ಕಾರವಾರ ತಾಲೂಕಿನ ಉಳಗಾ ಶಿವಾಜಿ ಮಾಧ್ಯಮಿಕ ಶಾಲೆಯಲ್ಲಿ ಗೋವಾ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಅವರಿಗೆ ಮನವಿ ನೀಡಿದರು.
ಉತ್ತರ ಕನ್ನಡ(ಜೂ.16): ಕಾರವಾರ ತಾಲೂಕಿನ ಉಳಗಾ ಶಿವಾಜಿ ಮಾಧ್ಯಮಿಕ ಶಾಲೆಯಲ್ಲಿ ಗೋವಾ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಅವರಿಗೆ ಮನವಿ ನೀಡಿದರು.
ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಗ್ರಾಮದಲ್ಲಿ ಸಾಕಷ್ಟುಆತಂಕ ಮೂಡಿಸಿದೆ. ಗೋವಾದಿಂದ ವಿದ್ಯಾರ್ಥಿಗಳನ್ನು ಕರೆತಂದು ಪರೀಕ್ಷೆ ಬರೆಸಲು ವಿರೋಧವಿದೆ. ಈಗಾಗಲೇ ಗೋವಾದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು ಅಲ್ಲಿನ ಕಂಟೈನ್ಮೆಂಟ್ ಝೋನ್ ನಿಂದಲೇ ಬರುವ ವಿದ್ಯಾರ್ಥಿಗಳು ಇದ್ದಾರೆ. ಉಳಗಾಕ್ಕೆ ಬಂದು ಪರೀಕ್ಷೆ ಬರೆಯುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೂ ಹಾಗೂ ಸ್ಥಳೀಯರಿಗೂ ಸೋಂಕು ಹರಡುವ ಆತಂಕವಿದ್ದು ಯಾವುದೇ ಕಾರಣಕ್ಕೂ ಅಲ್ಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು ಎಂದು ಕೋರಿದರು.
ರೂಲ್ಸ್ ಬ್ರೇಕ್ ಮಾಡಿದ್ರೆ ಮನೇಯೇ ಸೀಲ್‌ಡೌನ್..!
ಗೋವಾ ರಾಜ್ಯದ ವಾಸ್ಕೊದಲ್ಲಿರುವ ಝರಿ ಮತ್ತು ಯಲ್ಲಾಲಿಂಗೇಶ್ವರ ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪ್ರತಿವರ್ಷ ಉಳಗಾ ಶಿವಾಜಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುತ್ತಾರೆ. ಹಲವಾರು ವರ್ಷದಿಂದ ಗ್ರಾಮಸ್ಥರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಯಾವುದೇ ಅಡ್ಡಿ ಉಂಟುಮಾಡಿರಲಿಲ್ಲ. ಆದರೆ, ಈ ಬಾರಿ ಕೊರೋನಾ ಸೋಂಕು ಇರುವುದರಿಂದ ಭಯವಾಗಿದೆ. ಕೆಲವು ದಿನಗಳ ಹಿಂದೆ ಗೋವಾದ ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಗೋವಾ ಶಾಲೆಯಲ್ಲಿ ಕಲಿಯುತ್ತಿರುವ ತಾಲೂಕಿನ ವಿದ್ಯಾರ್ಥಿಗಳಿಗೆ ಕಾರವಾರದ ಮಾಜಾಳಿ ಗ್ರಾಮದ ಶಾಲೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಅದೇರೀತಿ ಗೋವಾದಲ್ಲಿ ಕನ್ನಡ ಮಾಧ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಗೋವಾದಲ್ಲೇ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.
ಆದರೆ ಏಕಾಏಕಿ ಕೋಪಗೊಂಡ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಮನವಿ ನೀಡಲು ಬಂದಿದ್ದವರ ಮೇಲೆ ಹರಿಹಾಯ್ದರು. ಗೋವಾದವರು ಇಲ್ಲಿಗೆ ಬರಬಾರದು ಎಂದರೆ ಇಲ್ಲಿನವರೂ ಗೋವಾಕ್ಕೆ ಬರದಂತೆ ಅಲ್ಲಿನವರು ತಡೆಯುತ್ತಾರೆ ಎಂದು ಅಸಮಾಧಾನ ಹೊರಹಾಕಿದರು. ಪರೀಕ್ಷೆಗಳನ್ನ ಸೂಕ್ತ ರೀತಿಯಲ್ಲಿ ನಡೆಸಲು ಜಿಲ್ಲಾಡಳಿತ ಪ್ರಯತ್ನಿಸಲಿದೆ ಎಂದು ಸ್ಪಷ್ಟಪಡಿಸಿದರು.
ಕಾಣೆಯಾದವರ ಮುಖ ಹಾಲಿನ ಪ್ಯಾಕೆಟ್ ಮೇಲೆ; ಕುಟುಂಬದವರ ಜತೆ ಒಟ್ಟಾದವರು ನೂರಾರು?
ಕಂಟೈನ್ಮೆಂಟ್ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಕರೆತಂದು ಇಲ್ಲಿ ಪರೀಕ್ಷೆ ಬರೆಸುವುದರಿಂದ ಕೊರೋನಾ ಹಬ್ಬಲು ನಾವೇ ಅವಕಾಶ ಮಾಡಿಕೊಟ್ಟಂತಾಗಲಿದ್ದು ಅಂತಹ ಸಂದರ್ಭದಲ್ಲಿ ತಮ್ಮ ಮಕ್ಕಳನ್ನ ಪರೀಕ್ಷೆಗೆ ಕಳುಹಿಸದಿರಲು ಪಾಲಕರು ನಿರ್ಧರಿಸಿದರು. ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಎ.ಎಫ್. ಗಾಂವಕರ, ಶಿವಾಜಿ ಉಳಗೇಕರ, ದಿಲೀಪ ನಾಯ್ಕ ಮೊದಲಾದವರು ಇದ್ದರು.