ಮಂಡ್ಯದ ರೈತರಿಗೆ ಹೊಸ ವರ್ಷಕ್ಕೆ ಬಂಪರ್ ಸಿಕ್ಕಿದೆ. ಮೈಶುಗರ್ ಸಭೆ ಏನಾಗಲಿದೆಯೋ ಎಂದು ಕಾತರದಿಂದ ಕಾಯುತ್ತಿದ್ದ ಜನರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮಂಡ್ಯ(ಡಿ.31): ಮಂಡ್ಯದ ರೈತರಿಗೆ ಹೊಸ ವರ್ಷಕ್ಕೆ ಬಂಪರ್ ಸಿಕ್ಕಿದೆ. ಮೈಶುಗರ್ ಸಭೆ ಏನಾಗಲಿದೆಯೋ ಎಂದು ಕಾತರದಿಂದ ಕಾಯುತ್ತಿದ್ದ ಜನರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮಂಡ್ಯ ರೈತರಿಗೆ ನ್ಯೂ ಇಯರ್ ಗಿಫ್ಟ್ ಸಿಕ್ಕಿದ್ದು, 2020ರ ಜೂನ್‌ನಲ್ಲಿ ಮೈಶುಗರ್ ಆರಂಭವಾಗಲಿದೆ ಎಂದು ಮಂಡ್ಯದಲ್ಲಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಮಂಡ್ಯದಲ್ಲಿ ಇಂದು ನಡೆದ ಸಭೆಯ ನಂತರ ಮಾತನಾಡಿದ ಅವರು, ಜೂನ್‌ನಲ್ಲಿ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮೈ ಶುಗರ್ ಒಡೆತನವನ್ನು ಸರ್ಕಾರಿ ಅಥವಾ ಖಾಸಗಿಗೆ ನೀಡುವ ವಿಚಾರ ಜನವರಿ ಅಂತ್ಯಕ್ಕೆ ನಿರ್ಧಾರವಾಗಲಿದೆ.
ಕರ್ನಾಟಕಕ್ಕೆ ಮತ್ತೆ ಕೇರಳದ ಕಸ.! ಅವತ್ತು ಮಂಗಳೂರು, ಇವತ್ತು ಮಂಡ್ಯ..!
ವಾರದೊಳಗೆ ರಿಪೋರ್ಟ್ ಪಡೆಯಲಾಗುತ್ತದೆ. ಬಳಿಕ ಸಿಎಂ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗುವುದು. ಮೈಶುಗರ್, PSSK ಪುನಶ್ಚೇತನ ಈ ಭಾಗದ ಜನರ ಅಪೇಕ್ಷೆಯಾಗಿತ್ತು. ಖಾಸಗಿಗೆ ವಹಿಸಲು ಕೆಡಿಪಿ ಸಭೆಯಲ್ಲಿ ನಿರ್ಣಯ ಕೂಡ ಆಗಿತ್ತು. ಸಂಪುಟದಲ್ಲಿ ತುರ್ತು ನಿರ್ಣಯ ಕೈಗೊಳ್ಳಬೇಕಿದೆ. ಸ್ಥಳೀಯ ಜನಪ್ರತಿನಿಧಿಗಳು, ರೈತ ನಾಯಕರ ಅಭಿಪ್ರಾಯ ಕೇಳಬೇಕಿತ್ತು. ಹೀಗಾಗಿ ಇಂದು ತುರ್ತು ಸಭೆ ಕರೆಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಅಥವಾ ಖಾಸಗಿಗೆ ವಹಿಸುವುದು ಏನಾದರೂ ಸರಿ. ಕಾರ್ಖಾನೆ ಆರಂಭಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಕಳೆದ 10 ವರ್ಷಗಳಲ್ಲಿ 428 ಕೋಟಿ ಅನುದಾನವನ್ನ ಸರ್ಕಾರ ಕೊಟ್ಟಿದೆ. ಆದರೂ ಕಾರ್ಖಾನೆ ನಷ್ಟದಲ್ಲಿದೆ. ತುರ್ತಾಗಿ ಪುನಶ್ಚೇತನಗೊಳಿಸಿ, ಕಬ್ಬು ನುರಿಸುವುದು ಜನರ ಒಕ್ಕೊರಲ ಅಭಿಪ್ರಾಯ. ಮುಂದಿನ ಜೂನ್ ತಿಂಗಳಲ್ಲಿ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಮಂಡ್ಯ: ಮೈಷುಗರ್ - PSSK ಖಾಸಗಿಗೆ ಗುತ್ತಿಗೆ
110ಜನ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯದ ಸ್ಥಿತಿಗೆ 100 ಮಂದಿ ನೌಕರರು ಸಾಕು. ಈಗ ಕಾರ್ಖಾನೆಯಲ್ಲಿ 280 ಜನ ಇದ್ದಾರೆ. ಟೆಕ್ನಿಕಲ್ ಟೀಂ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಮೈಶುಗರ್ ಆರಂಭ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.