ಕಾಂಗ್ರೆಸ್‌ ನಾಯಕರ ಸುಳ್ಳು ಆಶ್ವಾಸನೆ ಜನ ನಂಬಲ್ಲ

By Kannadaprabha News  |  First Published Nov 8, 2022, 1:25 PM IST
  • ಕಾಂಗ್ರೆಸ್‌ ನಾಯಕರ ಸುಳ್ಳು ಆಶ್ವಾಸನೆ ಜನ ನಂಬಲ್ಲ
  • ಕುಕನೂರು ತಾಲೂಕಿನ ವಿವಿಧೆಡೆ ಕಾಮಗಾರಿಗೆ ಸಚಿವ ಹಾಲಪ್ಪ ಆಚಾರ ಚಾಲನೆ

ಕುಕನೂರು (ನ.7) : ಕ್ಷೇತ್ರದ ಕಾಂಗ್ರೆಸ್‌ ನಾಯಕರ ಸುಳ್ಳು ಆಶ್ವಾಸನೆ, ಭರವಸೆಗೆ ಜನ ರೋಸಿದ್ದಾರೆ. ಚುನಾವಣೆ ವೇಳೆಯಲ್ಲಿ ಬಂದು ಡಬ್ಬಿ ಬಾರಿಸುವ ಅವರ ಕಾರ್ಯವೈಖರಿಗೆ ಮತದಾರರೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.

ಧಾರವಾಡದ ಎಫ್‍ಎಂಸಿಜಿ ಘಟಕ ದೇಶದ ಆರ್ಥಿಕತೆ ಬದಲಿಸುವಲ್ಲಿ ಪ್ರಮುಖ ಪಾತ್ರ: ಸಚಿವ ಆಚಾರ್‌

Tap to resize

Latest Videos

undefined

ತಾಲೂಕಿನ ಬೆದವಟ್ಟಿ, ಯಡಿಯಾಪುರ, ಬಳಗೇರಿ, ನಿಂಗಾಪುರ, ದ್ಯಾಂಪೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಬರ ಬಿದ್ದರೆ ಕ್ಷೇತ್ರದ ಜನ ಮಂಗಳೂರು, ಗೋವಾಕ್ಕೆ ದುಡಿಯಲು ಹೋಗುತ್ತಾರೆ. ಅದನ್ನು ಹೋಗಲಾಡಿಸಲು ರೈತರಿಗೆ ನೀರು ನೀಡಬೇಕೆಂದು ಶಪಥ ಮಾಡಿ ನೀರಾವರಿ ಯೋಜನೆ ಜಾರಿಗೆ ತಂದಿದ್ದೇವೆ. ಕೆಲವೇ ತಿಂಗಳಲ್ಲಿ ಯಲಬುರ್ಗಾ ಕ್ಷೇತ್ರದ ಭೂರಮೆಗೆ ಕೃಷ್ಣೆಯ ನೀರು ಬರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ರೈತರ ಕಷ್ಟನೀಗಲಿದೆ ಎಂದರು.

ರೈತರ ಕಷ್ಟಅರ್ಥ ಮಾಡಿಕೊಳ್ಳದೆ ಬೆಂಗಳೂರಿನಲ್ಲಿ ವಾಸವಿರುವ ಮಾಜಿ ಸಚಿವ ಬಸವರಾಜ ರಾಯರಡ್ಡಿ ನೀರಾವರಿ ಯೋಜನೆಯನ್ನು ಅಡ್ಡಗಲ್ಲು ಎಂದು ಜರಿದಿದ್ದರು. ಹಿಂದೆ ಜರಿದಿದ್ದ ಅವರು ಈಗ ನೀರಾವರಿ ಯೋಜನೆ ನಾನೇ ಮಾಡುತ್ತಿದ್ದೇನೆ ಎಂದು ಹೇಳುವುದು ಎಷ್ಟುಸರಿ? ಚುನಾವಣೆ ವೇಳೆಯಲ್ಲಿ ಡಬ್ಬಿ ಬಾರಿಸಿಕೊಂಡು ಬರುವ ಕಾಂಗ್ರೆಸ್‌ ನಾಯಕರಿಗೆ ಮತದಾರರೇ ಉತ್ತರ ನೀಡಬೇಕು ಎಂದರು.

ಬಿಜೆಪಿ ಮುಖಂಡ ಕೊಟ್ರಪ್ಪ ತೋಟದ ಮಾತನಾಡಿ, ಸಚಿವ ಹಾಲಪ್ಪ ಆಚಾರ ಅವರು ಗ್ರಾಮಗಳ ಅಭಿವೃದ್ಧಿ, ನೀರಾವರಿಗೆ, ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಯ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಒಳರಸ್ತೆ ನಿರ್ಮಿಸಿ ರೈತ ವರ್ಗಕ್ಕೆ ಅನುಕೂಲವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಬೆಂಬಲ ವ್ಯಕ್ತಪಡಿಸೋಣ ಎಂದರು.

ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ಇಒ ರಾಮಣ್ಣ ದೊಡ್ಮನಿ, ಸಿಡಿಪಿಒ ಸಿಂಧು ಯಲಿಗಾರ, ತಾಪಂ ಮಾಜಿ ಉಪಾಧ್ಯಕ್ಷರಾದ ಶಿವಕುಮಾರ ನಾಗಲಾಪೂರಮಠ, ವಿಶ್ವನಾಥ ಮರಿಬಸಪ್ಪನವರ, ಶಿವಪ್ಪ ವಾದಿ, ಈಶಪ್ಪ ಆರೇರ, ತಾಪಂ ಮಾಜಿ ಅಧ್ಯಕ್ಷ ಜಗನ್ನಾಥ ಗೌಡ, ಮಲ್ಲಿಕಾರ್ಜುನ ಹುಲ್ಲೂರು, ಪಪಂ ಸದಸ್ಯ ಮಲ್ಲಿಕಾರ್ಜುನ ಚೌದ್ರಿ, ಶರಣಗೌಡ, ಲಿಂಗನಗೌಡ ಇನಾಮತಿ, ದತ್ತನಗೌಡ ಪಾಟೀಲ, ಮೇಘರಾಜ ನಾಯಕ, ಎಂಜಿನಿಯರ್‌ಗಳಾದ ಐ.ಎಸ್‌. ಹೊಸೂರು, ಅನಿಲ ಪಾಟೀಲ, ಗ್ರಾಪಂ ಅಧ್ಯಕ್ಷರಾದ ಸುಶೀಲಮ್ಮ ವಿರಕ್ತಮಠ, ಬಿಬಿಜಾನ್‌, ಶಾಂತಮ್ಮ ಆಲೂರು, ಮಹೇಶ ದೊಡ್ಮನಿ, ಮುಖಂಡರಾದ ಶ್ರೀನಿವಾಸ ತಿಮ್ಮಾಪೂರ, ಮಾರುತಿ ಗಾವರಾಳ, ನಾಗರಾಜ ವೆಂಕಟಾಪೂರ ಇತರರು ಇದ್ದರು.

 

ನೀರಾವರಿಗೆ ಯೋಜನೆಗಳಿಗೆ ಕಾಂಗ್ರೆಸ್‌ ದ್ರೋಹ: ಸಚಿವ ಹಾಲಪ್ಪ ಆಚಾರ್‌

ವಿವಿಧ ಕಾಮಗಾರಿಗೆ ಚಾಲನೆ

.80 ಲಕ್ಷದಲ್ಲಿ ತಿಪ್ಪರಸನಾಳ, ಬೆದವಟ್ಟಿ, ಶಿರೂರು ರಿಂಗ್‌ ರಸ್ತೆ ಮರುಡಾಂಬರೀಕರಣ ಹಾಗೂ ಸಿಡಿ ರಸ್ತೆ ನಿರ್ಮಾಣ, .20 ಲಕ್ಷ ವೆಚ್ಚದಲ್ಲಿ ಬೆದವಟ್ಟಿಯಲ್ಲಿ ಸಿಸಿ ರಸ್ತೆ ಕಾಮಗಾರಿ, .11 ಲಕ್ಷದಲ್ಲಿ ಬೆದವಟ್ಟಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, .30 ಲಕ್ಷದಲ್ಲಿ ಯಡಿಯಾಪೂರದಿಂದ ಬೂದಗುಂಪಾದವರೆಗೆ ಸಿಸಿ ರಸ್ತೆ ಕಾಮಗಾರಿ, .12 ಲಕ್ಷದಲ್ಲಿ ಯಡಿಯಾಪೂರದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, .1 ಕೋಟಿಯಲ್ಲಿ ಯಡಿಯಾಪೂರದಿಂದ ಬಳಗೇರಿವರೆಗೆ ರಸ್ತೆ ನಿರ್ಮಾಣ, .25 ಲಕ್ಷದಲ್ಲಿ ಬಳಗೇರಿಯಲ್ಲಿ ಸಿಸಿ ರಸ್ತೆ ಕಾಮಗಾರಿ, .11 ಲಕ್ಷದಲ್ಲಿ ಬಳಗೇರಿಯಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ, .60 ಲಕ್ಷದಲ್ಲಿ ನಿಂಗಾಪೂರ ಗ್ರಾಮಕ್ಕೆ ರಸ್ತೆ ನಿರ್ಮಾಣ, .1.5 ಕೋಟಿಯಲ್ಲಿ ನಿಂಗಾಪೂರದಿಂದ ಮಸಬಹಂಚಿನಾಳದವರೆಗೆ ರಸ್ತೆ ನಿರ್ಮಾಣ, .4.75 ಕೋಟಿಯಲ್ಲಿ ಮುಧೋಳ ದ್ಯಾಂಪೂರು ರಸ್ತೆ ಸುಧಾರಣೆ, .2 ಕೋಟಿಯಲ್ಲಿ ಮೂಧೋಳ ದ್ಯಾಂಪೂರದವರೇಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಸಚಿವ ಹಾಲಪ್ಪ ಆಚಾರ ಭೂಮಿಪೂಜೆ ನೆರವೇರಿಸಿದರು.

click me!