ಚಾಮರಾಜನಗರ: ಹೊಸ ವರ್ಷಕ್ಕೆ ಅರಣ್ಯ ಪ್ರವೇಶ ನಿಷಿದ್ಧ

By Kannadaprabha News  |  First Published Dec 31, 2019, 5:25 PM IST

ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಅರಣ್ಯ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಗೊಳಿಸಲಾಗಿದೆ. ತಪ್ಪಿದರೆ ಭಾರಿ ದಂಡ ಬೀಳಲಿದೆ ಎಂದು ಕೊಳ್ಳೇಗಾಲ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ಡಿಎಫ್‌ಒ ಏಡುಕುಂಡಲು ಎಚ್ಚರಿಸಿದ್ದಾರೆ.


ಚಾಮರಾಜನಗರ(ಡಿ.31): ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಅರಣ್ಯ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಗೊಳಿಸಲಾಗಿದೆ. ತಪ್ಪಿದರೆ ಭಾರಿ ದಂಡ ಬೀಳಲಿದೆ ಎಂದು ಕೊಳ್ಳೇಗಾಲ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ಡಿಎಫ್‌ಒ ಏಡುಕುಂಡಲು ಎಚ್ಚರಿಸಿದ್ದಾರೆ.

ಹನೂರು ಮಲೆಮಹದೇಶ್ವರ ವನ್ಯಜೀವಿ ವ್ಯಾಪ್ತಿಗೆ ಬರುವ ಎಲ್ಲಾ ವಲಯ ವಿಭಾಗದ ಅರಣ್ಯದಂಚಿನಲ್ಲಿ ಬರುವ ಗ್ರಾಮಸ್ಥರು ಸೇರಿದಂತೆ ಹನೂರು, ರಾಮಾಪುರ, ಕೌದಳ್ಳಿ, ಮಲೆಮಹದೇಶ್ವರ ಬೆಟ್ಟ ಹಾಗೂ ಇನ್ನಿತರೆ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳ ಜನತೆ ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ಅರಣ್ಯದೊಳಗಡೆ ಹೋಗುವುದನ್ನು ಸಂಪೂರ್ಣವಾಗಿ ನಿಷೇಧ ಏರಲಾಗಿದೆ. ಬರುವಂತ ಪ್ರವಾಸಿಗರು ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ಸುರಕ್ಷಿತವಾಗಿ ತಮ್ಮ ಸ್ಥಳಗಳಿಗೆ ತೆರಳಬೇಕು.

Tap to resize

Latest Videos

ತಪ್ಪಿದರೆ ಭಾರಿ ದಂಡ:

ಮಲೆಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕರು ಹಾಗೂ ಯುವಕರು ಮೋಜುಮಸ್ತಿಗಾಗಿ ಅಕ್ರಮ ಪ್ರವೇಶ ಮಾಡಿದರೆ ಅರಣ್ಯ ಇಲಾಖೆ ಕಾಯ್ದೆ ನಿಯಮದಡಿ ಸೂಕ್ತ ಕಾನೂನು ಕ್ರಮಕೈಗೊಂಡು ಭಾರಿ ದಂಡವನ್ನು ವಿಧಿಸಲಾಗುವುದು ಈ ಹಿನ್ನಲೆಯಲ್ಲಿ ಸಾರ್ವಜನಿಕರು ಅತಿಕ್ರಮಣ ಅರಣ್ಯ ಪ್ರವೇಶ ಮಾಡಬಾರದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಿಬ್ಬಂದಿಗಳ ನಿಯೋಜನೆ:

ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಮಲೆಮಹದೇಶ್ವರ ಬೆಟ್ಟ ಹಾಗೂ ತಮಿಳುನಾಡಿನ ಸಂಪರ್ಕ ರಸ್ತೆಯ ಹನೂರು ಎಲ್ಲೇಮಾಳ ರಸ್ತೆ ಹಾಗೂ ಅಜ್ಜೀಪುರ ಅರಕನಹಳ್ಳದ ಬಳಿ ಮತ್ತು ಕೆಂಪಯ್ಯನಹಟ್ಟಿ, ಕೌದಳ್ಳಿ, ರಾಮಾಪುರ, ಸಂತೇಖಾನೆ, ನಾಲ್‌ರೋಡ್ ತಾಳುಬೆಟ್ಟ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಮಲೆಮಹದಶ್ವರ ಬೆಟ್ಟಕ್ಕೆ ಬರುವ ಭಕ್ತರು ಹೊಸ ವರ್ಷ ಆಚರಣೆಗೆ ಅರಣ್ಯಕ್ಕೆ ಪ್ರವೇಶ ಮಾಡುವುದನ್ನು ತಡೆಗಟ್ಟಲು ಆಯಾಕಟ್ಟಿನ ಸ್ಥಳಗಳಲ್ಲಿ ಅರಣ್ಯ ಇಲಾಖೆಯ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ.

ಸಾರ್ವಜನಿಕರು ಸಹಕರಿಸಬೇಕು:

ವನ್ಯಜೀವಿ ಮತ್ತು ಅಮೂಲ್ಯ ಅರಣ್ಯ ಸಂಪತ್ತು ಹಾಗೂ ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಸಾರ್ವಜನಿಕರು ಅರಣ್ಯ ಇಲಾಖೆ ಜೊತೆಗೆ ಸಹಕರಿಸುವ ಮೂಲಕ ಅಕ್ರಮ ಅರಣ್ಯ ಪ್ರವೇಶವನ್ನು ತಡೆಗಟ್ಟ ಬೇಕು. ಅರಣ್ಯದೊಳಗೆ ಆನೆ ಚಿರತೆ ಇನ್ನಿತರೆ ಪ್ರಾಣಿಗಳು ಇರುವುದರಿಂದ ಅವುಗಳ ವಾಸಸ್ಥಾನಗಳಲ್ಲಿ ಸಾರ್ವಜನಿಕರು ಓಡಾಡುವುದರಿಂದ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಕಾರಣವಾಗುವುದರಿಂದ ಅಹಿತಕರ ಘಟನೆಗಳು ಜರುಗದಂತೆ ಸಾರ್ವಜನಿಕರು ಮುಂದಾಗಬೇಕಾಗಿದೆ.

ಪಂಪ್‌ವೆಲ್‌ ಫ್ಲೈ ಓವರ್‌ಗೆ 5 ಬಾರಿ ಡೆಡ್‌ಲೈನ್‌: ಸಂಸದ ನಳಿನ್ ಸಭೆ

ಹೊಸವರ್ಷ ಆಚರಣೆ ಹೆಸರಿನಲ್ಲಿ ಸಾರ್ವಜನಿಕರು ಹಾಗೂ ಯುವಕರು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಹೊಸ ವರ್ಷಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರು ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು. ಕಾನೂನು ಉಲ್ಲಂಘಿಸಿದರೆ ಭಾರೀ ದಂಡ ಬೀಳಲಿದೆ ಎಂದು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್‌ಒ ಏಡುಕುಂಡಲು ಹೇಳಿದ್ದಾರೆ.

click me!