ಚಿಕ್ಕಮಗಳೂರು: ಬಾಡೂಟಕ್ಕೆ ಹೋಗಲು ಪೊಲೀಸರಿಗೆ ಕರೆ ಮಾಡಿದ, ಮಾವನ ಮನೆಗೆ ಹೋಗಲು ಖತರ್ನಾಕ್‌ ಪ್ಲಾನ್..!

By Kannadaprabha NewsFirst Published Sep 28, 2024, 6:45 AM IST
Highlights

'ಪೊಲೀಸ್ ಜೀಪ್ ಇರೋದು ಸಮಾಜದ ಕೆಲಸ, ಸರ್ಕಾರದ ಕೆಲಸ ಮಾಡೋದಕ್ಕೆ ಕಣಪ್ಪಾ. ನಿನ್ನನ್ನು ಮಾವನ ಮನೆಗೆ ಕೆರ್ಕೊಂಡು ಹೋಗಕ್ಕಲ್ಲ. ಇನ್ನೊಮ್ಮೆ ಹೀಗೆ ಮಾಡಬೇಡ' ಎಂದು ಬುದ್ದಿ ಹೇಳಿ ಪೊಲೀಸರೇ ಲಾರಿಯನ್ನು ನಿಲ್ಲಿಸಿ ಆತನನ್ನ ಪಲ್ಗುಣಿ ಗ್ರಾಮದ ಮಾವನ ಮನೆಗೆ ಕಳುಹಿಸಿದ್ದಾರೆ.

ಕೊಟ್ಟಿಗೆಹಾರ(ಚಿಕ್ಕಮಗಳೂರು)(ಸೆ.28): ಪಿತೃ ಪಕ್ಷದ ಬಾಡೂಟಕ್ಕೆ ರಾತ್ರಿ ವೇಳೆ ಮಾವನ ಮನೆಗೆ ತೆರಳಲು ಅಳಿಯನೊಬ್ಬ 112 ಪೊಲೀಸರಿಗೆ ಕರೆ ಮಾಡಿ ಜೀಪನ್ನು ಕರೆಸಿಕೊಂಡ ಘಟನೆ ಗುರುವಾರ ರಾತ್ರಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ. 

ತರುವೆ ಗ್ರಾಮದ ಅಶೋಕ್, ಪಲ್ಗುಣಿ ಗ್ರಾಮದತನ್ನ ಮಾವನ ಮನೆಗೆಮಹಾಲಯ ಅಮಾವಾಸ್ಯೆಯ ಬಾಡೂಟಕ್ಕೆ ಹೋಗಬೇಕಿತ್ತು. ರಾತ್ರಿ ಕೊಟ್ಟಿಗೆಹಾರ ಸುತ್ತಮುತ್ತ ಮಳೆಯಿದ್ದ ಕಾರಣ, ಪಲ್ಗುಣಿ ಗ್ರಾಮಕ್ಕೆ ಹೋಗಲು ಯಾವ ವಾಹನಗಳು ಸಿಗಲಿಲ್ಲ. ಅದಕ್ಕಾಗಿ ಆತ 112 ಪೊಲೀಸ್‌ಗೆ ಕೆರೆ ಮಾಡಿ 'ಸರ್, ಮನೆಯಲ್ಲಿ ತುಂಬಾ ಗಲಾಟೆ ಆಗ್ತಾ ಇದೆ ಬನ್ನಿ' ಎಂದು ! ಕೊಟ್ಟಿಗೆಹಾರಕ್ಕೆ ಕರೆಸಿಕೊಂಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು 'ಎಲ್ಲಿ ಗಲಾಟೆ ನಡಿ ಮನೆಗೆ ಹೋಗೋಣ' ಎಂದಾಗ, 'ಸರ್ ಯಾವ ಗಲಾಟೆಯೂ ಇಲ್ಲ. ನಾನು ಪಲ್ಗುಣಿ ಗ್ರಾಮದಲ್ಲಿರುವ ನನ್ನ ಮಾವನ ಮನೆಗೆ ಪಿತೃಪಕ್ಷದ ಊಟಕ್ಕೆ ಊಟಕ್ಕೆ ಹೋಗಬೇಕಿತ್ತು. ಅದಕ್ಕಾಗಿ ನಿಮಗೆ ಕರೆ ಮಾಡಿದೆ. ನನ್ನನ್ನು ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡಿ ರ್ಸ' ಎಂದು ಕೇಳಿದ್ದಾನೆ. 

Latest Videos

ಚಿಕ್ಕಮಗಳೂರು: ವೃದ್ಧೆಯನ್ನು 3 ಕಿ.ಮೀ. ಹೊತ್ತು ಆಸ್ಪತ್ರೆಗೆ ಸೇರಿಸಿದ ಜನತೆ, ಗ್ರಾಮಸ್ಥರ ಗೋಳು ಕೇಳೋರೇ ಇಲ್ಲ..!

ಬಳಿಕ ಪೊಲೀಸರು ಆತನಿಗೆ 'ಪೊಲೀಸ್ ಜೀಪ್ ಇರೋದು ಸಮಾಜದ ಕೆಲಸ, ಸರ್ಕಾರದ ಕೆಲಸ ಮಾಡೋದಕ್ಕೆ ಕಣಪ್ಪಾ. ನಿನ್ನನ್ನು ಮಾವನ ಮನೆಗೆ ಕೆರ್ಕೊಂಡು ಹೋಗಕ್ಕಲ್ಲ. ಇನ್ನೊಮ್ಮೆ ಹೀಗೆ ಮಾಡಬೇಡ' ಎಂದು ಬುದ್ದಿ ಹೇಳಿ ಪೊಲೀಸರೇ ಲಾರಿಯನ್ನು ನಿಲ್ಲಿಸಿ ಆತನನ್ನ ಪಲ್ಗುಣಿ ಗ್ರಾಮದ ಮಾವನ ಮನೆಗೆ ಕಳುಹಿಸಿದ್ದಾರೆ.

click me!