ವಿಜಯಪುರ: ಕೊರೋನಾ ಬಗ್ಗೆ ಡೋಂಟ್‌ ಕೇರ್‌, ಕೂಡಗಿ ತಾಂಡಾದಲ್ಲಿ ಭರ್ಜರಿ ಜಾತ್ರೆ..!

Kannadaprabha News   | Asianet News
Published : Jul 18, 2020, 12:17 PM ISTUpdated : Jul 19, 2020, 08:11 AM IST
ವಿಜಯಪುರ: ಕೊರೋನಾ ಬಗ್ಗೆ ಡೋಂಟ್‌ ಕೇರ್‌, ಕೂಡಗಿ ತಾಂಡಾದಲ್ಲಿ ಭರ್ಜರಿ ಜಾತ್ರೆ..!

ಸಾರಾಂಶ

ಸ್ವಯಂ ಲಾಕ್‌ಡೌನ್‌ ಆಗಿದ್ದ ಗ್ರಾಮದಲ್ಲಿ ಭರ್ಜರಿ ಜಾತ್ರೆ| ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾದಲ್ಲಿ ನಡೆದ ಜಾತ್ರೆ|  ಜಾತ್ರೆಯ ನೆಪದಲ್ಲಿ ಬಾಡೂಟ ಸಿದ್ಧಪಡಿಸಿ ಗುಂಪು ಗುಂಪಾಗಿ ಸೇರಿ ಭೋಜನ ಮಾಡಿದ ಜನತೆ|

ವಿಜಯಪುರ(ಜು.18): ಕೊರೋನಾ ಮಧ್ಯೆ ಲಾಕ್‌ಡೌನ್‌ ನಿಯಮ ಗಾಳಿಗೆ ತೂರಿ ದುರ್ಗಾದೇವಿ ಹಾಗೂ ಸೇವಾಲಾಲ್‌ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿ ಖುಷಿ ಪಟ್ಟಿದ್ದಲ್ಲದೆ, ಬಾಡೂಟ ಸವಿದು ಭರ್ಜರಿಯಾಗಿ ಜಾತ್ರೆ ಆಚರಿಸಿದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾದಲ್ಲಿ ಶುಕ್ರವಾರ ನಡೆದಿದೆ. 

ಕೊರೋನಾ ಭೀತಿಯಿಂದ ಈ ತಾಂಡಾ ಜನರು ಗುರುವಾರವಷ್ಟೇ ಸ್ವಯಂ ಪ್ರೇರಿತರಾಗಿ ಲಾಕ್‌ಡೌನ್‌ ವಿಧಿಸಿಕೊಂಡಿದ್ದರು. 

ಇದೇನು ಕ್ವಾರಂಟೈನ್ ಕೇಂದ್ರವೇ, ಕಸದ ತೊಟ್ಟಿಯೇ! ಯಪ್ಪಾ ಗಬ್ಬು

ಆದರೆ ಈ ತಾಂಡಾದ ಜನರು ಜಾತ್ರೆಯ ನೆಪದಲ್ಲಿ ಬಾಡೂಟ ಸಿದ್ಧಪಡಿಸಿ ಗುಂಪು ಗುಂಪಾಗಿ ಸೇರಿ ಭೋಜನ ಮಾಡಿದ್ದಾರೆ. ಯಾರೊಬ್ಬರು ಮಾಸ್ಕ್‌ ಧರಿಸಿರಲಿಲ್ಲ. ಸಾಮಾಜಿಕ ಅಂತರ ಗಾಳಿಗೆ ತೂರಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
 

PREV
click me!

Recommended Stories

ಭದ್ರಾವತಿಯಲ್ಲಿ ನಾಳೆ ಅಭಿಮಾನಿಗಳಿಂದ ಡಾ. ರಾಜ್, ಪುನೀತ್ ದೇಗುಲ ಲೋಕಾರ್ಪಣೆ!
ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ: ಹಳೇ ಆರೋಪಿ ರಾಜಗಿರಿ ಕೈವಾಡ?