ಫ್ರೀ ಗಣೇಶನಿಗಾಗಿ ಮುಗಿಬಿದ್ದ ಜನ: ಮಂಡ್ಯದಲ್ಲಿ ನೂಕುನುಗ್ಗಲು..!

By Girish Goudar  |  First Published Aug 31, 2022, 10:58 AM IST

ಉಚಿತ ಗಣೇಶ ಮೂರ್ತಿ ವಿತರಿಸುವುದಾಗಿ ಹತ್ತು ದಿನಗಳ ಮುಂಚೆಯೇ ಘೋಷಿಸಿದ್ದ ಬಿಜೆಪಿ ನಾಯಕ ಇಂದ್ರೇಶ್


ಮಂಡ್ಯ(ಆ.31):  ಫ್ರೀ ಗಣೇಶನಿಗಾಗಿ ಜನರು ಮುಗಿಬಿದ್ದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಇಂದು(ಬುಧವಾರ)ನಡೆದಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಇಂದ್ರೇಶ್ ಅವರು ಗಣೇಶನ ಮೂರ್ತಿಗಳನ್ನ ಉಚಿತವಾಗಿ ವಿತರಣೆ ಮಾಡಿದ್ದಾರೆ. ಹೀಗಾಗಿ ಉಚಿತ ಗಣೇಶಮೂರ್ತಿ ಪಡೆದುಕೊಳ್ಳಲು ನೂರಾರು ಜನರು ಜಮಾಯಿಸಿದ್ದರು. ಈ ವೇಳೆ  ನೂಕುನುಗ್ಗಲು ಸಹ ಉಂಟಾಗಿದೆ. 

ಗಣೇಶೋತ್ಸವ ನೆಪದಲ್ಲಿ ಚುನಾವಣೆ ಪ್ರಚಾರಕ್ಕೆ ಇಂದ್ರೇಶ್ ಮುಂದಾಗಿದ್ದಾರೆ. ಉಚಿತ ಗಣೇಶ ಮೂರ್ತಿ ವಿತರಿಸುವುದಾಗಿ ಹತ್ತು ದಿನಗಳ ಮುಂಚೆಯೆ ಘೋಷಿಸಿದ್ದರು. ಉಚಿತ ಗಣೇಶ ಮೂರ್ತಿಗಳನ್ನ ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳುವಂತೆ ಮೇಲುಕೋಟೆ ಕ್ಷೇತ್ರದ ಜನರಿಗೆ ಇಂದ್ರೇಶ್ ಕರೆ ನೀಡಿದ್ದರು.  

Tap to resize

Latest Videos

MANDYA NEWS: ಇಂದಿನಿಂದ ಮೈಷುಗರ್‌ ಕಾರ್ಯಾರಂಭ

ನಿನ್ನೆಯಿಂದಲೂ ಗಣಪತಿ ಮೂರ್ತಿಗಳನ್ನ ಪಡೆಯಲು ನೂರಾರು ಯುವಕರು ಆಗಮಿಸಿದ್ದರು. ಹೀಗಾಗಿ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿದೆ. ಪರಿಸ್ಥಿತಿ ನಿಭಾಯಿಸಲು ಡಾ.ಇಂದ್ರೇಶ್ ಹಾಗೂ ಬೆಂಬಲಿಗರು ಹರಸಾಹಸಪಟ್ಟಿದ್ದಾರೆ. 
ಗಣೇಶ ಸಿಗುತ್ತೋ, ಇಲ್ಲವೋ ಎಂದು ಜನರು ಒಮ್ಮೇಲೆ ಮುಗಿಬಿದ್ದಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಮೊದಲಿಗೆ 600 ಗೌರಿ ಗಣೇಶ ಮೂರ್ತಿ ತರಿಸಿದ್ದ ಇಂದ್ರೇಶ್, ಯುವಕರ ಸಂಖ್ಯೆ ಹೆಚ್ಚಾಗಿದ್ರಿಂದ ಸ್ಥಳೀಯವಾಗಿ ಮತ್ತೊಮ್ಮೆ ಗಣೇಶ ಮೂರ್ತಿಗಳನ್ನ ತರಿಸಿ ಹಂಚಿಕೆ ಮಾಡಿದ್ದಾರೆ. ಆದರೂ ಕೂಡ ಕೆಲ ಯುವಕರ ತಂಡಕ್ಕೆ ಗಣೇಶ ಸಿಗದೆ ನಿರಾಸೆಯಾಗಿದೆ. 
 

click me!