ಲವ್‌ ಮ್ಯಾರೇಜ್‌ ಆಗಿ ಮೂರೇ ತಿಂಗಳಿಗೆ ಮತ್ತೊಂದು ಮದುವೆಯಾದ ಭೂಪ..!

Kannadaprabha News   | Asianet News
Published : Dec 21, 2020, 01:08 PM IST
ಲವ್‌ ಮ್ಯಾರೇಜ್‌ ಆಗಿ ಮೂರೇ ತಿಂಗಳಿಗೆ ಮತ್ತೊಂದು ಮದುವೆಯಾದ ಭೂಪ..!

ಸಾರಾಂಶ

ಮದುವೆಯಾಗಿ ಮೂರೇ ತಿಂಗಳಲ್ಲಿ ಮತ್ತೊಂದು ವಿವಾಹ| ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದ ನವವಿವಾಹಿತೆ| ಆರೋಪಿಯನ್ನು ವಶಕ್ಕೆ ಪಡೆದ ಮಾದನಾಯಕನಹಳ್ಳಿ ಪೊಲೀಸರು| ನ್ಯಾಯಾಂಗ ಬಂಧನಲ್ಲಿರುವ ಆರೋಪಿ| 

ನೆಲಮಂಗಲ(ಡಿ.21): ಐದು ವರ್ಷ ಪ್ರೀತಿಸಿ ಮದುವೆಯಾದ ಮೂರು ತಿಂಗಳಿಗೆ ಮತ್ತೊಬ್ಬ ಯುವತಿಯ ಜೊತೆ ಮದುವೆ ಆದ ಆರೋಪದ ಪ್ರಕರಣ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. 

ಸಮೀಪದ ತೋಟದ ಗುಡ್ಡದಹಳ್ಳಿ ನಿವಾಸಿ ನವ ವಿವಾಹಿತೆ ಪುಷ್ಪಲತಾ ಎಂಬಾಕೆ ಮಧುಸೂದನ್‌ ಎಂಬುವರೊಂದಿಗೆ ಕಳೆದ ಮೂರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಐದು ವರ್ಷದ ಪ್ರೀತಿ, ಬಳಿಕ ಮದುವೆಯಾಗಿ ಮೂರೇ ತಿಂಗಳಲ್ಲಿ ಮತ್ತೊಂದು ಮದುವೆಯಾಗಿರುವ ನನ್ನ ಪತಿ ನನಗೆ ಬೇಕು ಎಂದು ಪರಿತಪ್ಪಿಸುತ್ತಿರುವ ಘಟನೆ ನಡೆದಿದೆ. 

ಜಾಲಿರೈಡ್ ಹೋಗಿದ್ದ ಮೂವರು ಯುವಕರ ದುರಂತ ಸಾವು

ನವವಿವಾಹಿತೆ ಮದುವೆಯಾಗಿ ಮೂರೇ ತಿಂಗಳಲ್ಲಿ ಮತ್ತೊಂದು ಮದುವೆಯಾಗಿರುವ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮಾದನಾಯಕನಹಳ್ಳಿ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮಧುಸೂದನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
 

PREV
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ