ಮದ್ಯದ ಅಮಲಿನಲ್ಲಿ ಪತ್ನಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಹಚ್ಚಿಕೊಂಡ ಭೂಪ!

By Kannadaprabha News  |  First Published May 21, 2020, 7:17 AM IST

ಮದ್ಯದ ಅಮಲಿನಲ್ಲಿ ಪತ್ನಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡ ವ್ಯಕ್ತಿ| ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಡಿಸಾಗರದಲ್ಲಿ ನಡೆದ ಘಟನೆ| ಮಗಳಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು| ಬೀರಪ್ಪ ಹಾಗೂ ಫಕ್ಕೀರವ್ವ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ ದಾಖಲು|


ನವಲಗುಂದ(ಮೇ.21): ಕುಡಿತದ ಅಮಲಿನಲ್ಲಿ ಪತ್ನಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡು ಗಾಯಗೊಂಡ ಘಟನೆ ತಾಲೂಕಿನ ಗುಡಿಸಾಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬೀರಪ್ಪ ಕಟಿಗಾರ (40) ಎಂಬಾತ ಕುಡಿತದ ಅಮಲಿನಲ್ಲಿ ತನ್ನ ಪತ್ನಿ ಫಕೀರವ್ವ (34) ಹಾಗೂ ಮಗಳು ಯಲ್ಲವ್ವ (12) ಎಂಬುವವರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಇವರ ಚೀರಾಟ ಕೇಳಿ ಅಕ್ಕಪಕ್ಕದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. 

Tap to resize

Latest Videos

ಕೊರೋನಾ ಕಾಟ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮುಂದಕ್ಕೆ?

ಮಗಳಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀರಪ್ಪ ಹಾಗೂ ಫಕ್ಕೀರವ್ವ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಸಂಬಂಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
 

click me!