ಗ್ರೀನ್‌ ಝೋನ್‌ನಲ್ಲಿ ಬಸ್‌ ಬಿಟ್ರೂ ಮನೆಯಿಂದ ಹೊರ ಬರ್ತಿಲ್ಲ ಜನ..!

By Kannadaprabha News  |  First Published May 14, 2020, 10:26 AM IST

ಲಾಕ್‌ಡೌನ್‌ನಿಂದಾಗಿ ಕಳೆದ ತಿಂಗಳುಗಳಿಂದ ನಿರ್ಬಂಧ ಹೇರಿದ್ದ ಬಸ್‌ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಕುಂದಾಪುರ ನಗರದಲ್ಲಿ ಬುಧವಾರ ಕೆಲ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ರಸ್ತೆಗಿಳಿದಿದ್ದು, ಜನಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.


ಕುಂದಾಪುರ(ಮೇ 14): ಲಾಕ್‌ಡೌನ್‌ನಿಂದಾಗಿ ಕಳೆದ ತಿಂಗಳುಗಳಿಂದ ನಿರ್ಬಂಧ ಹೇರಿದ್ದ ಬಸ್‌ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಕುಂದಾಪುರ ನಗರದಲ್ಲಿ ಬುಧವಾರ ಕೆಲ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ರಸ್ತೆಗಿಳಿದಿದ್ದು, ಜನಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ಭಾರತಿ ಸಂಸ್ಥೆಯ ಆರು ಬಸ್‌ಗಳು ಬಿಟ್ಟರೆ ಬೇರಾವುದೇ ಖಾಸಗಿ ಬಸ್‌ಗಳು ರಸ್ತೆಗಿಳಿದಿಲ್ಲ. ಪ್ರಯಾಣಿಕರ ಸಂಖ್ಯೆ ಭಾರೀ ಇಳಿಮುಖವಾದ ಹಿನ್ನೆಲೆ ಒಂದು ಟ್ರಿಪ್‌ಗೆ ಕನಿಷ್ಠ 400ರಷ್ಟುಹಣ ಸಂಗ್ರಹವಾಗಿದೆ ಎಂದು ನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ

Latest Videos

undefined

ಬೈಕ್‌ ಸವಾ​ರರ ಮೇಲೆ ಒಂಟಿ ಸಲ​ಗ ದಾಳಿ

ಜಿಲ್ಲಾಡಳಿತದ ನಿಯಮ ಪಾಲನೆ: ಜಿಲ್ಲಾಡಳಿತ ವಿಧಿಸಿರುವ ಎಲ್ಲ ನಿಯಮಗಳನ್ನು ಬಸ್‌ ನಿರ್ವಾಹಕರು ಪಾಲಿಸುತ್ತಿದ್ದು, ಪ್ರಯಾಣಿಕರು ಬಸ್‌ನ ಮೆಟ್ಟಿಲು ಹತ್ತುತ್ತಿದ್ದಂತೆಯೇ ನಿರ್ವಾಹಕರು ಸ್ಯಾನಿಟೈಸರ್‌ ನೀಡಿ ಪ್ರಯಾಣಿಕರ ಕೈಯನ್ನು ಶುಚಿಗೊಳಿಸಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಪ್ರತಿ ಸೀಟಿಗೂ ಒಬ್ಬೊಬ್ಬರಂತೆ ಕುಳಿತುಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಕೆಲ ಬಸ್‌ಗಳಲ್ಲಿ ಮಾಸ್ಕ್‌ ಇಲ್ಲದವರವನ್ನು ಬಸ್‌ಗೆ ಹತ್ತಿಸಿಕೊಳ್ಳುವುದಿಲ್ಲ. ಇನ್ನೂ ಕೆಲ ಬಸ್‌ಗಳಲ್ಲಿ ಬಸ್‌ ನಿರ್ವಾಹಕರೇ ಉಚಿತವಾಗಿ ಮಾಸ್ಕ್‌ ನೀಡುತ್ತಿದ್ದಾರೆ.

click me!