ಶಿಗ್ಗಾಂವಿ ಯುವಕನಿಗೆ ಕೊರೋನಾ ಪಾಸಿಟಿವ್: ಗಡಿ ಕ್ಲೋಸ್ ಮಾಡಿದ ಗ್ರಾಮಸ್ಥರು

By Kannadaprabha News  |  First Published May 14, 2020, 10:47 AM IST

ಮುಂಡಗೋಡ ತಾಲೂಕು ಗಡಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಯುವಕನಿಗೆ ಕೋವಿಡ್‌-19 ಸೋಂಕು ದೃಡಪಟ್ಟಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಗಡಿ ಭಾಗದಲ್ಲಿರುವ ಜನರು ಒಳ ದಾರಿಗಳಿಂದ ಮುಂಡಗೋಡ ತಾಲೂಕಿಗೆ ಬರುವುದನ್ನು ತಪ್ಪಿಸಲು ಒಳ ರಸ್ತೆಗಳಿಗೆ ಗಿಡಗಳನ್ನು ಅಡ್ಡ ಹಾಕಿ ಬಂದ್‌ ಮಾಡಲಾಗಿದೆ.


ಉತ್ತರ ಕನ್ನಡ(ಮೇ 14): ಮುಂಡಗೋಡ ತಾಲೂಕು ಗಡಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಯುವಕನಿಗೆ ಕೋವಿಡ್‌-19 ಸೋಂಕು ದೃಡಪಟ್ಟಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಗಡಿ ಭಾಗದಲ್ಲಿರುವ ಜನರು ಒಳ ದಾರಿಗಳಿಂದ ಮುಂಡಗೋಡ ತಾಲೂಕಿಗೆ ಬರುವುದನ್ನು ತಪ್ಪಿಸಲು ಒಳ ರಸ್ತೆಗಳಿಗೆ ಗಿಡಗಳನ್ನು ಅಡ್ಡ ಹಾಕಿ ಬಂದ್‌ ಮಾಡಲಾಗಿದೆ.

ಶಿಗ್ಗಾಂವಿ ತಾಲೂಕಿನ ಅಂದಲಗಿ, ಬೊಮ್ಮನಳ್ಳಿ ಭಾಗದ ಜನ ವ್ಯಾಪಾರಕ್ಕೆ ಬರುವುದನ್ನು ತಪ್ಪಿಸಲು ಮುಂಡಗೋಡ ತಹಸೀಲ್ದಾರ ಶ್ರೀಧರ ಮುಂದಲಮನಿ ಅವರು ಕಾತೂರ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚಿಸುವ ಮೂಲಕ ಈಗಾಗಲೇ ಕಾತೂರನಿಂದ ಅಂದಲಗಿ- ಬೊಮ್ಮನಳ್ಳಿ ಮಾರ್ಗ ಕಲ್ಪಿಸುವ ರಸ್ತೆಗಳನ್ನು ಬಂದ್‌ ಮಾಡಿಸಿದ್ದಾರೆ.

Latest Videos

undefined

ಮಳೆಗಾಲಕ್ಕೂ ಮುನ್ನ ಮಡಿಕೇರಿಯ ಮಹಾಮಳೆ ಸಂತ್ರಸ್ತರಿಗೆ ಸೂರುಭಾಗ್ಯ!

ಚಿಗಳ್ಳಿ ಗ್ರಾಮದ ಜಲಾಶಯಕ್ಕೆ ಹೋಗುವ ರಸ್ತೆಯಿಂದ ನೇರವಾಗಿ ಹಾವೇರಿ ಜಿಲ್ಲೆಯ ಮುಳ್ಳಕೇರಿ, ಅಂದಲಗಿ ಮಾರ್ಗವಾಗಿ ತರಕಾರಿ ಹಾಗೂ ಎಲೆ ಹಣ್ಣು ಮಾರಾಟ ಮಾಡುವವರು ಬರುತ್ತಿದ್ದಾರೆ. ಅಲ್ಲದೇ ಗ್ರಾಮದಿಂದ ಹಲವರು ತಮ್ಮ ಸಂಬಂಧಿಕರ ಮನೆಗೆ ಹೋಗುವುದು ಬರುವುದು ಮಾಡುತ್ತಾರೆ. ರಸ್ತೆಗಳಿಗೆ ಅಡ್ಡಲಾಗಿ ಕಟ್ಟಿಗೆಗಳನ್ನು ಹಾಕಿದ್ದರೂ ಅದನ್ನು ತೆಗೆದು ಬೆಳಗಿನಜಾವ ತಾಲೂಕಿಗೆ ಆಗಮಿಸುತ್ತಿದ್ದಾರೆ ಎಂದು ಚಿಗಳ್ಳಿ ಗ್ರಾಮಸ್ಥರು ದೂರಿದ್ದಾರೆ.

ನ್ಯಾಸರ್ಗಿ ಗ್ರಾಮದಿಂದ ನೇರವಾಗಿ ಅರಣ್ಯ ಪ್ರದೇಶದ ರಸ್ತೆಯಿಂದ ಹೋದರೆ ಕೇವಲ 4-5 ಕಿ.ಮೀ ದೂರದಲ್ಲಿ ಹಾವೇರಿ ಜಿಲ್ಲೆ ಗಡಿ ಭಾಗದ ಹಳ್ಳಿಗಳಿದ್ದು, ಈ ಮೊದಲಿನಿಂದ ಅಲ್ಲಿನ ಗ್ರಾಮಸ್ಥರು ಇಲ್ಲಿಗೆ ಬರುತ್ತಿರುತ್ತಾರೆ. ಲಾಕ್‌ಡೌನ್‌ ಆದೇಶದಿಂದ ಜಾಗ್ರತರಾದ ನಾವು ನಮ್ಮ ಗ್ರಾಮದಿಂದ ಹೋಗದಂತೆ ತಡೆದು ರಸ್ತೆಗಳನ್ನು ಬಂದ್‌ ಮಾಡಿದ್ದೇವೆ. ಆದರೆ ಹಾವೇರಿ ಜಿಲ್ಲೆಯಿಂದ ನಮ್ಮ ಗ್ರಾಮದ ಮಾರ್ಗವಾಗಿ ಮುಂಡಗೋಡಗೆ ಬರುವರವರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮಸ್ಥರೆಲ್ಲ ಸೇರಿ ರಸ್ತೆಗಳಲ್ಲಿ ಅಡ್ಡಲಾಗಿ ಕಲ್ಲು ಕಟ್ಟಿಗೆ ಹಾಕಿದರೂ ಅವುಗಳನ್ನು ತೆಗೆದು ಹಾಕಿ ಹೋಗುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ ಎಂದು ನ್ಯಾಸರ್ಗಿ ಗ್ರಾಮಸ್ಥ ಅಯ್ಯಪ್ಪ ಭಜಂತ್ರಿ ಹೇಳುತ್ತಾರೆ.

ಬೈಕ್‌ ಸವಾ​ರರ ಮೇಲೆ ಒಂಟಿ ಸಲ​ಗ ದಾಳಿ

ಹುಬ್ಬಳ್ಳಿ ರಸ್ತೆಯ ಜೇನು ಮುರಿ ಗೌಳಿಗರ ದಡ್ಡಿ ಮಾರ್ಗವಾಗಿ ಕೂಡ ಹಾವೇರಿ ಜಿಲ್ಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಕೊರೋನಾ ವೈರಸ್‌ ನಿಯಂತ್ರಣ ಆಗುವವರೆಗೂ ಸಂಬಂಧಪಟ್ಟಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಿ ಹಾವೇರಿ ಜಿಲ್ಲೆಗಳ ಗಡಿ ಭಾಗದ ರಸ್ತೆಗಳನ್ನು ಬಂದ್‌ ಮಾಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

click me!