ಅರ್ಜುನ‌ನ್ನ ಕಳೆದುಕೊಂಡಿದ್ದು ದುಃಖಕರ: ಸಚಿವ ಈಶ್ವರ ಖಂಡ್ರೆ

By Girish GoudarFirst Published Dec 10, 2023, 3:05 PM IST
Highlights

ಬಾಹ್ಯ ಮರಣೋತ್ತರ ಪರೀಕ್ಷೆ ಆಗಿದೆ ಅಲ್ಲಿ ಗುಂಡು ತಗುಲಿದ ಬಗ್ಗೆ ಮಾಹಿತಿ ಇಲ್ಲ. ಎಸ್ ಓ ಪಿ ಅಪ್ಡೇಡ್ ಆಗ ಬೇಕಿದೆ ಈ ಬಗ್ಗೆ ಕೂಡ ಕ್ರಮ ವಹಿಸುತ್ತೇವೆ. ಖಂಡಿತ ಈ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲಿದೆ ಎಂದ ಸ್ಪಷ್ಟಪಡಿಸಿದ ಸಚಿವ ಈಶ್ವರ ಖಂಡ್ರೆ

ಹಾಸನ(ಡಿ.10):  ಅರ್ಜುನ‌ನ್ನ ಕಳೆದುಕೊಂಡಿದ್ದು ದುಃಖಕರ, 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ನೋವು ತರಿಸಿದೆ. ಹುಲಿ ಆನೆ ಚಿರತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಅರ್ಜುನ ಬಹಳಷ್ಟು ಜನರ ಪ್ರಾಣ ಉಳಿಸಿದ್ದನು. ಅರ್ಜುನನಿಗೆ ನಾವು ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಈ ಸ್ಥಳ ಹಾಗೂ ಬಳ್ಳೆಯಲ್ಲಿ ಸ್ಮಾರಕ ಮಾಡುತ್ತೇವೆ. ಅರ್ಜುನನ ಶೌರ್ಯದ ಬಗ್ಗೆ ಸ್ಮಾರಕದಲ್ಲಿ ಇಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. 

ಇಂದು(ಭಾನುವಾರ) ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, ಕಾರ್ಯಾಚರಣೆ ಅತ್ಯಂತ ಅಪಾಯವಾದದ್ದು, ಈ ಭಾಗದಲ್ಲಿ ಸಾಕಷ್ಟು ಆನೆಗಳು ಬೆಳೆ ನಾಶ ಮಾಡಿವೆ. ಚಿಕ್ಕಮಗಳೂರಿನಲ್ಲಿ ಎರಡು ಜನ ಬಲಿಯಾಗಿದ್ದಾರೆ. ಹಾಗಾಗಿ ಆನೆ ಸೆರೆ ಹಿಡಿಯಲು ಸಾಕಷ್ಟು ಒತ್ತಡ ಇತ್ತು.  ನವೆಂಬರ್ 24 ರಿಂದ ಕಾರ್ಯಾಚರಣೆ ಆರಂಭ ಆಗಿತ್ತು. ನಮ್ಮ ಅಧಿಕಾರಿಗಳು ಎಲ್ಲಾ ಮಾನದಂಡ ಅನುಸರಣೆ ಮಾಡಿದಾರೆ. ಪುಂಡಾನೆ ಸೆರೆ ವೇಳೆ ಆನೆ ಏಕಾಏಕಿ ದಾಳಿ ಮಾಡಿದೆ. ಹಾಗಾಗಿ ಈ ಘಟನೆ ನಡೆದಿದೆ. ಆದರೂ ಕೆಲವರು ಘಟನೆ ಬಗ್ಗೆ ಸಾಕಷ್ಟು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಗೆ ಅರವಳಿಕೆ ಮದ್ದು ಬಿದ್ದಿದೆ, ಅರ್ಜುನನಿಗೆ ಗುಂಡು ತಗುಲಿದೆ ಎಂದು ಆರೋಪ ಇದೆ. ನಿವೃತ್ತ ಹಿರಿಯ ಅಧಿಕಾರಿ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಕ ಆಗಿದೆ ಅದರಂತೆ ತನಿಖೆ ಆಗಿದೆ ಎಂದು ತಿಳಿಸಿದ್ದಾರೆ. 

ಸಕಲೇಶಪುರ: ಸಿಸಿ ಕ್ಯಾಮೆರಾದ ಕಣ್ತಪ್ಪಿಸಿ ಹಸು ತಿಂದ ಚಿರತೆ

ಬಾಹ್ಯ ಮರಣೋತ್ತರ ಪರೀಕ್ಷೆ ಆಗಿದೆ ಅಲ್ಲಿ ಗುಂಡು ತಗುಲಿದ ಬಗ್ಗೆ ಮಾಹಿತಿ ಇಲ್ಲ. ಎಸ್ ಓ ಪಿ ಅಪ್ಡೇಡ್ ಆಗ ಬೇಕಿದೆ ಈ ಬಗ್ಗೆ ಕೂಡ ಕ್ರಮ ವಹಿಸುತ್ತೇವೆ. ಖಂಡಿತ ಈ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲಿದೆ ಎಂದ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. 

click me!