ಉತ್ತರ ಕನ್ನಡದಲ್ಲಿ ಕೋವಿಡ್ -19 ಸೋಂಕು 100ಕ್ಕೆ ನೂರು ಸಮುದಾಯಕ್ಕೆ ಹರಡಿಲ್ಲ. ಜನರು ಭಯಪಡುವ ಅಗತ್ಯವಿಲ್ಲ. ಆದರೆ, ಹೋಮ್ ಕ್ವಾರಂಟೈನ್ ನಿಯಮ ಪಾಲಿಸದೇ ಇದ್ದಲ್ಲಿ ಅವರ ಮನೆಯನ್ನೇ ಸೀಲ್‌ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಎಚ್ಚರಿಕೆ ನೀಡಿದ್ದಾರೆ.
ಕಾರವಾರ(ಜೂ.16): ಉತ್ತರ ಕನ್ನಡದಲ್ಲಿ ಕೋವಿಡ್ -19 ಸೋಂಕು 100ಕ್ಕೆ ನೂರು ಸಮುದಾಯಕ್ಕೆ ಹರಡಿಲ್ಲ. ಜನರು ಭಯಪಡುವ ಅಗತ್ಯವಿಲ್ಲ. ಆದರೆ, ಹೋಮ್ ಕ್ವಾರಂಟೈನ್ ನಿಯಮ ಪಾಲಿಸದೇ ಇದ್ದಲ್ಲಿ ಅವರ ಮನೆಯನ್ನೇ ಸೀಲ್‌ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿ, ಅಗತ್ಯ ಜೀವನಾವಶ್ಯಕ ವಸ್ತುವನ್ನು ವಿತರಿಸಿ ಮನೆಯನ್ನೇ ಸೀಲ್‌ಡೌನ್ ಮಾಡಲಾಗುತ್ತದೆ. ಈ ಮನೆಯನ್ನು ನೋಡಿಕೊಳ್ಳಲು ನೋಡಲ್ ಅಧಿಕಾರಿಯನ್ನೂ ನೇಮಕಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಕಾಣೆಯಾದವರ ಮುಖ ಹಾಲಿನ ಪ್ಯಾಕೆಟ್ ಮೇಲೆ; ಕುಟುಂಬದವರ ಜತೆ ಒಟ್ಟಾದವರು ನೂರಾರು?
ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರು, ಮಕ್ಕಳು ಅನಾವಶ್ಯಕವಾಗಿ ಹೊರಗೆ ಬರಬಾರದು. ಜೀವನೋಪಾಯಕ್ಕೆ ದುಡಿಯಲು ಹೊರ ಬರುವುದು ಅನಿವಾರ್ಯ. ಸೂಕ್ಷ್ಮ ಆರೋಗ್ಯ ಹೊಂದಿದವರು ಓಡಾಡುವುದನ್ನು ಕಡಿಮೆ ಮಾಡಬೇಕು. ಆರೋಗ್ಯ ಸರ್ವೆ ಕಾಲಕಾಲಕ್ಕೆ ನಡೆಸಲಾಗುತ್ತಿದೆ. ಈ ವೇಳೆ ಸಮೀಕ್ಷೆ ನಡೆಸುವವರಿಗೆ ಸರಿಯಾದ ಮಾಹಿತಿಯನ್ನು ಜನರು ನೀಡಬೇಕು. ಇದರಿಂದ ಮುಂದಿನ ಸ್ಥಿತಿಗತಿ ಅರಿತುಕೊಳ್ಳಲು ಆಡಳಿತಕ್ಕೆ ಸಾಧ್ಯವಾಗುತ್ತದೆ. ಆರೋಗ್ಯದ ಸ್ಥಿತಿ ಅಥವಾ ಇನ್ನಿತರ ವಿಷಯ ಮುಚ್ಚಿಡುವುದರಿಂದ ನಷ್ಟವೇ ಆಗುತ್ತದೆ ಎಂದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಗೋವಾ ರಾಜ್ಯದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪರೀಕ್ಷೆ ಬರೆಯುವುದು ಬೇಡ ಎನ್ನುವುದು ಸರಿಯಲ್ಲ. ಪಾಲಕರ ಆತಂಕ ತಿಳಿದಿದೆ. ಮಕ್ಕಳ ಪರೀಕ್ಷೆಗೆ ತೊಂದರೆ ಆಗಬಾರದು. ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಕೆಲವು ಕಡೆಗಳಲ್ಲಿ ಹೋಬಳಿ ಮಟ್ಟದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಬೇಡಿಕೆ ಬರುತ್ತಿದೆ. ಆದರೆ, ಇದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು ಇದ್ದರು.