ಮಾತಾಡಿದ್ದು ತಪ್ಪು, ಮಸಿ ಬಳಿದಿದ್ದು ತಪ್ಪು : ಪೇಜಾವರ ಶ್ರೀ

By Suvarna NewsFirst Published Feb 5, 2021, 3:46 PM IST
Highlights

ಚಿಂತಕ ಕೆಎಸ್‌ ಭಗವಾನ್ ಅವರ ಮುಖಕ್ಕೆ ವಕೀಲೆಯೋರ್ವರ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೇಜಾವರ ಮಠದ ಶ್ರೀವಿಶ್ವಪ್ರಸ್ನನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದರು.

ರಾಯಚೂರು (ಫೆ.05):  ಮೊದಲು ಕೆಎಸ್ ಭಗವಾನ್‌ ಅವರು ಪ್ರಚೋದನಕಾರಿ ಮಾತನಾಡಿದ್ದಾರೆ. ಈ ಕಾರಣಕ್ಕಾಗಿ ವಕೀಲೆಯೊಬ್ಬರು ಅವರ ಮುಖಕ್ಕೆ ಮಸಿ ಬಳಿದಿದ್ದಾರೆ.  ಅವರು ಮಾತನಾಡಿದ್ದು ತಪ್ಪು, ವಕೀಲರು ಕೋರ್ಟಿನಲ್ಲಿ ಮಸಿ ಬಳಿದಿದ್ದು ಸಹ ತಪ್ಪು. ಪ್ರಚಾರಕ್ಕಾಗಿ ದೇವರು, ಧರ್ಮದ ಬಗ್ಗೆ ಮಾತನಾಡಬಾರದು ಎಂದು ಪೇಜಾವರಮಠದ ಶ್ರೀವಿಶ್ವಪ್ರಸ್ನನ ತೀರ್ಥ ಸ್ವಾಮಿಗಳ ಹೇಳಿದರು. 

 ಬೆಂಗಳೂರಿನಲ್ಲಿ ಚಿಂತಕ ಕೆ ಎಸ್ ಭಗವಾನರಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು ಮಸಿ ಬಳಿದಿದ್ದು ತಪ್ಪು, ಮಾತನಾಡಿದ್ದು ತಪ್ಪು ಎಂದಿದ್ದಾರೆ. 

ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಹೋರಾಟ ನಡೆಯುತ್ತಿದೆ. ಅವರು ರೈತರೇ ಅಲ್ಲ, ರೈತರು ಹೊಲದಲ್ಲಿ ದುಡಿಯುತ್ತಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅವಮಾನ, ಖಲಿಸ್ತಾನದ ಪರವಾಗಿ ಘೋಷಣೆ ಮಾಡಿದವರು ಹೇಗೆ ರೈತರಾಗುತ್ತಾರೆ. ರಾಷ್ಟ್ರಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ ಎಂದರು. 

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆಗೆ ಸಂಕಷ್ಟ...!

ರಾಮ ಮಂದಿರ ನಿರ್ಮಾಣ ವೀಕ್ಷಣೆಗೆ ಅವಕಾಶ ನೀಡದ ಹಿನ್ನಲೆ ನಿರ್ಮಾಣ ಕಾರ್ಯದಲ್ಲಿ ಬೃಹತ್ ಯಂತ್ರಗಳು, ಶಿಲೆಗಳಿವೆ. ಹೀಗಾಗಿ ವೀಕ್ಷಣೆಗೆ ಅವಕಾಶ ಮೊದಲಿನಿಂದಲೂ ನೀಡಿಲ್ಲ. ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಕೆಲವು ಕಡೆ ಮುಗಿದಿದೆ. ಇನ್ನೂ ನೀಡುವವರು ಸಹ ಸಹಾಯ ಮಾಡಬಹುದು ಎಂದು ಪೇಜಾವರ ಶ್ರೀಗಳು ಹೇಳಿದರು.

ಇನ್ನು ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟದ ಬಗ್ಗೆ ಮಾತನಾಡಿದ ಶ್ರೀಗಳು ಜಾತಿವಾರು ಮೀಸಲಾತಿಗಿಂತ ಆರ್ಥಿಕ ಮೀಸಲಾತಿ ನೀಡಬೇಕು ಜಾತಿವಾರು ಮೀಸಲಾತಿ ಕೇಳುವುದು ತಪ್ಪು ಎಂದು ಹೇಳಿದರು. 

click me!