ಇಂದಿನಿಂದ ಅನ್‌ಲಾಕ್ 1.0 ಶುರುವಾಗಿದೆ. ಆರ್ಥಿಕ ಚಟುವಟಿಕೆಗಳು ಆರಂಭವಾಗಿದೆ. ಉಡುಪಿಯಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ.
ಬೆಂಗಳೂರು (ಮೇ. 04): ಇಂದಿನಿಂದ ಅನ್‌ಲಾಕ್ 1.0 ಶುರುವಾಗಿದೆ. ಆರ್ಥಿಕ ಚಟುವಟಿಕೆಗಳು ಆರಂಭವಾಗಿದೆ. ಉಡುಪಿಯಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಮದ್ಯ ಮಾರಾಟಕ್ಕೂ 1 ಗಂಟೆವರೆಗೆ ಮಾತ್ರ ಅವಕಾಶ ಖಾಸಗಿ ಬಸ್ ಸಂಚಾರ ಇರುವುದಿಲ್ಲ. ಉಡುಪಿ ಸದ್ಯ ಗ್ರೀನ್ ಝೋನ್‌ನಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
undefined
ಮಂಗಳೂರಿನಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಖಾಸಗಿ, ಸರ್ಕಾರಿ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾರು, ಬೈಕ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ರ ನಂತರ ಸಂಪೂರ್ಣ ಬಂದ್ ಆಗಲಿದೆ. ಬಾರ್ಡರ್‌ಗಳನ್ನು ಬಂದ್ ಮಾಡಿದೆ.
ದಾವಣಗೆರೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರಾವ ಸೇವೆಗಳು ಲಭ್ಯವಿಲ್ಲ. ಇಲ್ಲಿ ಪಾಸಿಟೀವ್ ಕೇಸ್‌ಗಳು ಕಂಡು ಬಂದಿದ್ದರಿಂದ ಜನನೇ ಹೊರಗೆ ಬರಲು ಆತಂಕಪಡುತ್ತಿದ್ದಾರೆ.
ಹಾಸನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಸ್ ಸಂಚಾರ ಆರಂಭವಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆಯುತ್ತಿವೆ. ಒಂದಷ್ಟು ವಿನಾಯಿತಿ ನೀಡಲಾಗಿದೆ.