ಬಾಗಲಕೋಟೆ: ವಿದೇಶಿ ಪ್ರವಾಸಿಗನ ಮೇಲೆ ಮಾರಣಾಂತಿಕ ಹಲ್ಲೆ

By Web Desk  |  First Published Nov 19, 2019, 10:31 AM IST

ದೇಶ ನೋಡಲು ಬಂದ ವಿದೇಶಿ ಪ್ರವಾಸಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮಹಿಳೆ , ಮಕ್ಕಳೊಂದಿಗೆ ಅನುಚಿತ ವರ್ತನೆ ತೋರಿಸಿದ್ದಾನೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರವಾಸಿಗರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ.


ಬಾಗಲಕೋಟೆ(ನ.19): ದೇಶ ನೋಡಲು ಬಂದ ವಿದೇಶಿ ಪ್ರವಾಸಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮಹಿಳೆ , ಮಕ್ಕಳೊಂದಿಗೆ ಅನುಚಿತ ವರ್ತನೆ ತೋರಿಸಿದ್ದಾನೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರವಾಸಿಗರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ.

ಬಾಗಲಕೋಟೆಯಲ್ಲಿ ವಿದೇಶಿ ಪ್ರವಾಸಿಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಮಹಿಳೆ, ಮಕ್ಕಳೊಂದಿಗೆ ಕೆಟ್ಟದಾಗಿ ವರ್ತಿಸಿರುವುದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.

Tap to resize

Latest Videos

ವಿಜಯಪುರದಲ್ಲಿ ಭೂ ಕಂಪನ; ಕಲಬುರ್ಗಿಯಲ್ಲಿ ಭಾರಿ ಸದ್ದು

ಕುಡಿದ ಮತ್ತಿನಲ್ಲಿ ರಾತ್ರಿ ಗ್ರಾಮದೊಳಗೆ ಮಹಿಳೆ, ಮಕ್ಕಳೊಂದಿಗೆ ವಿದೇಶಿಗ ಅನುಚಿತ ವರ್ತನೆ ತೋರಿಸಿದ್ದು, ಆಸ್ಟ್ರೇಲಿಯಾದ ಪ್ರಜೆ ವಿಲಿಯಮ್ಸ್ ಜೇಮ್ಸ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಕೈ, ಕಾಲಿಗೆ ಹಗ್ಗ ಕಟ್ಟಿ ಧಳಿಸಿದ್ರು:

ಕೈಕಾಲಿಗೆ ಹಗ್ಗ ಕಟ್ಟಿ ವಿದೇಶಿ ಪ್ರವಾಸಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಕೆರೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿಗಳ ವಿಚಾರಣೆ ನಡೆದಿದೆ.

ಬಿಕಿನಿ ತೊಟ್ಟರೆ ಫ್ರೀ ಗ್ಯಾಸ್: ಬಂಕ್ ಮುಂದೆ ಗಂಡಸರ ಲೈನ್!

ಆಸ್ಟ್ರೇಲಿಯಾದಿಂದ ಸೆಪ್ಟೆಂಬರ್ 27ರಂದು ಕೊಚ್ಚಿಗೆ ಪ್ರವಾಸಕ್ಕೆ ಬಂದಿರೋ ವಿಲಿಯಮ್ ಜೇಮ್ಸ್ ಕೊಚ್ಚಿಯಿಂದ ಪ್ರವಾಸ ಮಾಡಿಕೊಂಡು ಬಾದಾಮಿಗೆ ತಲುಪಿದ್ದಾನೆ. ನಿನ್ನೆ ರಾತ್ರಿ ಬಾದಾಮಿಯಿಂದ ಬಸ್ ನಲ್ಲಿ ಬಾಗಲಕೋಟೆಗೆ ಹೋಗುವಾಗ ಕೊಂಕಣಕೊಪ್ಪದಲ್ಲಿ ವಿಲಿಯಮ್ ಜೇಮ್ಸ್ ಇಳಿದುಕೊಂಡಿದ್ದ. ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ವಿಲಿಯಮ್ ಜೇಮ್ಸ್ ಚೇತರಿಸಿಕೊಂಡಿದ್ದಾನೆ.

ಬೆಂಬಲ ಬಿಜೆಪಿಗೋ, ಕಾಂಗ್ರೆಸ್‌ಗೋ..? ಸುಮಲತಾ ನಡೆ ನಿಗೂಢ

click me!