ಈ ಊರು ತುಂಬಾ ಹುಳುವಿನ ಕಾಟ, ನಿವಾಸಿಗಳ ಬದುಕು ಹೈರಾಣ!

By Suvarna NewsFirst Published Jun 14, 2022, 6:59 PM IST
Highlights

ಉಡುಪಿ ಜಿಲ್ಲೆ  ಪರ್ಕಳ ದೇವಿ ನಗರದ ನಿವಾಸಿಗಳು ಶಂಖದ ಹುಳುವಿನ ರಂಪಾಟಕ್ಕೆ ರೋಸಿ ಹೋಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಹುಳುವಿನ ಬಾಧೆ ವಿಪರೀತವಾಗಿದ್ದರೂ, ಈ ಬಾರಿಯಷ್ಟು ಹುಳುಗಳು ಯಾವತ್ತೂ ದಾಳಿ ಇಟ್ಟಿರಲಿಲ್ಲ.

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಜೂ.14): ಉಡುಪಿ ಜಿಲ್ಲೆಯ ಪರ್ಕಳ (Parkala ) ನಿವಾಸಿಗಳಿಗೆ ಮತ್ತೊಮ್ಮೆ ವಿಚಿತ್ರ ಹುಳುವಿನ ಬಾಧೆ ಶುರುವಾಗಿದೆ. ವಿದೇಶದಿಂದ ಆಮದಾಗಿರುವ ಯಾವುದೋ ಭಿನ್ನ ತಳಿಯ ಬಸವನ ಹುಳುವಿನ ಕಾಟ ಮಿತಿಮೀರಿದೆ. ರಕ್ತಬೀಜಾಸುರ ನಂತೆ ನಿರಂತರ ಸಂತಾನೋತ್ಪತ್ತಿಯಿಂದ ಊರಿನ ಯಾವ ಮೂಲೆಗೆ ಹೋದರೂ ಬರೇ ಹುಳುಗಳೇ ಕಾಣಿಸುತ್ತವೆ.

ಈ ಊರು ತುಂಬಾ ಬರೇ ಹುಳುಗಳು. ಅಂಗಳ, ಹಿತ್ತಲು ,ಮರ,  ಗಿಡ, ಬಳ್ಳಿ ಹೂವು ಎಲ್ಲಿ ಕಣ್ಣಾಡಿಸಿದರೂ ಅದೇ ಹುಳುಗಳ ರಾಶಿ. ಕೆ.ಜಿಗಟ್ಟಲೆ ಹುಳುಗಳನ್ನು ನಾಶಮಾಡಿದರೆ ಮರುದಿನ ಲೋಡುಗಟ್ಟಲೆ ಹುಳು ಮನೆಯಂಗಳದಲ್ಲಿ ಬಂದು ಬೀಳುತ್ತಿದೆ. ಉಡುಪಿ ಜಿಲ್ಲೆ , ಪರ್ಕಳ ದೇವಿ ನಗರದ ನಿವಾಸಿಗಳು ಶಂಖದ ಹುಳುವಿನ ರಂಪಾಟಕ್ಕೆ ರೋಸಿ ಹೋಗಿದ್ದಾರೆ.

ಹಾಲಿವುಡ್ ಸಿನಿಮಾಗಳಲ್ಲಿ ರಾಶಿರಾಶಿ ಹುಳುಗಳು ಊರಿಗೆ ದಾಳಿಯಿಡುವ ಭಯಾನಕ ದೃಶ್ಯಗಳನ್ನು ನೋಡಿದ್ದೇವೆ. ಉಡುಪಿ ಜಿಲ್ಲೆಯ ಪರ್ಕಳದ ದೇವಿ ನಗರದಲ್ಲಿ ಹೆಚ್ಚುಕಮ್ಮಿ ಅದೇ ಪರಿಸ್ಥಿತಿ ಉಂಟಾಗಿದೆ. ಈ ಊರಿನ ಬೀದಿ ಬೀದಿಯಲ್ಲೂ ಶಂಕದ ಹುಳುವಿನ ರಾಶಿರಾಶಿ ಕಾಣಸಿಗುತ್ತಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಹುಳುವಿನ ಬಾಧೆ ವಿಪರೀತವಾಗಿದ್ದರೂ, ಈ ಬಾರಿಯಷ್ಟು ಹುಳುಗಳು ಯಾವತ್ತೂ ದಾಳಿ ಇಟ್ಟಿರಲಿಲ್ಲ. ನಿಶಾಚರಿಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆ ಗಂಟಿ ಮಲಗಿಬಿಡುತ್ತವೆ, ಇಲ್ಲವೇ ಭೂಗತವಾಗಿ ಕಣ್ಮರೆಯಾಗುತ್ತವೆ. ಆದರೆ ರಾತ್ರಿಯಾದರೆ ಸಾಕು ಆಕ್ಟಿವ್ ಆಗ್ತಾವೆ. ಮುದುಡಿ ಮಲಗಿದರೆ ಒಂದಿಂಚು ಅಗಲದ ಈ ಹುಳು.. ಎಳೆದಷ್ಟು ಉದ್ದಕ್ಕೆ ಬಿಚ್ಚಿಕೊಳ್ಳುತ್ತದೆ.

ನೂತನ ಲೋಕಾಯಕ್ತರಾಗಿ ನಿವೃತ್ತ ನ್ಯಾ.ಬಿಎಸ್ ಪಾಟೀಲ್ ನೇಮಕ, ನಾಳೆ ಪ್ರಮಾಣವಚನ!

ಮೈಯೆಲ್ಲಾ ಅಂಟು,  ಕೆಟ್ಟವಾಸನೆ ಪ್ರತಿದಿನ ಮನೆ ಸುತ್ತಲೂ ಹುಳುಗಳ ರಾಶಿ ಕಂಡು ಜನ ರೋಸಿ ಹೋಗಿದ್ದಾರೆ. ಮಳೆಗಾಲದ ತೇವಾಂಶ ಕ್ಕೆ ಮೇಲಕ್ಕೆ ಬರುವ ಹುಳುಗಳು ಉಳಿದ ಕಾಲದಲ್ಲಿ ಭೂಮಿಯಡಿ ಹುದುಗಿರುತ್ತಂತೆ. ಈ ಶಂಖದ ಹುಳು ಅಥವಾ ಬಸವನ ಹುಳುವನ್ನು ಆಫ್ರಿಕನ್ ಜಯಂಟ್ ಸ್ನೈಲ್ ಎಂದು ಕರೆಯಲಾಗುತ್ತೆ. ಇದು ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿ ಉಂಟು ಮಾಡುವ ಬಗ್ಗೆ ಸ್ಥಳೀಯರಲ್ಲಿ ಆತಂಕಿತರಾಗಿದ್ದಾರೆ‌.

ಮನೆಗಳ ಗೋಡೆ, ತೆಂಗಿನಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿ ಹುಳಗಳು ಹರಿದಾಡುತ್ತಿವೆ. ಅಲ್ಲದೆ ಮನೆಯ ಒಳಗೂ ಇವುಗಳು ಸಂಚರಿಸುತ್ತಿವೆ. ಇವು ದ್ವಿಲಿಂಗಗಳಾಗಿದ್ದು, ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿಹುಳುಗಳು ಹೊರ ಬರುತ್ತವೆ. 

ಅನೈತಿಕ ಚಟುವಟಿಕೆಗಳ ತಾಣವಾದ Arkavathy Layout

ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಇದರ ಜೀವಿತಾವಧಿ 3-5ವರ್ಷಗಳಾಗಿವೆ. ಮಳೆಗಾಲದಲ್ಲಿ  ಎಲೆಗಳು, ಕಾಂಡ, ಹಣ್ಣು ಹಾಗೂ ಹೂವು ಗಳನ್ನು ತಿಂದು ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎನ್ನುತ್ತಾರೆ ಕೀಟ (Insect) ತಜ್ಞರು. ಹುಳುಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವನ್ನು ಒದಗಿಸದೆ ತೋಟ ಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡಬೇಕು. ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಿಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು. ಮೊದಲ ಹಂತದಲ್ಲಿಯೇ ಇವುಗಳನ್ನು ಹಿಡಿದು ನಾಶಪಡಿಸುವುದು ಪರಿಣಾಮಕಾರಿ ಯಾಗಿದೆ. 

ಕಳೆದ ಮೂರು ದಿನಗಳ ಹಿಂದೆ ಮುಂಗಾರು ಆಗಮನದ ಸೂಚನೆ ಇತ್ತು. ಹಗಲೆಲ್ಲಾ ಮೋಡ ಕವಿದು ರಾತ್ರಿ ಮಳೆಯಾಗುತ್ತಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಹವಾಮಾನ ಬದಲಾಗಿದೆ. ಇಡೀ ದಿನ ರಣಬಿಸಿಲು ಹೊಡೆಯುತ್ತಿದೆ. ಮಣ್ಣಿನಡಿ ಅವಿತು ಕುಳಿತಿರುವ ಹುಳುಗಳು, ರಾತ್ರಿಯಾದ ನಂತರ ಹೊರಬರುತ್ತಿವೆ.

Hubballi Kims ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಬ್ಲೀಚಿಂಗ್ ಪುಡಿ/ಸುಣ್ಣದ ಪುಡಿಯನ್ನು ದೂಳೀಕರಿಸಿ ಹುಳುಗಳನ್ನು ನಾಶಮಾಡಬಹುದು. ಇದೀಗ ನಗರದ ನಿವಾಸಿಗಳು ಪ್ರತಿದಿನ ಗೋಣಿ ತುಂಬಾ ಹುಳುಗಳನ್ನು ತೆಗೆದರೂ, ಮತ್ತೆ ಮತ್ತೆ ಬಂದು ರಾಶಿ ಬೀಳುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಔಷಧಿ ಸಿಂಪಡಿಸುವ ಮೂಲಕ ಈ ಹುಳುಬಾಧೆ ಇಂದ ಜನರಿಗೆ ಮುಕ್ತಿ ನೀಡಬೇಕಾಗಿದೆ.

click me!