ಬೆಳಗಾವಿ: ಲಾಕ್‌ಡೌನ್ ವೇಳೆ ಹಣ ಸುಲಿಗೆ, ಪೊಲೀಸಪ್ಪನ ಬಂಧನ

Kannadaprabha News   | Asianet News
Published : Jun 11, 2021, 11:51 AM IST
ಬೆಳಗಾವಿ: ಲಾಕ್‌ಡೌನ್ ವೇಳೆ ಹಣ ಸುಲಿಗೆ, ಪೊಲೀಸಪ್ಪನ ಬಂಧನ

ಸಾರಾಂಶ

* ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ವ್ಯಾಪಾರಸ್ಥರಿಂದ ಹಣ ಸುಲಿಗೆ  * ಹಣ ವಸೂಲಿ ಮಾಡುವ ವೇಳೆ ಹಿಡಿದ ಸಾರ್ವಜನಿಕರು * ಪೇದೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಪೊಲೀಸರು      

ಬೆಳಗಾವಿ(ಜೂ.11): ಲಾಕ್‌ಡೌನ್ ವೇಳೆ ವ್ಯಾಪಾರಸ್ಥರಿಂದ ಹಣ ಸುಲಿಗೆ ಮಾಡುತ್ತಿದ್ದ ಕೆಎಸ್‌ಆರ್‌ಪಿ ಪೊಲೀಸಪ್ಪನನ್ನು ಪೊಲೀಸರು ಬಂಧಿಸಿರುವ ಘಟನೆ ಗುರುವಾರ ನಡೆದಿದೆ.

ಕೆಎಸ್‌ಆರ್‌ಪಿ ಎರಡನೇ ಬಟಾಲಿಯನ ಪೇದೆ ಸಿದ್ಧಾರೂಢ ವಡ್ಡರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಅಟ್ಟಿದ್ದಾರೆ. 

ಗೋಕಾಕ; ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದವನ ಪ್ರಾಣ ಕಾಪಾಡಿದ ಬಾಲಕಿ

ಆರೋಪಿಯು ಲಾಕ್‌ಡೌನ್‌ ಅವಧಿಯಲ್ಲಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸುತ್ತಾಡಿ ನಾನು ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು, ಬೀದಿ ಬದಿ ವ್ಯಾಪಾರಸ್ಥರು ಮಾತ್ರವಲ್ಲದೇ, ಅಂಗಡಿಕಾರರಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಅದರಂತೆ ಗುರುವಾರ ಬೆಳಗ್ಗೆಯೂ ಆರೋಪಿ ಸಿದ್ಧಾರೂಢ ವಡ್ಡರ್ ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲಿ ಹಣ ವಸೂಲಿ ಮಾಡುತ್ತಿರುವಾಗ ಸಾರ್ವಜನಿಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೇದೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC