* ಜೂ. 14ರ ಬಳಿಕ ಅನ್‌ಲಾಕ್
* ಹಂತ ಹಂತವಾಗಿ ಜನತೆಯ ದೈನಂದಿನ ಜೀವನಕ್ಕೆ ತೆರೆದುಕೊಳ್ಳಲು ಸರ್ಕಾರ ಅವಕಾಶ
* ಅನವಶ್ಯಕವಾಗಿ ಬೈಕ್‌ಗಳಲ್ಲಿ ಸವಾರಿ ಮಾಡುತ್ತಿರುವ ಜನತೆ
ಹುಬ್ಬಳ್ಳಿ(ಜೂ.11): ನಗರದಲ್ಲಿ ಜನಜಂಗುಳಿ, ಜನಸಂಚಾರ ಗಮನಿಸಿದರೆ ಈಗಾಗಲೇ ಅನ್‌ಲಾಕ್ ಆಗಿದೆಯೇ? ಕೊರೋನಾ ಹೊರಟು ಹೋಗಿದೆಯೆ ಎಂದೆನ್ನಿಸದೆ ಇರದು. ಅಷ್ಟರ ಮಟ್ಟಿಗೆ ಜನ ಮೈಮರೆತು ಓಡಾಡುವುದು ಸಾಮಾನ್ಯವಾಗಿದೆ. ನಿಯಂತ್ರಣ ಮಾಡಬೇಕಿದ್ದ ಪೊಲೀಸ್, ಜಿಲ್ಲಾಡಳಿತ ಕೂಡ ಕೈಬಿಟ್ಟಿದೆಯೆ ಎಂಬ ಸಂಶಯ ಮೂಡುತ್ತದೆ.
ಇನ್ನೇನು ಜೂ. 14ರ ಬಳಿಕ ಅನ್‌ಲಾಕ್ ಆಗಲಿದ್ದು, ಹಂತ ಹಂತವಾಗಿ ಜನತೆಯ ದೈನಂದಿನ ಜೀವನಕ್ಕೆ ತೆರೆದುಕೊಳ್ಳಲು ಸರ್ಕಾರ ಅವಕಾಶ ನೀಡಲಿದೆ. ಆದರೆ, ಗುರುವಾರ ಹುಬ್ಬಳ್ಳಿಯಲ್ಲಿ ಈಗಾಗಲೇ ಸಾಮಾನ್ಯ ದಿನಗಳಂತೆ ಜನರ ಓಡಾಟವಿತ್ತು. ಇಲ್ಲಿನ ಚೆನ್ನಮ್ಮ ವೃತ್ತದಲ್ಲೆ ಜನತೆ ಗುಂಪು ಗುಂಪಾಗಿ ನಿಂತಿದ್ದು, ಸುಖಾಸುಮ್ಮನೆ ರಸ್ತೆಬದಿ ನಿಂತಿದ್ದು, ಅನವಶ್ಯಕವಾಗಿ ಬೈಕ್‌ಗಳಲ್ಲಿ ಸವಾರಿ ಮಾಡುತ್ತಿದ್ದುದು ಕಂಡುಬಂತು.
undefined
ಹುಬ್ಬಳ್ಳಿ: ಕೋವಿಡ್ ಗೆದ್ದ ಒಂದೇ ಕುಟುಂಬದ 17 ಮಂದಿ..!
ನಗರದ ಪ್ರಮುಖ ರಸ್ತೆಯಲ್ಲೇ ಇಂತಹ ಸ್ಥಿತಿಯಿದ್ದರೆ, ಉಳಿದೆಡೆ ಅಂದರೆ ಹಳೆ ಹುಬ್ಬಳ್ಳಿ ಭಾಗ, ಕೇಶ್ವಾಪುರ, ಗೋಕುಲ ರಸ್ತೆಗಳಲ್ಲಿ ಜನಸಂಚಾರ ಸಾಮಾನ್ಯವಾಗಿತ್ತು. ಬೆಳಗ್ಗೆ ದಿನಸಿ ಖರೀದಿಗೆ ನಿಗದಿತ ಸಮಯ 10 ಗಂಟೆ ಬಳಿಕ ಕೆಲಹೊತ್ತು ಮಾತ್ರ ಪೊಲೀಸರು ಅನವಶ್ಯಕವಾಗಿ ಓಡಾಡುತ್ತಿದ್ದವರನ್ನು ತಡೆದು ತಪಾಸಣೆ ಮಾಡಿದದರು. ಉಳಿದಂತೆ ಕಟ್ಟುನಿಟ್ಟಿನ ತಪಾಸಣೆ ಇರಲಿಲ್ಲ. ಹೀಗಾಗಿ ಸಂಜೆವರೆಗೂ ಓಡಾಟ ಕಂಡುಬಂತು.