ಗ್ಲಾಡಿಯೋಸ್‌ ಹೂ ಮಾರಾಟವಾಗದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

By Kannadaprabha News  |  First Published May 17, 2020, 12:57 PM IST

ಲಾಕ್‌ಡೌನ್‌ ವೇಳೆ ಬೆಳೆ ಮಾರಾಟವಾಗಲಿಲ್ಲ ಎಂಬ ಕಾರಣಕ್ಕೆ ಕಲಬುರಗಿಯಲ್ಲಿ ಇತ್ತೀಚೆಗೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವರದಿಯಾಗಿದೆ.


ಚಿಕ್ಕಬಳ್ಳಾಪುರ(ಮೇ 17): ಲಾಕ್‌ಡೌನ್‌ ವೇಳೆ ಬೆಳೆ ಮಾರಾಟವಾಗಲಿಲ್ಲ ಎಂಬ ಕಾರಣಕ್ಕೆ ಕಲಬುರಗಿಯಲ್ಲಿ ಇತ್ತೀಚೆಗೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವರದಿಯಾಗಿದೆ. ಸಾಲ ಮಾಡಿ ಬೆಳೆದಿದ್ದ ಹೂವಿನ ಬೆಳೆ ಪುಷ್ಕಳವಾಗಿ ಬಂದಿದ್ದರೂ ಖರೀದಿಯಾಗದ ಕಾರಣ ಕತ್ರಿಗುಪ್ಪೆ ಗ್ರಾಮದ ರಾಮಪ್ಪ(55) ಎಂಬ ರೈತ ಶನಿವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅವರು ತಮ್ಮ 2 ಎಕರೆ ಜಮೀನಿನಲ್ಲಿ ಗ್ಲಾಡಿಯೋಸ್‌ ಹೂವು ಬೆಳೆದಿದ್ದರು. ಹೂವು ಬೆಳೆಯಲು ಸುಮಾರು 5 ಲಕ್ಷ ಕೈ ಸಾಲ ಮಾಡಿದ್ದ ಅವರು, ಸುಮಾರು 20 ಲಕ್ಷ ಸಿಗುವ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ. ಆದರೆ ಹೂವು ಫಸಲಿಗೆ ಬರುವ ವೇಳೆಗೆ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಹೂವಿಗೆ ಮಾರುಕಟ್ಟೆಯೇ ಇಲ್ಲವಾಗಿದೆ. ಹೂವು ತೋಟದಲ್ಲಿಯೇ ಒಣಗುತ್ತಿರುವುದನ್ನು ಕಂಡು ದಿನ ಕಣ್ಣೀರು ಹಾಕುತ್ತಿದ್ದ ರಾಮಪ್ಪ, ಇತ್ತೀಚಿಗೆ ತೋಟಕ್ಕೆ ನೀರು ಹಾಯಿಸುವುದನ್ನೂ ಬಿಟ್ಟಿದ್ದರು ಎನ್ನಲಾಗಿದೆ.

Tap to resize

Latest Videos

ಕೊರೋನಾ ಮಧ್ಯೆ ಬರ್ತ್‌ಡೇ ಆಚರಿಸಿಕೊಂಡ ಚಿತ್ರದುರ್ಗದ MP ನಾರಾಯಣಸ್ವಾಮಿ

ಶನಿವಾರ ಮುಂಜಾನೆ ಮನೆಯಿಂದ ಹೊರ ಹೋದ ಅವರು, ತೋಟದಲ್ಲಿಯೇ ವಿಷ ಸೇವಿಸಿದ್ದಾರೆ. ತೋಟದಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದ ರಾಮಪ್ಪನನ್ನು ಕಂಡ ಸುತ್ತಮುತ್ತಲಿನ ಮನೆಯವರು ತಕ್ಷಣವೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಅವರು ಕೊನೆಯುಸಿರು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

click me!