ಪಂಪ್‌ವೆಲ್‌ ಫ್ಲೈ ಓವರ್‌ಗೆ 5 ಬಾರಿ ಡೆಡ್‌ಲೈನ್‌: ಸಂಸದ ನಳಿನ್ ಸಭೆ

By Suvarna NewsFirst Published Dec 31, 2019, 4:49 PM IST
Highlights

ಐದು ಬಾರಿ ಡೆಡ್‌ಲೈನ್ ನೀಡಿದ ಮೇಲೆಯೂ ಮಂಗಳೂರು ಪಂಪ್‌ವೆಲ್ ಫ್ಲೈ ಓವರ್ ಕೆಲಸ ಮಾತ್ರ ಮುಗಿದಿಲ್ಲ. 5ನೇ ಬಾರಿಯೂ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಡೆಡ್ ಲೈನ್ ಫೇಲ್ ಆಗಿದೆ.

ಮಂಗಳೂರು(ಡಿ.31): ಐದು ಬಾರಿ ಡೆಡ್‌ಲೈನ್ ನೀಡಿದ ಮೇಲೆಯೂ ಮಂಗಳೂರು ಪಂಪ್‌ವೆಲ್ ಫ್ಲೈ ಓವರ್ ಕೆಲಸ ಮಾತ್ರ ಮುಗಿದಿಲ್ಲ. 5ನೇ ಬಾರಿಯೂ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಡೆಡ್ ಲೈನ್ ಫೇಲ್ ಆಗಿದೆ.

ಪಂಪ್ವೆಲ್ ಪ್ಲೈ ಓವರ್ ಜನವರಿ‌ 31 ಕ್ಕೆ ಉದ್ಘಾಟನೆ ಡೆಡ್‌ಲೈನ್ ನೀಡಲಾಗಿತ್ತು. ಇದೀಗ ನವಯುಗ ಕಂಪೆನಿ ಮತ್ತೆ ಹೊಸ ಡೆಡ್ ಲೈನ್ ನೀಡಿದೆ. ಪಂಪ್ವೆಲ್ ಫ್ಲೈಓವರ್ ಡೆಡ್ ಲೈನ್ ಅಂತ್ಯ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಂಸದ ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿದ್ದಾರೆ.\

ಸಕ್ಕರೆ ನಾಡಿಗೆ ಸಿಹಿ: ಮಂಡ್ಯದ ರೈತರಿಗೆ ನ್ಯೂಇಯರ್ ಬಂಪರ್

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು, ನವಯುಗ ಕಂಪೆನಿಯ ಅಧಿಕಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ತರಾಟೆಗೆ ತೆಗದುಕೊಂಡಿದ್ದಾರೆ. ಸಂಸದನಾಗಿ ಎಲ್ಲಾ ನೆರವು ನೀಡಿದ್ದೇನೆ. ಎಲ್ಲಾ ಮಾಡಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಫ್ಲೈ ಓವರ್ ಮುಗಿಯುವರೆಗೆ ಟೋಲ್ ಗೇಟ್ ಕ್ಲೋಸ್ ಮಾಡಿ. ಹಣ ಕೇಳಿದರೆ ನಾನೇ ಮಷ್ಕರ ಕೂರುತ್ತೇನೆ ಎಂದು ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ತಾಕೀತು ಮಾಡಿದ್ದಾರೆ.

ಮಂಗಳೂರು: ಪಂಪ್‌ವೆಲ್‌ನಲ್ಲೇ ನಿರ್ಮಾಣವಾಗಲಿದೆ ಸರ್ವಿಸ್‌ ಬಸ್‌ ನಿಲ್ದಾಣ..!

ಫ್ಲೈ ಓವರ್ ಕಾಮಗಾರಿ ಮುಕ್ತಾಯಕ್ಕೆ 5 ಬಾರಿ ಡೆಡ್ ಲೈನ್ ನೀಡಲಾಗಿದೆ. ಯಾವಾಗ ಕಾಮಗಾರಿ ಮುಗಿಸುತ್ತೀರಿ, ಲಿಖಿತ ರೂಪದಲ್ಲಿ ಮಾಹಿತಿ ನೀಡಿ. ಕಾಮಗಾರಿ ಮುಗಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದ ನಳಿನ್ ಎಚ್ಚರಿಸಿದ್ದಾರೆ.

ಒಂದು ವರ್ಷದಲ್ಲಿ 500 ಮೀಟಿಂಗ್ ಆಗಿದೆ. ಕಾಮಗಾರಿ ಮುಗಿಸದಿದ್ದರೆ ಚಪ್ಪಲಿಯಲ್ಲಿ ಹೊಡೀರಿ ಅಂತ ಹೇಳಿದ್ರಿ. ಈಗ ಕಾಮಗಾರಿ ನೀವು ಮುಗಿಸಿಲ್ಲ. ಕಂಪೆನಿ ಅಧಿಕಾರಿಗಳ ಮೇಲೆ FIR ಆಗಿದೆ. ಪೊಲೀಸರು ಅಧಿಕಾರಿಗಳನ್ನು‌ ಬಂಧಿಸಲಿ ಎಂದಿರುವ ನಳಿನ್‌ ಕುಮಾರ್ ಅಧಿಕಾರಿಗಳಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಮತ್ತೊಂದು ಗಡುವು!

click me!