸರ ನುಂಗಿದ ಸಾಕು ನಾಯಿ
* ಮನೆ ಮಾಲೀಕರು ನಾಯಿಗೆ ಸೆಕ್ಯೂರಿಟಿ ಕೊಡಬೇಕಾದ ಸ್ಥಿತಿಯಲ್ಲಿದ್ದಾರೆ.
* ಕಾರಟಗಿ ನಿವಾಸಿ ದಿಲೀಪ್ ಎನ್ನುವವರ ಮನೆಯಲ್ಲಿ ಘಟನೆ
ಕೊಪ್ಪಳ(ಜೂ. 11) ಈ ನಾಯಿ ಮನೆ ಮಾಲೀಕರ ಬಂಗಾರದ ಸರವನ್ನೆ ನುಂಗಿದೆ. ಕೊಪ್ಪಳದ ಜಿಲ್ಲೆ ಕಾರಟಗಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ.
ಕಾರಟಗಿ ನಿವಾಸಿ ದಿಲೀಪ್ ಎನ್ನುವವರ ಮನೆಯ ಶ್ವಾನ ಬಂಗಾರವನ್ನೇ ನುಂಗಿತ್ತು. ರಾತ್ರಿ ಮಲಗುವ ಮುನ್ನ ಬಂಗಾರದ ಸರ ಬಿಚ್ಚಿಟ್ಟು ದಿಲೀಪ್ ನಿದ್ರೆ ಮಾಡಿದ್ದರು. ಬೆಳಗಾಗುವಷ್ಟರಲ್ಲಿ ಬಂಗಾರದ ಚೈನ್ ತುಂಡು ತುಂಡು ಮಾಡಿ ಅರ್ಧವನ್ನು ಸಾಕು ನಾಯಿ ತಿಂದಿತ್ತು.
ಶ್ವಾನದೊಂದಿಗೆ ಜಾಲಿ ರೈಡ್ ಹೊರಟ ಯುವತಿಗೆ ಪೊಲೀಸರ ಕ್ಲಾಸ್
ಎರಡು ತೊಲೆ ಬಂಗಾರದ ಚೈನ್ ನುಂಗಿದ ಸಾಕು ನಾಯಿಯನ್ನು ಕೂಡಲೇ ವೈದ್ಯರ ಬಳಿ ಕರೆದೊಯ್ಯಲಾಗಿದೆ. ಆಪರೇಶನ್ ಬೇಡ ಎಂದ ವೈದ್ಯರು ಹಿಂದಕ್ಕೆ ಕಳಿಸಿದ್ದಾರೆ.
ಇದಾದ ಮೇಲೆ ಶ್ವಾನ ಬಹಿರ್ದೆಸೆ ಮೂಲ ತುಂಡು ತುಂಡು ಬಂಗಾರ ಹೊರಹಾಕಿದೆ. ನಾಯಿ ಹೊಟ್ಟೆಯೊಳಗಿರುವ ಇನ್ನೂ ಒಂದೂವರೆ ತೊಲೆ ಬಂಗಾರ ಇದೆ. ನಾಯಿ ಹೊಟ್ಟೆಯಲ್ಲಿ ಬಂಗಾರ ಇರೋದ್ರಿಂದ ನಾಯಿಗೆ ಮನೆ ಮಾಲೀಕರು ಸೆಕ್ಯೂರಿಟಿ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.