ಸಿಡಿಲಿಗೆ ಬೆಳ್ತಂಗಡಿಯಲ್ಲಿ ಭೂಕಂಪನ ಅನುಭವ

By Kannadaprabha NewsFirst Published Oct 6, 2019, 10:39 AM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಿಡಿಲಿಗೆ ಭೂ ಕಂಪನದ ಅನುಭವವಾಗಿದೆ. 

ಬೆಂಗಳೂರು [ಅ.06]: ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಶನಿವಾರ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಹಳ್ಳದಲ್ಲಿನ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಸಿಡಿಲಿಗೆ ಭೂಕಂಪನದ ಅನುಭವವಾಗಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಶನಿವಾರ ಸಂಜೆ ಭಾರೀ ಪ್ರಮಾಣದಲ್ಲಿ ಸಿಡಿಲು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದೆ. ಹಲವರ ಮನೆಗಳಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳು ನಿಷ್ಕ್ರೀಯಗೊಂಡಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ರಿಕ್ಟರ್‌ ಮಾಪನದಲ್ಲಿ ಭೂಕಂಪದ ಬಗ್ಗೆ ಮಾಹಿತಿ ದಾಖಲಾಗಿಲ್ಲ. ಹಾವೇರಿ ತಾಲೂಕಿನ ಅಗಡಿ ಗ್ರಾಮದ ಸುಭಾಷ ಬೆನ್ನೂರ (48) ಮೀನು ಹಿಡಿಯಲು ಹೋಗಿ ನೀರುಪಾಲಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹೊರನಾಡು- ಕೊಪ್ಪ ರಸ್ತೆಯಲ್ಲಿರುವ ಹೊಕ್ಕಳ್ಳಿ ಗ್ರಾಮದ ಬಳಿ ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದ ಪರಿಣಾಮ ಕಿರುಸೇತುವೆ ಕೊಚ್ಚಿಹೋಗಿದೆ.

click me!