ಬಳ್ಳಾರಿಯಲ್ಲಿ ಹೆಚ್ಚುತ್ತಿರೋ ಅಪರಾಧ ಕೃತ್ಯಕ್ಕೆ ಬ್ರೇಕ್ ಹಾಕಲು ಹೈಟೆಕ್ ಕ್ಯಾಮರಾ ಅಳವಡಿಕೆ

By Suvarna News  |  First Published May 15, 2022, 12:04 PM IST

* ರಾಜ್ಯದಲ್ಲಿ ಮೊದಲ ಬಾರಿಗೆ ಫೇಸ್ ಡಿಟಕ್ಷನ್ ಕ್ಯಾಮರಾ ಅಳವಡಿಕೆ
* ಅಪರಾಧ ತಡೆಗಟ್ಟೋ ಹಿನ್ನೆಲೆ ಹೈಟೆಕ್ ಕ್ಯಾಮರಾ ಅಳವಡಿಕೆ
* ಎಸ್ಪಿ ಕಚೇರಿಯಲ್ಲಿ ಹೈಟೆಕ್ ಕಂಟ್ರೋಲ್ ರೂಂ


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಮೇ.15)
: ಸಾಮಾನ್ಯವಾಗಿ ಗಡಿಜಿಲ್ಲೆಯಲ್ಲಿ ಅಪರಾದ  ಕೃತ್ಯ ಹೆಚ್ಚಾಗಿರುತ್ತವೆ ಅನ್ನೋ ಮಾತಿದೆ. ಆದರಲ್ಲೂ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಮರಳುಗಾರಿಕೆ ಸೇರಿದಂತೆ, ಸರಗಳ್ಳತನ, ಕೊಲೆ, ಕಳ್ಳತನ ಇನ್ನಿತರ ಹತ್ತು ಹಲವು ಅಪರಾಧಗಳು ನಿರಂತರವಾಗಿ ನಡೆಯುತ್ತಲೆ ಇರುತ್ತವೆ. ಆದ್ರೇ, ಇದನ್ನು ತಡೆಯೋ ನಿಟ್ಟಿನಲ್ಲಿ ಬಳ್ಳಾರಿ ಪೊಲೀಸರು ಹೈಟೆಕ್ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಕೆ ಫೇಸ್ ಡಿಟೆಕ್ಷನ್ ಕ್ಯಾಮರಾವನ್ನು ನಗರದೆಲ್ಲೇಡೆ ಅಳವಡಿಸೋ ಮೂಲಕ ಅಪರಾಧ ತಡೆಯಲು ಬಳ್ಳಾರಿ ‌ಪೋಲಿಸರು ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ

4 ಕೋಟಿ ವೆಚ್ಚದಲ್ಲಿ 300 ಕ್ಯಾಮರಾ ಅಳವಡಿಕೆ
ಬಳ್ಳಾರಿ ನಗರದಲ್ಲಿ 300 ಹೈಟೆಕ್ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡ್ತಿರೋ ಸಿಬ್ಬಂದಿ.. ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಹೈಟೆಕ್ ತಂತ್ರಜ್ಞಾನ.. ಹೌದು, ಬಳ್ಳಾರಿ ಅಂದ್ರೇ ಸಾಕು ಅಲ್ಲಿ ಅಕ್ರಮ ಅಪರಾಧ ಕೃತ್ಯ ಹೆಚ್ಚಾಗಿ ನಡೆಯುತ್ತದೆ ಎನ್ನುವ ಮಾತಿದೆ. ಆದ್ರೆ, ಈ ಬಾರಿ ಇದೆಲ್ಲದಕ್ಕೂ ಕಡಿವಾಣ ಹಾಕಲೇಬೇಕೆನ್ನುವ ನಿಟ್ಟಿನಲ್ಲಿ ಪೊಲಿಸರು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಕೆ ಫೇಸ್ ಡಿಟೆಕ್ಷನ್ ಕ್ಯಾಮರಾವನ್ನು ನಗರದೆಲ್ಲೇಡೆ ಅಳವಡಿಸೋ ಮೂಲಕ ಅಪರಾಧ ಕೃತ್ಯಕ್ಕೆ ಕಡಿವಾಣ ಹಾಕೋ ಪ್ರಯತ್ನವನ್ನು ಪೋಲಿಸರು ಮಾಡುತ್ತಿದ್ದಾರೆ. 

Latest Videos

undefined

ರವಿವರ್ಮನ ಪೇಂಟಿಂಗ್ ಮಾದರಿಯಲ್ಲಿ ಜನಾರ್ದನ ರೆಡ್ಡಿ ಪತ್ನಿ ಫೋಟೋ ಶೂಟ್ ವೈರಲ್

 4 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರದಲ್ಲಿ ಸುಮಾರು 300 ಕ್ಕೂ ಅಧಿಕ ಸಿಸಿ ಟಿವಿ ಅಳವಡಿಸಲು ಮುಂದಾಗಿದ್ದು. ಮೊದಲ ಹಂತದಲ್ಲಿ 90 ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ವಿಶೇಷವೆಂದ್ರೇ ಇಲ್ಲಿ ಅಳವಡಿಸಿರೋ ಹೈಟೆಕ್ ಕ್ಯಾಮರಾಗಳಲ್ಲಿ ಯಾವುದಾದರೊಂದು ಕ್ಯಾಮರಾದಲ್ಲಿ ಆರೋಪಿಯ ಮುಖ ಸೆರೆಯಾದ್ರೆ ಸಾಕು ಆ ವ್ಯಕ್ತಿಯ  ಮುಖ ಮಾರ್ಕಿಂಗ್ ಮಾಡಿದ್ರೇ ಆ ಆರೋಪಿ ನಗರ ಯಾವ ಭಾಗದಲ್ಲಿಯೇ ಹೋದ್ರು ಬೇರೊಂದು ಕ್ಯಾಮರಾ ಆರೋಪಿಯನ್ನು  ಡಿಟೆಕ್ಟ್ ಮಾಡುತ್ತದೆ. ಪ್ರತಿ ವ್ಯಕ್ತಿಯ ಚಲನವಲನ ಮೇಲೆ ಹದ್ದಿನ ಕಣ್ಣು ಇಡೋದಷ್ಟೆ ಅಲ್ಲದೇ ವಾಹನಗಳ ಚಲನವಲನಗಳ ನಿಗಾ ವಹಿಸುತ್ತದೆ.  ಎಂದು ಬಳ್ಳಾರಿ ಎಸ್ಪಿ  ಸೈದುಲ್ಲಾ ಅಡಾವತ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ..
 
ಹೈಟೆಕ್ ಟೆಕ್ನಾಲಜಿ ಉತ್ತಮ ಗುಣಮಟ್ಟ

ಇನ್ನು ಈ ಸಿಸಿಟಿವಿಗಳು ಉತ್ತಮ ಗುಣಮಟ್ಟ ಹೊಂದಿದ್ದು, ಅಡ್ವಾನ್ಸ್ ಟೆಕ್ನಾಲಜಿ ಅಳವಡಿಕೆ ಮಾಡಲಾಗಿದೆ. ಪ್ರತಿ ವಾಹನದ ನಂಬರ್ ಪ್ಲೇಟ್ ಅಟೋ ಡಿಟೆಕ್ಷನ್, ಪೇಸ್ ಡಿಟೆಕ್ಷನ್ , ಅಲ್ಲದೇ ಪೇಸ್ ಅನಾಲಿಟಿಕ್ ಕೂಡ ಈ ಕ್ಯಾಮರಾಗಳು ಮಾಡಲಿವೆ. ಬಳ್ಳಾರಿಯ ಎಸ್ ಪಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಓಪನ್ ಮಾಡಲಾಗಿದ್ದು. ಎಲ್ಲಿ ಏನೇ ನಡೆದ್ರೂ ಕ್ಷಣಾರ್ಧದಲ್ಲಿ ಪೋಲಿಸರಿಗೆ ತಿಳಿಯಲಿದೆ.  ಇನ್ನೂ  ಬಳ್ಳಾರಿಯಲ್ಲಿ ಅಪರಾಧ ಮಾಡಿದ ಆರೋಪಿಗಳು ಆಂಧ್ರಕ್ಕೆ ಹೋಗೊದು ಅಲ್ಲಿ ಅರಪಾಧ ಮಾಡಿದವರು  ಇಲ್ಲಿ ತಲೆಮರೆಸಿಕೊಳ್ಳದೋ ಸಾಮಾನ್ಯ ಆದ್ರೇ, ಇದೀಗ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ ಇದೊಂದು ಉತ್ತಮ ಬೆಳವಣಿಗೆ ಅನ್ನೊದು ಸ್ಥಳೀಯ ಹೋರಾಟಗಾರ ಚಾನಾಳ ಶೇಖರ್ ಹೇಳುತ್ತಾರೆ..
 
ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ರೂ ನೋಟಿಸ್
ಬಳ್ಳಾರಿ ನಾಗರೀಕರ ಎಚ್ಚರ ಎಚ್ಚರ  ಕೇವಲ ಅಪರಾಧಕ್ಕೆ ಮಾತ್ರ ಈ ಸಿಸಿ ಕ್ಯಾಮರ ಬಳಕೆ ಮಾಡ್ತಾರೆ ಅಂದುಕೊಳ್ಳಬೇಡಿ ಸಿಗ್ನಲ್ ಜಂಪ್, ಟ್ರಾಫಿಕ್ಸ ನಿಯಮ  ಉಲ್ಲಂಘನೆ ಮಾಡಿದ್ರು ಇದರಿಂದ ನಿಮ್ಮ ಮನೆಗೆ ನೋಟಿಸ್ ಬರಲಿದೆ. ಒಟ್ಟಾರೇ, ಬಳ್ಳಾರಿ ನಗರದ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟಿದ್ದು, ಯಾವುದೇ ಅಪರಾಧ ನಡೆದರೂ ಅಪರಾಧಿಗಳ ಪತ್ತೆ ಮತ್ತಷ್ಟು ಸುಲಭವಾಗಲಿದೆ.

click me!