ಯುವ ದಸರಾದಲ್ಲಿ ಕಾರ್ಯಕ್ರಮ ನೀಡಿದ ಚಂದನ್ ಶೆಟ್ಟಿ ಅವರಿಗೆ ಪೇಮೆಂಟ್ ನೀಡದಂತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿರೋದಕ್ಕಾಗಿ ಪೇಮೆಂಟ್ ನೀಡದಂತೆ ಒತ್ತಾಯಿಸಲಾಗಿದೆ.
ಮೈಸೂರು(ಅ.06): ಯುವ ದಸರಾದಲ್ಲಿ ಕಾರ್ಯಕ್ರಮ ನೀಡಿದ ಚಂದನ್ ಶೆಟ್ಟಿ ಅವರಿಗೆ ಪೇಮೆಂಟ್ ನೀಡದಂತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿರೋದಕ್ಕಾಗಿ ಪೇಮೆಂಟ್ ನೀಡದಂತೆ ಒತ್ತಾಯಿಸಲಾಗಿದೆ.
ಯುವ ದಸರಾ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿತನ್ನ ಗೆಳತಿ ನಿವೇದಿತಾ ಗೌಡಗೆ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕ ವೇದಿಕೆಯವರು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮೈಸೂರು: ತ್ರಿಡಿ ಮ್ಯಾಪಿಂಗ್‌ನಲ್ಲಿ ಕೆಆರ್‌ಎಸ್ ಚರಿತ್ರೆ
ಗಾಯಕ ಚಂದನ್ ಶೆಟ್ಟಿಅವರಿಗೆ ಹಾಗೂ ಕಾರ್ಯಕ್ರಮ ನಿರ್ವಹಣಾ ಸಂಸ್ಥೆ ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಹಣವನ್ನು ನೀಡಬಾರದು. ಆ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೊಳ ಜಗದೀಶ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಜಯಸಿಂಹ ಶ್ರೀಧರ್, ರಂಗನಾಥ್, ಸುಚೀಂದ್ರ, ಮಹೇಶ್, ಷಡಾಕ್ಷರಿ, ಚರಣ್‌ರಾಜ್, ಜಯಪ್ರಕಾಶ್, ಚಕ್ರಪಾಣಿ, ಮೋಹನ್‌ಕುಮಾರ್‌ಗೌಡ ಇದ್ದರು.
ಮೈಸೂರು ದಸರಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳ ಡ್ಯಾನ್ಸ್ ಮೋಡಿ