Uttara kannada news: ಬಿಜೆಪಿಯಿಂದ ಜನಪರ ಆಡಳಿತ ಸಾಧ್ಯ: ಸಚಿವ ಹೆಬ್ಬಾರ

By Kannadaprabha News  |  First Published Jan 22, 2023, 7:11 AM IST

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನೀರಾವರಿ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಜನಪರ ಆಡಳಿತ ನೀಡುತ್ತಿವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.


ಯಲ್ಲಾಪುರ (ಜ.22) : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನೀರಾವರಿ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಜನಪರ ಆಡಳಿತ ನೀಡುತ್ತಿವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಅವರು ಶನಿವಾರ ಪಟ್ಟಣದ ಗ್ರಾಮದೇವಿಯರ ಮಂದಿರದಲ್ಲಿ ಪೂಜೆ ಸಲ್ಲಿಸಿ, ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

Latest Videos

undefined

ನಮ್ಮ ಸರ್ಕಾರದ ಹತ್ತಾರು ಯೋಜನೆಗಳ ಕುರಿತು ಈ ಅಭಿಯಾನದಲ್ಲಿ ಪ್ರತಿಯೊಬ್ಬ ಮತದಾರರಿಗೂ ಸರಿಯಾದ ಕಲ್ಪನೆ ನೀಡಿ, ಪಕ್ಷದ ಸದಸ್ಯತ್ವಕ್ಕೆ ಹೆಸರು ನೋಂದಣಿ ಮಾಡುವ ಉದ್ದೇಶದಿಂದ ಈ ಬೃಹತ್‌ ಅಭಿಯಾನವನ್ನು ಹಮ್ಮಿಕೊಂಡಿದೆ. ನಮ್ಮ ಎಲ್ಲ ಕಾರ್ಯಕರ್ತರೂ ಪ್ರತಿ ಮನೆಗೆ ತೆರಳಿ, ಅಭಿಯಾನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಸುಧಾಕರ್‌ ದೇಶದ ಆಸ್ತಿ ಆಗಬೇಕು: ಸಚಿವ ಶಿವರಾಮ್‌ ಹೆಬ್ಬಾರ್‌

ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಅಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬಿಜೆಪಿಯೇ ವಿಭಿನ್ನವಾಗಿದೆ. ದೇಶದಲ್ಲಿ ಎಲ್ಲ ರಾಜ್ಯಗಳಲ್ಲೂ ಪಕ್ಷ ಅಧಿಕಾರ ಹಿಡಿಯುವ ಬಗ್ಗೆ ಮೋದಿ ಮತ್ತು ಅಮಿತ್‌ ಶಾ ಹೊಸ ಚಿಂತನೆಗಳನ್ನು ರೂಪಿಸಿದ್ದಾರೆ. ಸರ್ಕಾರದ ಸಣ್ಣಪುಟ್ಟಸಂಗತಿಗಳನ್ನೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ದೊಡ್ಡದಾಗಿ ಮಾಡಿ, ನೂರು ಸುಳ್ಳು ಹೇಳಿ ಸತ್ಯವನ್ನೇ ಅಸತ್ಯವೆಂದು ಜನರು ಭಾವಿಸುವಂತೆ ಮಾಡುತ್ತಿವೆ. ಪಕ್ಷದ ಕಾರ್ಯಕರ್ತರೂ ಕೂಡ ಸರ್ಕಾರದ ಒಳ್ಳೆಯ ಕೆಲಸಗಳನ್ನು ಮನವರಿಕೆ ಮಾಡಿ, ವಿಪಕ್ಷಗಳ ವೈಫಲ್ಯದ ಕುರಿತು ಅಧಿಕ ಮಾಹಿತಿಗಳನ್ನು ಜನರಿಗೆ ತಲುಪಿಸಬೇಕಾಗಿದೆ ಎಂದರು.

ಪಕ್ಷದ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ವಿಪಕ್ಷದವರು ಸಣ್ಣಪುಟ್ಟತಪ್ಪುಗಳನ್ನು ದೊಡ್ಡದು ಮಾಡಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅದನ್ನು ನಾವೆಲ್ಲರೂ ಸೇರಿ ಸತ್ಯದ ಅರಿವು ಮೂಡಿಸಿ ವಿಪಕ್ಷದ ಅವ್ಯವಹಾರಗಳನ್ನು ಬಯಲಿಗೆಳೆದು, ಹೆಚ್ಚಿನ ಸಂಖ್ಯೆಯ ಸದಸ್ಯತ್ವವನ್ನು 8000090009 ಸಂಖ್ಯೆಗೆ ಉಚಿತ ಕರೆಮಾಡಿ ಪಡೆದುಕೊಳ್ಳಬಹುದು ಎಂದರು.

ಕನ್ನಡದ ಒಂದಿಂಚು ನೆಲವನ್ನೂಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ; ಶಿವರಾಮ್ ಹೆಬ್ಬಾರ್

ಹಿರಿಯರಾದ ರಾಮು ನಾಯ್ಕ, ಪಪಂ ಅಧ್ಯಕ್ಷೆ ಸುನಂದಾ ದಾಸ್‌, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್‌, ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಬಾಬಾಸಾಬ್‌ ಅಲನ್‌, ಶಕ್ತಿ ಕೇಂದ್ರದ ಮುಖ್ಯಸ್ಥ ನಾರಾಯಣ ನಾಯಕ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆದಿತ್ಯ ಗುಡಿಗಾರ, ಬಿಜೆಪಿ ಉಪಾಧ್ಯಕ್ಷ ಶಿರೀಶ ಪ್ರಭು, ಪ್ರಮುಖರಾದ ಕಲ್ಪನಾ ನಾಯ್ಕ, ಶೋಭಾ ಹುಲ್ಮನಿ, ಲಕ್ಷ್ಮೀನಾರಾಯಣ ತೋಟ್ಮನೆ, ಸುಧೀರ ಆಚಾರ್ಯ, ಸೊಮೇಶ್ವರ ನಾಯ್ಕ, ಗಜಾನನ ನಾಯ್ಕ, ತಾಲೂಕಾ ವಿಸ್ತಾರಕ ನಿತಿನ್‌ ಉಪಸ್ಥಿತರಿದ್ದರು.

click me!