ಕುಶಾಲನಗರ: ಸ್ಮಶಾನಕ್ಕೂ ನುಗ್ಗಿದ ಪ್ರವಾಹ ನೀರು, ಅಂತ್ಯಸಂಸ್ಕಾರಕ್ಕೆ ಪರದಾಟ

By Kannadaprabha News  |  First Published Jul 25, 2023, 1:40 PM IST

ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.


ಕುಶಾಲನಗರ(ಜು.25):  ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದ ಮಹಿಳೆ ಮೃತಪಟ್ಟಿದ್ದು ಕಾವೇರಿ ಪ್ರವಾಹದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಗೆ ಪರದಾಡುವ ಪರಿಸ್ಥಿತಿ ಎದುರಾಯಿತು.

ಹಕ್ಕೆ ಗ್ರಾಮದ ಮಹಿಳೆ ಮಂಚಮ್ಮ (76 ) ಭಾನುವಾರ ರಾತ್ರಿ ಮೃತಪಟ್ಟಿದ್ದು ಗ್ರಾಮದ ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

Tap to resize

Latest Videos

undefined

ಮಂಗಳೂರು: ಪ್ರವಾಹದಲ್ಲೇ ಸಾಗಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು!

ಈ ಬಗ್ಗೆ ತಹಸೀಲ್ದಾರ್‌ ಗಮನ ಸೆಳೆಯಲಾಯಿತು. ನಂತರ ಸ್ಥಳೀಯ ಗ್ರಾಮ ಲೆಕ್ಕಿಗರು ನೊಂದವರ ಮನೆಗೆ ತೆರಳಿ ಬದಲಿ ಜಾಗಕ್ಕೆ ಕ್ರಮ ಕೈಗೊಂಡಿದ್ದು ಕೂಡಿಗೆ ಗ್ರಾಮದ ವ್ಯಾಪ್ತಿಯ ನದಿ ತಟದಲ್ಲಿ ಅಂತ್ಯಕ್ರಿಯೆ ನಡೆಯಿತು.

click me!