ರಾಮನಗರ (ಜೂ.11): ಕೊರೋನ ವಾರಿಯರ್ಸ್ ನೆರವಿಗೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಧಾವಿಸಿದ್ದಾರೆ. ರಾಮನಗರ ಜ್ಯೂನಿಯರ್ ಕಾಲೇಜು ಮೈದಾನದ ಬಳಿ ಇಂದು ನಡೆದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಸ್ಟಾಫ್ ನರ್ಸ್ ಸೇರಿದಂತೆ ಎಲ್ಲಾ ಕೊರೋನಾ ವಾರಿಯರ್ಸ್‌ಗೆ ಗೌರವಧನ, ಆಹಾರದ ಕಿಟ್, ಸ್ಟೀಂ ಮಿಷನ್ ಸೇರಿದಂತೆ ವಿವಿಧ ವಸ್ತುಗಳ ವಿತರಣೆ ಮಾಡಿದ್ದಾರೆ.
ಈ ವ ನಿಖಿಲ್ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಕೊರೋನಾದಿಂದ ರಾಜ್ಯದಲ್ಲಿ ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಹೆಚ್ಚು 30 ರಿಂದ 40 ವರ್ಷದ ಯುವಕರನ್ನು ಕಳೆದುಕೊಂಡಿದ್ದೇವೆ. ಪ್ರತಿಯೊಬ್ಬ ನಾಗರಿಕನಿಗೂ ವ್ಯಾಕ್ಸಿನೇಷನ್ ಹಾಕುವ ಕೆಲಸ ಆಗಬೇಕಿದೆ. ನಮ್ಮ ಶಾಸಕರ ಸಲಹೆಯಂತೆ ಮುಂದಿನ ವಾರದಿಂದ ನಮ್ಮ ತಾಲೂಕಿನಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭ ಮಾಡುತ್ತೇವೆ ಎಂದರು.
undefined
ರಾಮನಗರ : ಕೋವಿಡ್ ವಾರಿಯರ್ಸ್‌ಗೆ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು .
ಇಡೀ ರಾಮನಗರ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮಾಡುತ್ತೇವೆ. ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳ ಜೊತೆ ಈಗಾಗಲೇ ಮಾತನಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾವಿನ್ನು ಕೊರೋನಾದಿಂದ ಮುಕ್ತರಾಗಿಲ್ಲ, ಮೂರನೇ ಅಲೆ ಅತೀ ಶೀಘ್ರದಲ್ಲೇ ಪ್ರಾರಂಭ ಆಗುವ ಸಾಧ್ಯತೆ ಇದೆ. ನಿಮ್ಮ ಪ್ರಾಣ ಪಣಕ್ಕಿಟ್ಟು ಇಂದು ನೀವು ಹೋರಾಟ ಮಾಡಿತ್ತಿದ್ದೀರಿ. ಮುಂದಿನ ದಿನಗಳಲ್ಲೂ ಇದನ್ನು ಮುಂದು ವರೆಸಿ, ನಿಮ್ಮ ಪರ ನಾವಿರುತ್ತೇವೆ ಎಂದು ಕೊರೋನಾ ವಾರಿಯರ್ಸ್ಗೆ ನಿಖಿಲ್ ಮನವಿ ಮಾಡಿದರು.
ಇನ್ನು ಇದೇ ವೇಳೆ ಮಾತನಾಡಿದ ಅನಿತಾ ಕುಮಾರಸ್ವಾಮಿ ಇಡೀ ವಿಶ್ವವೇ ಕೊರೋನಾ ಸಮಸ್ಯೆಯಿಂದ ಕಂಗಾಲಾಗಿದೆ. ಜನ ಹೆತ್ತವರನ್ನ, ಒಡಹುಟ್ಟಿದವರನ್ನ ಕಳೆದುಕೊಂಡು ನೋವಿನಲ್ಲಿದ್ದಾರೆ. ಸತ್ತವರನ್ನ ನೋಡೋಕೆ ಹತ್ತಿರದವರು ಹೋಗದ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನೀವು ಧೈರ್ಯವಾಗಿ ನಿಮ್ಮ ಪ್ರಾಣ ಭಯ ಬಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೀರಿ. ನಮ್ಮ ಸೇವಾ ಮನೋಭಾವ ನಿಜಕ್ಕೂ ಮೆಚ್ಚುವಂತಹದ್ದು. ಭಗವಂತ ಆದಷ್ಟು ಬೇಗ ಕರುಣೆ ತೋರಿಸಿ ಈ ಕೆಟ್ಟ ಖಾಯಿಲೆ ನಿರ್ಮೂಲನೆ ಮಾಡಲಿ ಎಂದರು.
ಜನ ಸುಃಖ ಶಾಂತಿ, ನೆಮ್ಮದಿಯಿಂದ, ಆರೋಗ್ಯವಾಗಿ ಜೀವಿಸುವಂತಾಗಲಿ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ಫಲ ಸಿಗುತ್ತಿಲ್ಲ. ಈ ಬಗ್ಗೆ ನಾನು ಕುಮಾರಸ್ವಾಮಿ ಅವರ ಹತ್ತಿರವೂ ಮಾತನಾಡಿದ್ದೇನೆ. ಸರ್ಕಾರದಿಂದ ನೀಡುವ ಸಹಾಯ ಧನವನ್ನು ಹೆಚ್ಚು ಮಾಡಬೇಕು ಎಂದು ಬಹಳ ಸಲ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರುತ್ತದೆ ಖಂಡಿತವಾಗಲೂ ನಾವು ನಿಮ್ಮ ಕೈ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು.