ಜಿಲ್ಲೆಗೆ ಇನ್ನು ಕೋವಿಡ್ 19 ಬರಲಾರದು ಎಂದು ರಿಲ್ಯಾಕ್ಸ್ ಮೂಡ್‌ನಲ್ಲಿ ಜನತೆ ಅನವಶ್ಯಕವಾಗಿ ರಸ್ತೆಗಿಳಿದರೆ ಅಂಥವರ ಕೈಗೆ ಸೀಲ್ ಹಾಕಲಾಗುತ್ತದೆ. ಅಷ್ಟೇ ಅಲ್ಲ, ಅವರನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ-ಹೀಗೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಎಚ್ಚರಿಕೆ ನೀಡಿದ್ದಾರೆ.
ಕಾರವಾರ(ಏ.08): ಜಿಲ್ಲೆಗೆ ಇನ್ನು ಕೋವಿಡ್ 19 ಬರಲಾರದು ಎಂದು ರಿಲ್ಯಾಕ್ಸ್ ಮೂಡ್‌ನಲ್ಲಿ ಜನತೆ ಅನವಶ್ಯಕವಾಗಿ ರಸ್ತೆಗಿಳಿದರೆ ಅಂಥವರ ಕೈಗೆ ಸೀಲ್ ಹಾಕಲಾಗುತ್ತದೆ. ಅಷ್ಟೇ ಅಲ್ಲ, ಅವರನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ-ಹೀಗೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನೂ ಒಂದು ವಾರಗಳ ಕಾಲ ಲಾಕ್‌ಡೌನ್ ಇದೆ. ಜನತೆ ನಿರ್ಲಕ್ಷ್ಯ ಮಾಡಬಾರದು. ಅನಗತ್ಯವಾಗಿ ಯಾರೂ ರಸ್ತೆಗಿಳಿಯುವಂತಿಲ್ಲ. ರಸ್ತೆಗಿಳಿದವರನ್ನು ಖಾಲಿ ಇರುವ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇಡುವಂತೆ ಪೊಲೀಸ್ ವರಿಷ್ಠರಿಗೂ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಾಕ್‌ಡೌನ್ ಮತ್ತಷ್ಟು ಬಿಗಿ: ವಾರಕ್ಕೆ ಎರಡು ದಿನ ಮಾತ್ರ ತರಕಾರಿ, ಕಿರಾಣಿ!
ನೌಕಾನೆಲೆಯಲ್ಲಿನ ಪತಂಜಲಿ ಆಸ್ಪತ್ರೆಯಲ್ಲಿ ದಾಖಲಾದ ಒಟ್ಟೂ8 ಕೋವಿಡ್ 19 ಸೋಂಕಿತರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ 14 ದಿನಗಳ ಕಾಲ ನಮ್ಮದೆ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಉಳಿದವರು ಏ. 14ರೊಳಗೆ ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸವಿದೆ. ದೆಹಲಿ ಜಮಾತ್‌ನಲ್ಲಿ ಭಾಗವಹಿಸಿದ 8 ಜನರದ್ದೂ ನೆಗೆಟಿವ್ ಬಂದಿದೆ. ಜಮಾತಿನಲ್ಲಿ ಬಂದವರ ಹಾಗೂ ಸೋಂಕಿತರ ಸಂಪರ್ಕದಲ್ಲಿ ಬಂದವರ 50 ಜನರ ಗಂಟಲದ್ರವ ಸಂಗ್ರಹಿಸಲಾಗಿದೆ. ಆದರೆ ಅವರಲ್ಲಿ ಯಾರಲ್ಲೂ ಕೋವಿಡ್ 19 ರೋಗದ ಲಕ್ಷಣ ಇಲ್ಲ. ಮುಂದಿನ ಮೂರು ದಿನಗಳ ಕಾಲ ಮತ್ತೆ ಮನೆ ಮನೆ ಸಮೀಕ್ಷೆ ನಡೆಯಲಿದೆ. ಮಹಾರಾಷ್ಟ್ರ, ಗೋವಾ, ಕೇರಳದಲ್ಲಿರುವ ಜಿಲ್ಲೆಯ ಮೀನುಗಾರರು ಈ ಸಂದರ್ಭದಲ್ಲಿ ಜಿಲ್ಲೆಗೆ ಜಲ ಮಾರ್ಗದ ಮೂಲಕ ಬರುವುದು ಬೇಡÜ ಎಂದು ಹೇಳುತ್ತಿದ್ದೇನೆ ಎಂದರು.
ಸುಳ್ಳು ಸುದ್ದಿ ಹಬ್ಬಿಸಬೇಡಿ
ಸುಳ್ಳು ಸುದ್ದಿ ಹಬ್ಬಿಸಿದರೆ ಪ್ರಕರಣ ದಾಖಲಿಸುತ್ತಿದ್ದೇವೆ. ಯಾರೂ ಕೂಡ ಕೋಮು ಭಾವನೆ ಕೆರಳಿಸುವ ಮೆಸೇಜ್ ಹಬ್ಬಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ್ ದೇವರಾಜು ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಂ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು, ಮಸೀದಿಯಲ್ಲಿ ಗುಂಪಾಗಿ ಸೇರಿ ನಮಾಜ್ ಮಾಡದಂತೆ ಸೂಚಿಸಲಾಗಿದೆ. ಇದನ್ನು ನೋಡಿಕೊಳ್ಳುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ. ಅವರು ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಲಾಕ್‌ಡೌನ್ ವಿಸ್ತರಣೆ?: IRCTC ಬುಕಿಂಗ್ 30ರವರೆಗೂ ರದ್ದು!
ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ಓಡಾಡಲು ಬಳಸಿದ 200ರಷ್ಟುಬೈಕ್ ಸೀಜ್ ಮಾಡಿದ್ದೇವೆ. 14 ಜನರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಲೌಕ್‌ಡೌನ್ ಅವಧಿಯಲ್ಲಿ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.