ಹೊಸಕೋಟೆ (ಜ.02): ತಾಲೂಕಿನಲ್ಲಿ ನಡೆದ ಉಪ ಚುನಾವಣೆಯಲ್ಲಿ (By Election) ತಾಲೂಕಿನ ಮತಬಾಂಧವರು ಪುನಃ ನಮ್ಮ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿ ಸಹ ಬಿಜೆಪಿ (BJP) ಪಕ್ಷದಿಂದ ಜನ ಬೇಸತ್ತು ಕಾಂಗ್ರೆಸ್ (Congress) ಪಕ್ಷದ ಪರವಾಗಿ ಒಲವು ತೋರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ (Sharat Bachegowda) ತಿಳಿಸಿದರು. ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ನಾರಾಯಣಕೆರೆ ಗ್ರಾಮದಲ್ಲಿ ಸುಮಾರು 2.5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ (BJP) ಸರಕಾರದ ಆಡಳಿತದಿಂದ ಬೇಸತ್ತ ಜನ ಕಾಂಗ್ರೆಸ್ (Congress) ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟಬಹುಮತ ಸಿಗಲಿದೆ ಎಂಬ ವಿಶ್ವಾಸವಿದೆ. ಮೇಕೆದಾಟು ಯೋಜನೆಯ ಡಿ.ಪಿ.ಆರ್.ಸಿದ್ಧರಾಮಯ್ಯನವರ (Siddaramaiah) ಆಡಳಿತದಲ್ಲಿ ಸಿದ್ಧತೆಯಾಗಿದ್ದು, ಇದು ಸಮ್ಮಿಶ್ರ ಸರಕಾರ ಇದ್ದಂತಂಹ ಸಮಯದಲ್ಲಿ ಇದನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿ ಸುಮಾರು 9 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆಯಡಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ ಬೆಂಗಳೂರು (Bengaluru) ನಗರಕ್ಕೆ ಅನುಕೂಲವಾಗಲೆಂದು ಸಿದ್ಧತೆ ನಡೆಸಲಾಗಿತ್ತು. ಬಿಜೆಪಿ (BJP) ಪಕ್ಷಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಾವೇ ಇದ್ದು ಇದನ್ನು ನಮ್ಮ ಕಾಲದಲ್ಲಿ ಅನುಷ್ಟಾನ ತಂದಿದ್ದು ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಫೈಲ್ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ರವಾನೆ ಮಾಡಿಲ್ಲ. ಇದು ಬಿಜೆಪಿ (BJP) ಸರಕಾರದ ವ್ಯವಸ್ಥೆ. ನಾವು ಯಾವ ರಾಜ್ಯದ ಹಕ್ಕನ್ನು ಕೇಳುತ್ತಿಲ್ಲ. ಕಾವೇರಿ ನಮ್ಮ ನೀರು ಹರಿದು ಹೋಗುತ್ತಿರುವ ಈ ನೀರು ನಮಗೆ ಸಹ ಬೇಕು ಎಂದು ಕೇಳುತ್ತಿದ್ದೇವೆ ಅಷ್ಟೇ. ಮೇಕೆ ದಾಟು ಪಾದಯಾತ್ರೆಗೆ ಹೊಸಕೋಟೆ ತಾಲೂಕಿನಿಂದ ಸಹ ಪಾಲ್ಗೊಳ್ಳಲಾಗುವುದು ಎಂದರು.
undefined
ನಾರಾಯಣಕೆರೆ ಗ್ರಾಮದ ಜನರ ಬಹುದಿನದ ಬೇಡಿಕೆಯಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಈ ಗ್ರಾಮದಲ್ಲಿ 600 ಮೀ.ರಷ್ಟುಕಾಂಕ್ರೀಟ್ ರಸ್ತೆ, 2.5 ಕಿ.ಮೀ.ನಷ್ಟುಡಾಂಬರು ರಸ್ತೆ ನಿರ್ಮಾಣ ಮಾಡಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಾಗುವುದು. ಈ ಭಾಗದ ರಸ್ತೆ ಅಭಿವೃದ್ಧಿ ಅನೇಕ ದಿನಗಳಿಂದ ಜನರ ಅನುಕೂಲಕ್ಕೆ ಸಿಗದೆ ತೊಂದರೆ ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಈಗ ರಸ್ತೆ ಅಭಿವೃದ್ಧಿ ಪಡಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಬುರೆಡ್ಡಿ, ಅನುಗೊಂಡಹಳ್ಳಿ ಹೋಬಳಿ ಮುಖಂಡ ಭೋದನಹೊಸಹಳ್ಳಿ ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಪುಷ್ಪವೆಂಕಟೇಶ್, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಹಾರೋಹಳ್ಳಿ ದೇವರಾಜ್, ಮುತ್ಕೂರು ಮುನಿರಾಜು, ಲಕ್ಷಣಸಿಂಗ್, ಕಲ್ಕುಂಟೆ ರಾಮಣ್ಣ, ಗುರುಮೂರ್ತಿ ರೆಡ್ಡಿ, ನಾರಾಯಣಕೆರೆ ಪುಟ್ಟು ಇದ್ದರು.
ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಿ
ಕೊರೋನಾ (Corona) 3ನೇ ಅಲೆಗೆ ಮೇಕ್ ಶಿಪ್ಟ್ ಆಸ್ಪತ್ರೆಯನ್ನು (Hospital) ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಂ.ವಿ.ಜೆ. ಆಸ್ಪತ್ರೆಗೆ ಸಹ ಭೇಟಿ ನೀಡಿ ಸಿದ್ಧತೆ ಬಗ್ಗ ಚರ್ಚಿಸಲಾಗುವುದು. 3ನೇ ಅಲೆಗೆ ಬಗ್ಗೆ ತಾಲೂಕಿನಲ್ಲಿ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಒಮಿಕ್ರಾನ್ (omicron) ಬಗ್ಗೆ ಸಹ ಎಚ್ಚರವಹಿಸಿ ಎಲ್ಲರೂ ಮುಂಜಾಗ್ರತೆ ಕ್ರಮವಹಿಸಬೇಕು. ಎಲ್ಲರೂ ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಜ.3ರಿಂದ ವಿದ್ಯಾರ್ಥಿಗಳಿಗೆ ಸಹ ಲಸಿಕೆ ಹಾಕಲು ತೀರ್ಮಾನಿಸಲಾಗಿದ್ದು, ಎಲ್ಲರೂ ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.