ಬಾಗಲಕೋಟೆ: ಕ್ವಾರಂಟೈನ್‌ಗೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

By Kannadaprabha News  |  First Published May 17, 2020, 1:28 PM IST

ಕ್ವಾರಂಟೈನ್‌ಗೆ ಹೆದರಿ ವಿಷ ಸೇವಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ| ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮದಲ್ಲಿ ನಡೆದ ಘಟನೆ| ಮೂಲತಃ ಯಾದಗಿರಿ ಜಿಲ್ಲೆಯವನಾದ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಚಿಕ್ಕೂರಿನ ತೋಟದ ಮನೆಯೊಂದರಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ| ಮೂರು ತಿಂಗಳ ಹಿಂದಷ್ಟೇ ಮಹಾರಾಷ್ಟ್ರದ ಕಬ್ಬಿನ ಗ್ಯಾಂಗ್‌ ಜೊತೆ ಹೆಂಡಿತಿ, ಮಕ್ಕಳನ್ನು ಬಿಟ್ಟು ಹೋಗಿದ್ದ|


ಲೋಕಾಪುರ(ಮೇ.17): ಮೂರು ತಿಂಗಳ ಹಿಂದೆ ಮಹಾರಾಷ್ಟ್ರಕ್ಕೆ ಕಬ್ಬಿನ ಗ್ಯಾಂಗ್‌ ಜೊತೆ ಹೋಗಿದ್ದ ವ್ಯಕ್ತಿಯೊರ್ವ ಶುಕ್ರವಾರ ಗ್ರಾಮಕ್ಕೆ ಬಂದ ಸುದ್ದಿ ತಿಳಿದು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕ್ವಾರಂಟೈನ್‌ ಮಾಡಲು ಮುಂದಾದಾಗ, ಆತ ತಪಾಸಣೆ ಹಾಗೂ ಕ್ವಾರಂಟೈನ್‌ಗೆ ಹೆದರಿ ವಿಷ ಸೇವಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೂಲತಃ ಯಾದಗಿರಿ ಜಿಲ್ಲೆಯವನಾದ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಚಿಕ್ಕೂರಿನ ತೋಟದ ಮನೆಯೊಂದರಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ. ಮೂರು ತಿಂಗಳ ಹಿಂದಷ್ಟೇ ಮಹಾರಾಷ್ಟ್ರದ ಕಬ್ಬಿನ ಗ್ಯಾಂಗ್‌ ಜೊತೆ ಹೆಂಡಿತಿ, ಮಕ್ಕಳನ್ನು ಬಿಟ್ಟು ಹೋಗಿದ್ದ. ಆದರೆ, ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಆ ವ್ಯಕ್ತಿ. ಅಲ್ಲಿಯೇ ಉಳಿದಿದ್ದ. ಮೇ.15ರಂದು ಲಾರಿ ಮೂಲಕ ಚಿಕ್ಕೂರು ಗ್ರಾಮಕ್ಕೆ ಬಂದಿದ್ದಾನೆ.

Tap to resize

Latest Videos

ಕೊರೋನಾ ಕಾಟ: ಬಾಗಲಕೋಟೆಗೆ ಇನ್ನೂ ತಪ್ಪದ ಅಜ್ಮೀರ್‌ ಆತಂಕ..!

ಈ ವಿಷಯ ತಿಳಿದು ಆಶಾ ಕಾರ್ಯಕರ್ತೆ ಈತನನ್ನು ತಪಾಸಣೆ ಮಾಡಿ, ಕ್ವಾರಂಟೈನ್‌ಗೆ ಇಡಬೇಕು ಎಂದ ತಿಳಿಸಿದಾಗ, ಈತ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಇದೀಗ ಬಾಗಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
 

click me!