ಆರೋಗ್ಯ ತಪಾಸಣೆಗೆ ಮುಗಿಬಿದ್ದ ಬಿದ್ದ ಜನತೆ: ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌..!

Suvarna News   | Asianet News
Published : May 04, 2020, 01:16 PM ISTUpdated : May 18, 2020, 06:18 PM IST
ಆರೋಗ್ಯ ತಪಾಸಣೆಗೆ ಮುಗಿಬಿದ್ದ ಬಿದ್ದ ಜನತೆ: ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌..!

ಸಾರಾಂಶ

ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆರೋಗ್ಯ ತಪಾಸಣೆಗೆ ಮುಗಿಬಿದ್ದ ಜನತೆ| ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ| ಮಾಸ್ಕ್‌ ಹಾಕಿಕೊಳ್ಳದೆ ಆಸ್ಪತ್ರೆಗೆ ಬಂದ ಜನರು| ಆರೋಗ್ಯ ತಪಾಸಣೆಗೆ ಪೈಪೋಟಿ ಜನತೆ|  

ಗಂಗಾವತಿ (ಮೇ.04): ಮಾರಕ ಕೊರೋನಾ ಆತಂಕದ ಮಧ್ಯೆಯೇ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆರೋಗ್ಯ ತಪಾಸಣೆಗೆ ಮುಗಿಬಿದ್ದ ಘಟನೆ ನಗರದ ಉಪ ವಿಭಾಗದ ಸರಕಾರಿ ಆಸ್ಪತ್ರೆಯಲ್ಲಿ ಇಂದು(ಸೋಮವಾರ) ನಡೆದಿದೆ. 

ದಿನ ನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಈಗ ರೋಗಿಗಳು ಆರೋಗ್ಯ ತಪಾಸಣೆಗೆ ಪೈಪೋಟಿ  ನಡೆಸುತ್ತಿರುವುದು ಒಂದಾಗಿದ್ದರೆ ಎಷ್ಟೋ ರೋಗಿಗಳು ಮಾಸ್ಕ್‌ ಹಾಕಿಕೊಳ್ಳದೆ ಆಸ್ಪತ್ರೆಗೆ ಬಂದಿದ್ದಾರೆ.

ಗುಜರಾತ್‌ನಲ್ಲಿ ಸಿಲುಕಿದ ಕೊಪ್ಪಳದ ಗುಜರಿ ವ್ಯಾಪಾರಿಗಳು: ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ

ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಬೇರೇ ಬೇರೆ ನಗರಗಳಿಂದ  ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಕಾರ್ಮಿಕರು  ಆಗಮಿಸುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ತಪಾಸಣೆಯನ್ನು ತಾಲೂಕ ಆಡಳಿತ ನಡೆಸಿದೆ. ಆದರೆ ಈ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ ಇಲ್ಲದೇ ಇರುವುದಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಲ್ಲಿ ಆತಂಕ ಉಂಟಾಗಿದೆ.ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ನಗರ ಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ ಅವರು ಒತ್ತಾಯಿಸಿದ್ದಾರೆ. 
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು