ಚಿತ್ರದುರ್ಗ: ಕೆರೆ ಪಕ್ಕದಲ್ಲೇ ರಾಶಿ ರಾಶಿ ಕಸ, ದುರ್ವಾಸನೆ ತಾಳದೆ ಮೂಗು ಮುಚ್ಚಿ ಓಡಾಡ್ತಿರೋ ಜನ..!

By Girish Goudar  |  First Published Dec 10, 2023, 4:28 PM IST

ಇಡೀ ನಗರದ ಜನರು ಉಪಯೋಗಿಸುವ ರಾಶಿ ರಾಶಿ ಕಸವನ್ನು ಹಾಗೂ ಕೆರೆಯಿಂದ ಊಳೆತ್ತಿರುವ ಕಸವನ್ನು ರಸ್ತೆಯ ಪಕ್ಕದಲ್ಲೇ ಹಾಕಿರೋದ್ರಿಂದ ನಿತ್ಯ ಓಡಾಡುವವರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಗ್ತಿದೆ. ಅಲ್ಲದೇ ಎರಡು ಹಂದಿಗಳು ಸತ್ತು ಹೋಗಿದ್ರು ಅವುಗಳನ್ನು ಇಲ್ಲೇ‌ ಬಿಸಾಡಿ‌ ಹೋಗಿರೋದು ವಾಹನ ಸವಾರರಿಗೆ ಸಾಕಷ್ಟು ಹಿಂಸೆ ಆಗ್ತಿದೆ. 


ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಡಿ.10):  ಕೆರೆ ಹೂಳೆತ್ತುವುದು ಎಷ್ಟು ಮುಖ್ಯವೋ ಅ ಕಸವನ್ನು ಬೇರೆಡೆ ಹಾಕುವುದು ಅಷ್ಟೇ ಪ್ರಮುಖವಾಗಿರುತ್ತದೆ. ಆದ್ರೆ ಇಲ್ಲೊಂದು ಕೆರೆ ಪಕ್ಕದಲ್ಲೇ ರಾಶಿ ರಾಶಿ ಕಸ ಸುರಿದು ರಸ್ತೆಯಲ್ಲಿ ಓಡಾಡುವ ಜನರಿಗೆ ನಿತ್ಯ ಕಿರಿಕಿರಿ ಉಂಟು ಮಾಡ್ತಿರುವ ಘಟನೆ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ...., ಹೀಗೆ ಕೆಟ್ಟ ದುರ್ವಾಸನೆಯನ್ನು ತಾಳಲಾರದೇ ಮೂಗು ಮುಚ್ಚಿಕೊಂಡೇ ಓಡಾಡ್ತಿರುವ ಜನರು. ಮತ್ತೊಂದೆಡೆ ರಾಶಿ ರಾಶಿ ಕಸದ ಮಧ್ಯೆಯೇ ಸತ್ತು ಬಿದ್ದಿರೋ ಹಂದಿಗಳ ಕೆಟ್ಟ ದುಸ್ಥಿತಿ ಇರುವ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಕೂದಲೆಳೆ ಅಂತರದಲ್ಲಿ ಇರುವ ಮಲ್ಲಾಪುರ ಗ್ರಾಮದ ಬಳಿ. 

Tap to resize

Latest Videos

undefined

ಇಡೀ ನಗರದ ಜನರು ಬಳಸುವ ನೀರೆಲ್ಲಾ ಬಂದು ಸೇರುವ ಜಾಗ ಈ ಮಲ್ಲಾಪುರ ಕೆರೆ. ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ-೧೩ ರಸ್ತೆ ಹಾದು ಹೋಗಿದ್ದು, ಇಡೀ ನಗರದ ಜನರು ಉಪಯೋಗಿಸುವ ರಾಶಿ ರಾಶಿ ಕಸವನ್ನು ಹಾಗೂ ಕೆರೆಯಿಂದ ಊಳೆತ್ತಿರುವ ಕಸವನ್ನು ರಸ್ತೆಯ ಪಕ್ಕದಲ್ಲೇ ಹಾಕಿರೋದ್ರಿಂದ ನಿತ್ಯ ಓಡಾಡುವವರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಗ್ತಿದೆ. ಅಲ್ಲದೇ ಎರಡು ಹಂದಿಗಳು ಸತ್ತು ಹೋಗಿದ್ರು ಅವುಗಳನ್ನು ಇಲ್ಲೇ‌ ಬಿಸಾಡಿ‌ ಹೋಗಿರೋದು ವಾಹನ ಸವಾರರಿಗೆ ಸಾಕಷ್ಟು ಹಿಂಸೆ ಆಗ್ತಿದೆ. ಮಲ್ಲಾಪುರ ಕೆರೆ ಹತ್ತಿರ ಬರ್ತಿದ್ದಂತೆ ಮೂಗು ಮುಚ್ಚಿಕೊಂಡು ಉಸಿರು ಬಿಗಿ ಹಿಡಿದು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾದರೆ ಯಾರು ಹೊಣೆ ಎಂದು ಸ್ಥಳೀಯರಾದ ಕಾಂತರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ: ಇಬ್ಬರು ಮಕ್ಕಳನ್ನು ತೊಟ್ಟಿಯಲ್ಲಿ ಮುಳುಗಿಸಿ ಕೊಂದು ತಾಯಿಯೂ ಆತ್ಮಹತ್ಯೆ

ನಿತ್ಯ ಈ‌ ರಸ್ತೆಯಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಈ ರೀತಿ ಕಸವನ್ನೆಲ್ಲಾ ಒಂದೆಡೆ ತಂದು ಹಾಕೋದ್ರಿಂದ‌ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. ಈ ಭಾಗದಲ್ಲಿ ಓಡಾಡುವ ಜನರಿಗೆ ಇದೊಂದೆ ಮಾರ್ಗ ಇರುವುದು, ಅದ್ಯಾವ ಪುಣ್ಯತ್ಮರು ಈ‌ ರೀತಿ ಕಸದ ರಾಶಿಯನ್ನು ತಂದು ಸುರಿದು ಹೋಗಿದ್ದಾರೋ ಗೊತ್ತಿಲ್ಲ. ಆದ್ರೆ ಇದ್ರಿಂದ ನಿತ್ಯ ಸಂಚರಿಸುವ ನಮಗೆ ಸಾಕಷ್ಟು ತೊಂದರೆ ಆಗ್ತಿದೆ. ಇಷ್ಟೆಲ್ಲಾ ಸಮಸ್ಯೆ ಕಣ್ಮುಂದೆ ಇದ್ರು ನಗರಸಭೆ ಅಧಿಕಾರಿಗಳಿ ಇತ್ತ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ. ಜನರ ಆರೋಗ್ಯದಲ್ಲಿ ಏರುಪೇರು ಆಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು ರಾಶಿ ಕಸವನ್ನು ತೆರವುಗೊಳಿಸಬೇಕಿದೆ ಎಂದು ರೈತ ಮುಖಂಡ ರಂಗೇಗೌಡ ಆಗ್ರಹಿಸಿದರು.

ತಮ್ಮ ಮನೆಯ ಅಂಗಳ ಚೆನ್ನಾಗಿರಬೇಕೆಂದು ಸ್ವಚ್ಚವಾಗಿ ಇಟ್ಟಕೊಳ್ಳೋ‌ ಜನರು, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಈ ರೀತಿ ಕಸ ಹಾಕುವುದು ತಪ್ಪು ಎಂದು ಯಾಕೆ ಅರ್ಥ ‌ಮಾಡಿಕೊಳ್ಳುವುದಿಲ್ಲ ಎನ್ನುವುದೇ ಬೇಸರದ ಸಂಗತಿ. ಅಧಿಕಾರಿಗಳಾದ್ರು ಕೂಡಲೇ ಇದಕ್ಕೆ ಸೂಕ್ತ ಪರಿಹಾರ ಒದಗಿಸಲಿ ಎಂಬುದು ನಮ್ಮ ಕಳಕಳಿ....

click me!