ವಿಜಯಪುರದ ವಿಶ್ವ ವಿಖ್ಯಾತ ಗೋಳಗುಮ್ಮಟ ಚಿನ್ನದ ವರ್ಣದಲ್ಲಿ ಮಿಂಚುತ್ತಿದೆ. ಎಲ್ಲಿ ನೋಡಿದರು ಬಂಗಾರದಂತೆ ಹೊಳೆಯುತ್ತಿದೆ. ನೋಡುಗರ ಕಣ್ಮನ ಸೆಳೆಯುತ್ತಿದೆ.
ವಿಜಯಪುರ : (ಡಿ.3) : ವಿಜಯಪುರದ ವಿಶ್ವ ವಿಖ್ಯಾತ ಗೋಳಗುಮ್ಮಟ ಚಿನ್ನದ ವರ್ಣದಲ್ಲಿ ಮಿಂಚುತ್ತಿದೆ. ಎಲ್ಲಿ ನೋಡಿದರು ಬಂಗಾರದಂತೆ ಹೊಳೆಯುತ್ತಿದೆ. ನೋಡುಗರ ಕಣ್ಮನ ಸೆಳೆಯುತ್ತಿದೆ.
ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಗುರುವಾರದಿಂದ ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ದೀಪಾಲಂಕಾರದಿಂದ ಝಗಮಗಿಸಲಿವೆ. ಅದರಲ್ಲಿ ವಿಜಯಪುರ ಗೋಳಗುಮ್ಮಟವು ಸೇರಿದೆ. ಏಳು ದಿನಗಳಕಾಲ ಪ್ರವಾಸಿಗರಿಗೆ ಈ ದೀಪಾಲಂಕಾರದ ಗೋಳಗುಮ್ಮಟ ನೋಡಲು ಸಿಗುತ್ತದೆ. ರಾತ್ರಿ ಬಂಗಾರದ ಬಣ್ಣದಲ್ಲಿ ಮಿಂಚುವ ಗೋಳಗುಮ್ಮಟ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ.
Mann Ki Baat: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಹುದೊಡ್ಡ ಅವಕಾಶ: ಪ್ರಧಾನಿ ಮೋದಿ
ಶ್ರೀನಗರದ ಶಂಕರಾಚಾರ್ಯ ದೇವಸ್ಥಾನ, ದೆಹಲಿಯ ಕೆಂಪು ಕೋಟೆ, ತಂಜಾವೂರಿನ ಚೋಳರ ದೇವಸ್ಥಾನ, ಹುಮಾಯೂನ್ ಸಮಾಧಿ, ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ, ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯ, ಬಿಹಾರದ ಶೇರ್ ಶಾ ಸೂರಿಯ ಸಮಾಧಿ ಸೇರಿದಂತೆ ನೂರು ಸ್ಮಾರಕಗಳು ಪಟ್ಟಿಯಲ್ಲಿದ್ದು, ಏಳು ದಿನಗಳ ಕಾಲ ಪ್ರಕಾಶಿಸಲ್ಪಡುತ್ತವೆ.
ಈ ಬಾರಿ ಭಾರತ ಜಿ20 ಅಧ್ಯಕ್ಷತೆ ವಹಿಸಿರುವುದು ಸಮಸ್ತ ಭಾರತೀಯರು ಹೆಮ್ಮೆ ಪಡುವೆ ವಿಷಯವಾಗಿದೆ. 'ವಸುಧೈವ ಕುಟುಂಬಕಂ’ ಎಂಬ ಧ್ಯೇಯವಾಕ್ಯ ಜತೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದು ಭಾರತದ ಜಿ20 ಅಧ್ಯಕ್ಷತೆಯ ಥೀಮ್ ಆಗಿದೆ. ಈ ಥೀಮ್ ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಮತ್ತು ಭೂಮಿಯ ಮೇಲೆ ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧ ಸೇರಿದಂತೆ ಎಲ್ಲಾ ಜೀವನದ ಮೌಲ್ಯವನ್ನು ದೃಢೀಕರಿಸುತ್ತದೆ. ಈ ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಭಾರತವು 50 ಕ್ಕೂ ಹೆಚ್ಚು ನಗರಗಳು ಮತ್ತು 32 ವಿವಿಧ ವಲಯಗಳಲ್ಲಿ ರಾಷ್ಟ್ರಾದ್ಯಂತ 200 ಸಭೆಗಳನ್ನು ಆಯೋಜಿಸಲಿದೆ.
G 20 ಅಧ್ಯಕ್ಷರಾಗಿ ಭಾರತಕ್ಕಿರುವ ಅವಕಾಶ ಹಾಗೂ ಸವಾಲುಗಳೇನು..?