ಪ್ರಧಾನ ಮಂತ್ರಿ ನೇರವಾಗಿ ಧರಣಿ ನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಿದರೂ ರೈತರು ಮುಷ್ಕರ ನಡೆಸುವುದು ಸರಿಯಲ್ಲ ಎಂದ ಎನ್.ನವೀನ್‌ನಾಯಕ
ಚಳ್ಳಕೆರೆ(ಡಿ.21): ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚಿಗಷ್ಟೇ ರಾಷ್ಟ್ರದ 7500 ಕೋಟಿ ಹಣವನ್ನು ರೈತರ ಖಾತೆಗಳಿಗೆ ಕೆಲವೇ ಕೆಲವು ದಿನಗಳ ಅಂತರದಲ್ಲಿ ನೇರವಾಗಿ ಜಮಾ ಮಾಡಿಸುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ರೈತ ಸಮುದಾಯಕ್ಕೆ ಎಲ್ಲ ರೀತಿಯ ಸೌಲಭ್ಯಗಳು ದೊರಕುತ್ತಿದ್ದು, ವಿನಾಕಾರಣ ನವದೆಹಲಿಯಲ್ಲಿ ರೈತರು ಬೇರೆ ಪಕ್ಷಗಳ ಪಿತೂರಿಗೆ ಒಳಗಾಗಿ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಎನ್.ನವೀನ್‌ನಾಯಕ ಆರೋಪಿಸಿದರು.
ಕಳೆದ 15 ದಿನಗಳಿಂದ ನವದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ, ಗೃಹ ಸಚಿವರು, ರೈತರೊಂದಿಗೆ ಚರ್ಚಿಸಿದ್ದಾರೆ. ಪ್ರಧಾನ ಮಂತ್ರಿ ಅವರು ನೇರವಾಗಿ ಧರಣಿ ನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಿದರೂ ರೈತರು ಮುಷ್ಕರ ನಡೆಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
undefined
ದೊಡ್ಡವರ ಜತೆ ಯುವರಾಜ..ತಗಲಾಕೊಂಡ್ರೆ ಕೋಟಿ ಕೋಟಿ ಪಂಗನಾಮ!
ರಾಷ್ಟ್ರದಲ್ಲಿ ಅಧಿಕಾರದಿಂದ ವಂಚಿತವಾದ ಕಾಂಗ್ರೆಸ್ ಪಕ್ಷ ರೈತರಿಗೆ ತೆರೆಯ ಮರೆಯಲ್ಲಿ ಸಹಕಾರ ನೀಡಿ ರೈತರನ್ನು ಪ್ರಚೋದಿಸಿ ಮುಷ್ಕರ ನಡೆಸುತ್ತಿದೆ. ರೈತ ಸಮುದಾಯಕ್ಕೆ ಎಲ್ಲ ರೀತಿಯ ಸೌಲಭ್ಯಗಳು ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ರೈತರು ಪ್ರಚೋದನೆಗೆ ಒಳಗಾಗದೆ ಕೇಂದ್ರ ಸರ್ಕಾರದ ಸವಲತ್ತನ್ನು ಪಡೆದು ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಬೇಕೆಂದು ಮನವಿ ಮಾಡಿದರು.