ಬಾಗಲಕೋಟೆ: ತಂದೆಯ ಅಸ್ತಿ ಬಿಡಲು ಹೋದ ಮಗ ಸಾವು

Kannadaprabha News   | Asianet News
Published : Oct 29, 2020, 01:18 PM IST
ಬಾಗಲಕೋಟೆ: ತಂದೆಯ ಅಸ್ತಿ ಬಿಡಲು ಹೋದ ಮಗ ಸಾವು

ಸಾರಾಂಶ

ತಂದೆಯ ಅಸ್ತಿ ಬಿಡಲು ಹೋದ ಮಗ ಕಾಲು ಜಾರಿ ನದಿಗೆ ಬಿದ್ದು ಸಾವು|ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಬಳಿ ನಡೆದ ಘಟನೆ| ಮೃತನನ್ನು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ| ಈ ಸಂಬಂಧ ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಬಾಗಲಕೋಟೆ(ಅ.29): ತಂದೆಯ ಅಸ್ತಿ ಬಿಡಲು ಹೋದ ಮಗ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿ ಬುಧವಾರ ಸಂಭವಿಸಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿ ಮಹಾಂತೇಶ ಯಾದವ (45) ಮೃತ ವ್ಯಕ್ತಿ. ಮಲಪ್ರಭಾ ನದಿಯಲ್ಲಿ ಅಸ್ತಿ ಬಿಡಲು ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. 

ಇಳಕಲ್ಲನಲ್ಲಿ ಪಿಗ್ಮಿ ಸಂಗ್ರಹಕಾರನ ಕೊಲೆ: ಕಾರಣ..?

ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ನದಿಯಲ್ಲಿನ ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!